Thursday, February 13, 2025

Latest Posts

ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಮೆಜೆಸ್ಟಿಕ್’ ಸಿನಿಮಾಕ್ಕೆ 19 ವರ್ಷದ ಸಂಭ್ರಮ.. ಈ ದಿನ ಡಿಬಾಸ್ ಗೆ ತುಂಬಾನೇ ಸ್ಪೆಷಲ್ …!

- Advertisement -

ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ದರ್ಶನ್ ಅವರಿಗಿಂದು ಈ ದಿನ ತುಂಬಾನೇ ಸ್ಪೆಷಲ್. ದಚ್ಚು ಇಂದು ಕನ್ನಡ ಸಿನಿಮಾ ಇಂಡಸ್ಟ್ರೀಯ ದಾಸನಾಗಿ, ನೆಚ್ಚಿನ ಚಕ್ರವರ್ತಿಯಾಗಿ, ಒಡೆಯನಾಗಿ, ಚಾಲೆಂಜಿಂಗ್ ಸ್ಟಾರ್ ಆಗಿ ಮಿಂಚುತ್ತಿರಬಹುದು. ಆದ್ರೆ ದಚ್ಚು ನಾಯಕ ನಟನಾಗಿ ಎಂಟ್ರಿ ಕೊಟ್ಟ ಮೊದಲ ಸಿನಿಮಾ ಮೆಜೆಸ್ಟಿಕ್. ಅಂದ್ರೆ ದಚ್ಚು ನಾಯಕ ನಟನಾಗಿ ಎಂಟ್ರಿ ಕೊಟ್ಟು ಇಂದಿಗೆ 19 ವರ್ಷ. ಮೆಜೆಸ್ಟಿಕ್ ಸಿನಿಮಾ ಕನ್ನಡ ಬೆಳ್ಳಿಪರದೆಯ ಮೇಲೆ ರೆಕಾರ್ಡ್ ಬರೆದು ಇಂದಿಗೆ 19 ವರ್ಷ.

ಅಪ್ಪ ಸ್ಟಾರ್ ಕಲಾವಿದರಾದ್ರು ಡಿಬಾಸ್ ಬಣ್ಣದ ಬದುಕಿನ ಹಾದಿ ಅಷ್ಟು ಸಲುಭವಿರಲಿಲ್ಲ. ಲೈಟ್ ಬಾಯ್ ಆಗಿ ಸಿನಿ ವೃತ್ತಿ ಆರಂಭಿಸಿದ ದಚ್ಚು, ಸಣ್ಣ ಪುಟ್ಟ ಪಾತ್ರ ಮಾಡಿದ್ರು. ಆದ್ರೆ ಅವರಿಗೆ ಬ್ರೇಕ್  ಕೊಟ್ಟ ಸಿನಿಮಾ.. ದಚ್ಚು ಹೀರೋ ಆಗಿ ಕರುನಾಡಿ ಜಗ್ಗಜಾಹೀರಾತು ಮಾಡಿದ ಸಿನಿಮಾ ಮೆಜೆಸ್ಟಿಕ್. ದಚ್ಚು ಹೀರೋಯಿಸಂ ಶುರುವಾಗಿ ಇಂದಿಗೆ 19 ವರ್ಷ ಕಳೆದಿವೆ.

2002 ಫೆಬ್ರವರಿ 8ರಂದು ತೆರೆಗಪ್ಪಳಿಸಿದ ಮೆಜೆಸ್ಟಿಕ್ ಸಿನಿಮಾಕ್ಕೆ ಪಿ.ಎನ್.ಸತ್ಯ ಆ್ಯಕ್ಷನ್ ಕಟ್ ಹೇಳಿದ್ದರು. ಬಾ.ಮಾ.ಹರೀಶ್-ಎಂ.ಜಿ.ರಾಮಮೂರ್ತಿ ಸಿನಿಮಾಕ್ಕೆ ಬಂಡವಾಳ ಹೂಡಿದ್ದರು. ದರ್ಶನ್ ಗೆ ನಾಯಕಿಯಾಗಿ ರೇಖಾ ಬಣ್ಣ ಹಚ್ಚಿದ್ದರು. ಉಳಿದಂತೆ ಸಾಧುಕೋಕಿಲಾ ಮ್ಯೂಸಿಕ್, ಅಣಜಿ ನಾಗರಾಜ್ ಛಾಯಾಗ್ರಾಹಣ ಸಿನಿಮಾದ ಮತ್ತೊಂದು ಹೈಲೆಟ್ ಆಗಿತ್ತು.

- Advertisement -

Latest Posts

Don't Miss