Friday, December 6, 2024

Latest Posts

ಸುಳ್ಳು ಸುದ್ದಿ ಹಬ್ಬಿಸಿರುವ ಆರೋಪದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಹೇಳಿದ್ದೇನು..?

- Advertisement -

Hubli News: ಹುಬ್ಬಳ್ಳಿ: ಸಂಸದ ತೇಜಸ್ವಿ ಸೂರ್ಯ ವಿರುದ್ಧ ಸುಳ್ಳು ಸುದ್ದಿ ಹರಡಿದ್ದಾರೆಂಬ ಆರೋಪ ಕೇಳಿಬಂದಿದ್ದು, ಎಫ್‌ಐಆರ್ ದಾಖಲಾಗಿದೆ.

ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ಪ್ರಿಯಾಂಕ್ ಖರ್ಗೆಗೆ ಶಾಸಕರಾದರೂ ಸಹ ಏನು ಕೆಲಸ ಇಲ್ಲಾ ಅನ್ಸುತ್ತೆ. ಎಫ್ಐಆರ್ ಗಳನ್ನು ಹುಡುಕಿ ಹುಡುಕಿ ಹಾಕಿಸುವ ಕೆಲಸ ಮಾಡ್ತಾರೆ. ಅವರು ಹಾಕಿರೋ ಕೇಸ್ ಗಳಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿ ವಾಪಸ್ ಕಳಿಸ್ತಾರೆ. ಪ್ರಿಯಾಂಕ್ ಖರ್ಗೆ ಕೇಸ್ ಹಾಕೋದನ್ನೇ ಫುಲ್ ಟೈಮ್ ಕೆಲಸ ಮಾಡಿಕೊಂಡಿದ್ದಾರೆ. ನಿನ್ನೆ ಜೆ ಪಿ ಸಿ ಬಂದಾಗ ಹಾವೇರಿಯ ರೈತನ ಅಹವಾಲು ಪಡೆದಿದ್ವಿ. ಅದರಲ್ಲಿ ರೈತನ ಜಮೀನು ವಕ್ಫ್ ಎಂದು ಬದಲಾಯಿಸಿದ ಕಾರಣ ರುದ್ರಪ್ಪ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದಿದ್ದಾರೆ.

ಅಲ್ಲದೇ, ಆ ಬಗ್ಗೆ ಮಾಧ್ಯಮಗಳಲ್ಲೂ ಕೂಡ ವರದಿ ಬಂದಿದೆ. ರೈತನ ಕುಟುಂಬಸ್ಥರು ಮಾಧ್ಯಮದ ಎದುರು ಮಾತನಾಡಿದ್ದು ಪ್ರಸಾರ ಆಗಿದೆ. ಒಂದು ವೆಬ್ ಈ ಸುದ್ದಿಯನ್ನು ಪ್ರಸಾರ ಮಾಡಿರ್ತಾರೆ. ಅದನ್ನ ನಾನು ಸರ್ಕಾರ ಎಚ್ಚೆತ್ತುಕೊಳ್ಳಬೇಕು ಅಂತ ರೀ ಟ್ವಿಟ್ ಹಾಕ್ತೇನೆ. ಎಸ್.ಪಿ ಹಾವೇರಿ ಅಕೌಂಟ್ ಈ ರೀತಿ ಆಗಿಲ್ಲ ಅಂತ ಟ್ವಿಟ್ ಮಾಡಿದ್ದೆ. ನಾನು ಕಾನೂನು ವ್ಯವಸ್ಥೆಗೆ ಗೌರವ ಇರೋದ್ರಿಂದ ಟ್ವಿಟ್ ಡಿಲೀಟ್ ಮಾಡಿದೆ. ಅನಂತರ ನಾನು ವೆರಿಫೈ ಮಾಡಿ ಹಾಕಬೇಕಿತ್ತೇನೋ ಅಂತ ಅದನ್ನ ರೀ ಟ್ವಿಟ್ ಮಾಡ್ತೇನೆ. ಅದು ಸರಿಯಾದ ಮಾಹಿತಿ ಇಲ್ಲದೇ ವೆಬ್ ಹಾಕಿರಬಹುದು ಅನ್ಕೊಂಡೆ.

