Thursday, December 12, 2024

Latest Posts

ನಟ ಅನೀಶ್ ನಿರ್ದೇಶನದ ಚೊಚ್ಚಲ ಚಿತ್ರದ ‘ರಾಮಾರ್ಜುನ’ ಟ್ರೇಲರ್ ಗೆ ಸಖತ್ ರೆಸ್ಪಾನ್ಸ್…!

- Advertisement -

ಅನೀಶ್ ತೇಜೇಶ್ವರ್ ನಟಿಸಿ,‌ ನಿರ್ದೇಶನ‌ ಮಾಡಿರೋ ಚೊಚ್ಚಲ ಸಿನಿಮಾ ರಾಮಾರ್ಜುನ. ಪೋಸ್ಟರ್, ಟೀಸರ್ ನಿಂದ ಸಖತ್ ಸದ್ದು ಮಾಡಿದ್ದ ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಗಾಂಧಿನಗರದ ಮಂದಿಯಿಂದ‌ ಮೆಚ್ಚುಗೆ ಪಡೆದುಕೊಳ್ತಿದೆ.

ಈಗಾಗ್ಲೇ ಶೂಟಿಂಗ್ ಮುಗಿಸಿರೋ ರಾಮಾರ್ಜುನ್ ಟೀಂ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿದ್ದು, ಇದೇ ತಿಂಗಳ 29ರಂದು ಸಿನಿಮಾ ತೆರೆಗೆ ಬರ್ತಿದೆ.

ರಿಲೀಸ್ ಆಗಿರೋ ಟ್ರೇಲರ್ ನಲ್ಲಿ‌ ಅನೀಶ್ ಇನ್ಶುರೆನ್ಸ್ ಎಂಜೆಂಟ್ ಆಗಿ ಬಣ್ಣ ಹಚ್ಚಿದ್ರೆ, ಅನೀಶ್ ಗೆ ಜೋಡಿಯಾಗಿ ಬ್ಯೂಟಿಫುಲ್ ನಿಶ್ವಿಕಾ ನಾಯ್ಡು ನಟಿಸಿದ್ದಾರೆ. ಈ ಹಿಂದೆ ವಾಸು ನಾನ್ ಪಕ್ಕ ಕಮರ್ಷಿಯಲ್ ಸಿನಿಮಾ ಮೂಲಕ ಕನ್ನಡ ಸಿನಿ ಪ್ರೇಕ್ಷಕ ಮೋಡಿ ಮಾಡಿರೋ ಈ ