Saturday, April 19, 2025

Latest Posts

ಬುಲ್ ಬುಲ್ ಬೆಡಗಿಗೆ ‘ಲವ್ ಯೂ ರಚ್ಚು’ ಎಂದ ಕನ್ನಡದ ಸ್ಟಾರ್ ಹೀರೋ..!

- Advertisement -

ಸ್ಮಾಲ್ ಸ್ಕ್ರೀನ್ ಅರಸಿ ಈಗ ಬಿಗ್ ಸ್ಕ್ರೀನ್ ನಲ್ಲಿ ಸಖತ್ ಬ್ಯುಸಿ. ಅರೆ ಯಾರು ಈ ಅರಸಿ ಅಂತಾ ಕನ್ಫೂಷನ್ ಆಗ್ಬೇಡಿ ಅವರೇ ಬುಲ್ ಬುಲ್ ಬೆಡಗಿ, ಡಿಂಪಲ್ ಹುಡುಗಿ ರಚಿತಾ ರಾಮ್. ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸ್ತಿರೋ ರಚ್ಚುಗೆ ಲವ್ ಯೂ ರಚ್ಚು ಅಂತಾ ಕನ್ನಡದ ಆ ಹೀರೋ ಸ್ಟಾರ್ ಹೇಳ್ತಿದ್ದಾರೆ. ಅರೇ ರಚ್ಚುಗೆ ಅದ್ಯಾರಪ್ಪ ಈ ಪರಿ ಪ್ರಪೋಸ್ ಮಾಡ್ತಿದ್ದಾರೆ ಅಂದ್ರಾ..? ವೇಟ್ ವೇಟ್ ಇದು ಪ್ರಪೋಸೂ ಅಲ್ಲ.. ಲವ್ ಮ್ಯಾಟರೂ ಅಲ್ಲ. ಲವ್ ಯೂ ರಚ್ಚು ಅನ್ನೋದು ರಚಿತಾ ರಾಮ್ ಮುಂದಿನ ಸಿನಿಮಾದ ಟೈಟಲ್. ನಿರ್ದೇಶಕ ಕಂ ನಿರ್ಮಾಪಕ ಗುರುದೇಶಪಾಂಡೆ ನಿರ್ಮಾಣದಲ್ಲಿ ರೆಡಿಯಾಗ್ತಿರೋ ಈ ಸಿನಿಮಾದಲ್ಲಿ ಕೃಷಲೀಲಾ ಖ್ಯಾತಿ ನಟ ಅಜೇಯ್ ರಾವ್ ನಾಯಕನಾಗಿ ನಟಿಸ್ತಿದ್ದು, ಅಜೇಯ್ ಗೆ ಜೋಡಿಯಾಗಿ ಡಿಂಪಲ್ ಕ್ವೀನ್ ನಟಿಸಲಿದ್ದಾರೆ. ಸದ್ಯ ಕೃಷ್ಣ ಟಾಕೀಸ್ ಸಿನಿಮಾ ರಿಲೀಸ್ ಗೆ ಎದುರು ನೋಡ್ತಿರೋ ಅಜೇಯ್ ಈ ಸಿನಿಮಾಕ್ಕೆ ಸಹಿ ಹಾಕಿದ್ದಾರೆ.

ಇದೇ ತಿಂಗಳ 24ರಂದು ಅಜೇಯ್ ರಾವ್ ಹುಟ್ಟುಹಬ್ಬದಂದು ಈ ಸಿನಿಮಾ ಸೆಟ್ಟೇರಲಿದ್ದು, ಮುಹೂರ್ತ ಮುಗಿಸಿದ ಬಳಿಕ ಶೂಟಿಂಗ್ ಪ್ಲಾನ್ ಮಾಡಿದೆ ಚಿತ್ರತಂಡ. ಫರ್ ದ ಫಸ್ಟ್ ಟೈಮ್ ರಚ್ಚು ಜೊತೆ ಅಜೇಯ್ ರಾವ್ ನಟಿಸ್ತಿದ್ದು, ಈ ಕ್ಯೂಟ್ ಪೇರ್ ಒಂದೇ ಸ್ಕ್ರೀನ್ ನಲ್ಲಿ ನೋಡಲು ಫ್ಯಾನ್ಸ್ ಎಕ್ಟೈಟ್ ಆಗಿದ್ದಾರೆ. ಇನ್ನೂ ಸಿನಿಮಾಕ್ಕೆ ಶಂಕರ್ ರಾಜ್ ನಿರ್ದೇಶನ ಮಾಡುತ್ತಿದ್ದು, ಇದು ಇವರ ಮೊದಲ ಸಿನಿಮಾವಾಗಿದೆ.

- Advertisement -

Latest Posts

Don't Miss