ಎಫ್ಐಆರ್ ಹಾಕ್ತೇನೆ ಅಂತ ಹೇಳ್ತಾರೆ. ನಂತರ ಎಫ್ಐಆರ್ ನನಗೆ ಬರುತ್ತೆ. ಕೋರ್ಟ್ ನಲ್ಲಿ ನಿಲ್ಲಲ್ಲ ಅಂತ ಗೊತ್ತಿರೋದಕ್ಕೆ ಸುಮ್ನಿದ್ದೆ. ಆತ್ಮಹತ್ಯೆ ಮಾಡಿಕೊಂಡ ಕುಟುಂಬ ನನ್ನನ್ನ ಹಾಗೂ ಮಾಧ್ಯಮ ಸಂಪರ್ಕ ಮಾಡಿದ್ದಾರೆ. ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಪಹಣಿಯಲ್ಲಿ ಇದೆ ಅಂತ ಕಳ್ಸಿದ್ದಾರೆ. ಪಹಣಿಯ ಪ್ರಿಂಟ್ ತಗೆದುಕೊಡ್ತೇನೆ. ಅವರ ತಂದೆ ಅವರ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಅವರೇ ಹೇಳಿದ್ದಾರೆ. ಮಾಧ್ಯಮ ಕೂಡ ಅದನ್ನ ವರದಿ ಮಾಡಿದ್ದೀರಿ ಎಂದು ಸಂಸದರು ಹೇಳಿದ್ದಾರೆ.

ಮಾಧ್ಯಮದ ಸ್ವಾತಂತ್ರ್ಯ ಹತ್ತಿಕುವ ಕೆಲಸ ನಡೀತಾ ಇದೆ. ಆದ್ರೆ ಪೊಲೀಸರು ಒತ್ತಡಕ್ಕೆ ಒಳಗಾಗಿ ಮುಚ್ಚಿಹಾಕೋ ಕೆಲಸ ಮಾಡ್ತಾ ಇದ್ದಾರೆ. ಹೀಗಾದ್ರೆ ಇದು ದೊಡ್ಡ ಅಕ್ಷಮ್ಯ ಅಪರಾಧ, ಬಹಳ ಗಂಭೀರವಾದ ವಿಷಯ. ನಾನು ಜವಾಬ್ದಾರಿ ಸ್ಥಾನದಲ್ಲಿದ್ದವನು ಹೀಗಾಗಿ ಟ್ವಿಟ್ ಡಿಲೀಟ್ ಮಾಡಿದೆ. ರಾಜ್ಯದಲ್ಲಿ ರೈತರ ಜಾಗ ಕಬಳಿಸೋದಕ್ಕೆ ವಕ್ಫ್ ಬೋರ್ಡ್ ಗೆ ಸರ್ಕಾರ ಬೆಂಬಲ ನೀಡ್ತಾ ಇದೆ. ವಕ್ಫ್ ನ ಹಳೆಯ ತಪ್ಪುಗಳನ್ನು ಮುಚ್ಚಿ ಹಾಕ್ತಿದ್ದಾರೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

ಅವರ ಕುಟುಂಬಸ್ಥರು ಕೂಡ ಮುಂದೆ ಬಂದು ಮಾತನಾಡ್ತಾರೆ. ಪ್ರಿಯಾಂಕ್ ಖರ್ಗೆ ಹಾಗೂ ರಾಜ್ಯ ಸರ್ಕಾರ ರಾಜ್ಯದ ಎದುರು ಕ್ಷಮೆ ಕೇಳಬೇಕು. ಸತ್ಯವನ್ನು ಮುಚ್ಚಿ ಹಾಕುವ ಪ್ರಯತ್ನದ ಬಗ್ಗೆ ರಾಜ್ಯದ ಜನಕ್ಕೆ ಜಗತ್ ಜಾಹೀರು ಮಾಡಬೇಕು. ನನ್ನನ್ನ ಎ1 ಮಾಡಿ, ಮಾಧ್ಯಮದವರನ್ನ ಎ2 ಮಾಡಿದ್ದಾರೆ. ಮಾಧ್ಯಮದವರು ಮನೆಯಲ್ಲಿ ಕೂತು ಕಾದಂಬರಿ ಬರೆದದ್ದಲ್ಲ. ಜೆ ಪಿ ಸಿ ವರದಿ ಆಧಾರದ ಮೇಲೆ ಮಾಧ್ಯಮಗಳು ವರದಿ ಮಾಡಿದ್ದು. ಇದರ ಹಿಂದೆ ಮುಚ್ಚಿ ಹಾಕುವ ಷಡ್ಯಂತ್ರ ಇದೆ. ರಾಜ್ಯ ಸರ್ಕಾರ ವಕ್ಫ್ ಬಳಸಿಕೊಂಡು ತನ್ನ ಓಟ್ ಬ್ಯಾಂಕ್ ಗಾಗಿ ಸಾವಿರಾರು ಎಕರೆ ರೈತರ ಜಮೀನು ಮಾರಿಕೊಡಬೇಕು ಅನ್ನೋ ಹುನ್ನಾರ ನಡೆಸಿದೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

- Advertisement -

Latest Posts

Don't Miss