Wednesday, December 11, 2024

Latest Posts

‘2.0’ ಸಿನಿಮಾ ಡೈರೆಕ್ಟರ್ ಜೊತೆ ರಾಕಿಂಗ್ ಸ್ಟಾರ್ ಯಶ್ ಸಿನಿಮಾ..? ಯಶ್ ಜೊತೆ ಮೆಗಾಸ್ಟಾರ್ ಪುತ್ರ ರಾಮ್ ಚರಣ್ ಕೂಡ ನಟನೆ..?

- Advertisement -

ಕೆಜಿಎಫ್-2 ಶೂಟಿಂಗ್ ಮುಗಿಸಿ ಪತ್ನಿ-ಮಕ್ಕಳೊಂದಿಗೆ ರಾಕಿಭಾಯ್ ಯಶ್ ಮಾಲ್ಡೀವ್ಸ್ ಕಡಲ ಕಿನಾರೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ಅತ್ತ ಕೆಜಿಎಫ್-2 ಬೆಳ್ಳಿಪರದೆಯ ಮೇಲೆ ಧಗಧಗಿಸಲು ರೆಡಿಯಾಗ್ತಿದೆ. ಆದ್ರೆ ಯಶ್ ಮುಂದಿನ ಸಿನಿಮಾ ಬಗ್ಗೆ ಸ್ವಲ್ಪವೂ ಹಿಂಟ್ ಬಿಟ್ಟುಕೊಟ್ಟಿಲ್ಲ. ಹಾಗಂತ ರಾಕಿಂಗ್ ಸ್ಟಾರ್ ಯಶ್ ಚಿತ್ರದ ಬಗ್ಗೆ ಹೊಸ ಅಪ್ ಡೇಟ್ ಸಿಕ್ಕಿಲ್ಲ ಅಂತಲ್ಲ. ಇದೀಗ ನೆಕ್ಸ್ಟ್ ಪ್ರಾಜೆಕ್ಟ್ ಬಗ್ಗೆ ನಯಾ ನ್ಯೂಸ್ ಕಾಲಿವುಡ್ ಅಂಗಳದಿಂದ ರಿವೀಲ್ ಆಗಿದೆ. ಪುರಿ ಜಗನ್ನಾಥ್ ಜೊತೆ ಯಶ್ ಕೈ ಜೋಡಿಸ್ತಾರೆ ಅನ್ನೋ ನ್ಯೂಸ್ ಟಾಲಿವುಡ್ ನಿಂದ ಗಾಂಧಿನಗರವರೆಗೆ ಹಬ್ಬಿತ್ತು. ಈ ನಡುವೆಯೇ ಮಫ್ತಿ ಡೈರೆಕ್ಟರ್ ಯಶ್ ಓಕೆ ಎಂದಿದ್ದಾರೆ ಅಂತಾನೂ ಹೇಳಲಾಗಿತ್ತು. ಈ ಮಧ್ಯೆ ಕಾಲಿವುಡ್ ಸ್ಟಾರ್ ಡೈರೆಕ್ಟರ್ ಶಂಕರ್ ಸಿನಿಮಾದಲ್ಲೂ ಯಶ್ ಬಣ್ಣ ಹಚ್ಚಲಿದ್ದಾರೆ ಎನ್ನಲಾಗ್ತಿತ್ತು. ಇದೀಗ ಇದೇ ಸಿನಿಮಾದ ಬಗ್ಗೆ ಸೆನ್ಸೆಷನಲ್ ನ್ಯೂಸ್ ಹೊರ ಬಿದ್ದಿದೆ.

ರಾಮ್ ಚರಣ್ ಜೊತೆ ಯಶ್

ಕಾಲಿವುಡ್ ಸ್ಟಾರ್ ಡೈರೆಕ್ಟರ್ ಅಂತಾನೇ ಖ್ಯಾತಿ ಪಡೆದಿರುವ ಶಂಕರ್ ಸಿನಿಮಾದಲ್ಲಿ ಯಶ್ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಈಗಾಗ್ಲೇ ಮಾತುಕತೆ ನಡೆದಿದ್ದು, ಎಲ್ಲಾ ಫೈನಲ್ ಹಂತದಲ್ಲಿದೆ ಎನ್ನಲಾಗ್ತಿದೆ. ಶಂಕರ್ ಕಥೆ ಕೇಳಿ ಮೆಚ್ಚಿರೋ ರಾಕಿಭಾಯ್ ನಟಿಸೋದಿಕ್ಕೆ ಓಕೆ ಎಂದಿದ್ದಾರೆ. ಸದ್ಯ 2022ರಲ್ಲಿ ಸಿನಿಮಾ ಸೆಟ್ಟೇರಲಿದ್ದು, ಇದೊಂದು ಮಲ್ಟಿಸ್ಟಾರ್ ಸಿನಿಮಾ ಎನ್ನಲಾಗ್ತಿದೆ. ಮೆಗಾಸ್ಟಾರ್ ಪುತ್ರ ರಾಮ್ ಚರಣ್ ತೇಜ್ ಹಾಗೂ ವಿಜಯ್ ಸೇತುಪತಿ ಯಶ್ ಜೊತೆ ಈ ಸಿನಿಮಾದಲ್ಲಿ ನಟಿಸಲು ಸಮ್ಮತಿ ಸೂಚಿಸಿದ್ದಾರಂತೆ. ತಮಿಳು, ತೆಲುಗು, ಕನ್ನಡ, ಹಿಂದಿ, ಮಾಲಯಾಳಂ ಭಾಷೆಯಲ್ಲಿ ಏಕಕಾಲದಲ್ಲಿ ಸಿನಿಮಾ ತಯಾರಗಲಿದೆ ಎನ್ನಲಾಗ್ತಿದೆ. ಸದ್ಯ ಇಂಡಿಯನ್-2 ಶೂಟಿಂಗ್ ಬ್ಯೂಸಿಯಲ್ಲಿರುವ ಶಂಕರ್, ಈ ಸಿನಿಮಾ ಕಂಪ್ಲೀಟ್ ಆಗ್ತಿದೆ ರಾಕಿಭಾಯ್ ಸಿನಿಮಾದ ಸಂಪೂರ್ಣ ತಯಾರಿ ನಡೆಸಿ ಅಧಿಕೃತ ಘೋಷಣೆ ಮಾಡಲಿದ್ದಾರಂತೆ.

- Advertisement -

Latest Posts

Don't Miss