Sunday, December 22, 2024

Latest Posts

ಆಂಧ್ರದಲ್ಲಿ ‘ಭರ್ಜರಿ’ ಹುಡ್ಗನ ಹವಾ… 350ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಧ್ರುವ ‘ಪೊಗರು’ ಅಬ್ಬರ…

- Advertisement -

ಭರ್ಜರಿ ಹುಡ್ಗ ಧ್ರುವ ಸರ್ಜಾ ಭರ್ಜರಿಯಾಗಿ ಪೊಗರು ತೋರಿಸೋದಿಕ್ಕೆ ರೆಡಿಯಾಗಿ ನಿಂತಿದ್ದಾರೆ. ಇದೇ ತಿಂಗಳ 19ರಂದು ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಪೊಗರಿಸಂ ತೋರಿಸ್ತಿರುವ ಬಹದ್ದೂರ್ ಹುಡ್ಗ ಅಬ್ಬರ ನೋಡೋದಿಕ್ಕೆ ಭಕ್ತಗಣ ಸಖತ್ ಎಕ್ಟೈಟ್ ಆಗಿದ್ದಾರೆ. ಟೀಸರ್. ಸಾಂಗ್ಸ್ ಮೂಲಕ ಸೌತ್ ಸಿನಿ ಅಂಗಳದಲ್ಲಿ ರೆಕಾರ್ಡ್ ಬರೆದಿರು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಲ್ಲಿ ಖುಷಿ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.

ತೆಲುಗಿನ 300 ಥಿಯೇಟರ್ ನಲ್ಲಿ ‘ಪೊಗರು’

ಧ್ರುವ ಪೊಗರು ಟೀಂ ಸದ್ಯ ಸಿನಿಮಾ ಪಬ್ಲಿಸಿಟಿ ಶುರು ಮಾಡಿದೆ. ಈಗಾಗ್ಲೇ ಚೈನ್ನೈನಲ್ಲಿ ಪಬ್ಲಿಸಿಟಿ ಮುಗಿಸಿ ತೆಲುಗು ಚಿತ್ರರಂಗದತ್ತ ಹೊರಟಿದೆ. ಈ ಸಂದರ್ಭದಲ್ಲಿ ಧ್ರುವ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಪೊಗರು ಸಿನಿಮಾ ಆಂಧ್ರದಲ್ಲಿ ಬರೋಬ್ಬರಿ 350ಕ್ಕೂ ಹೆಚ್ಚು ಥಿಯೇಟರ್ ನಲ್ಲಿ ರಿಲೀಸ್ ಆಗ್ತಿರೋದ್ರ ಬಗ್ಗೆ ಟ್ವೀಟರ್ ನಲ್ಲಿ ಧ್ರುವ ಸರ್ಜಾ ಮಾಹಿತಿ ಹಂಚಿಕೊಂಡಿದ್ದಾರೆ.

ಪೊಗರು ಸಿನಿಮಾ 350ಕ್ಕೂ ಹೆಚ್ಚು ಥಿಯೇಟರ್ ನಲ್ಲಿ ಬಿಡುಗಡೆಯಾಗ್ತಿರುವ ವಿಷ್ಯ ಕೇಳಿ ಧ್ರುವ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ದಚ್ಚು ರಾಬರ್ಟ್ ಸಿನಿಮಾ ತೆಲುಗಿನಲ್ಲಿ ರಿಲೀಸ್ ಮಾಡಲು ತಕರಾರು ತೆಗೆದಿದ್ದ ತೆಲುಗು ಸಿನಿಮಂದಿ ದೂರು ನೀಡಿದ ತಕ್ಷಣ ಸೈಲೆಂಟ್ ಆಗಿದ್ದು, ಇದೀಗ ಕನ್ನಡ ಸಿನಿಮಾಗಳ ಎಂಟ್ರಿಗೆ ದಾರಿ ಮಾಡಿಕೊಡ್ತಿದ್ದಾರೆ ಅನ್ನೋದು ಖುಷಿ ವಿಚಾರ.

- Advertisement -

Latest Posts

Don't Miss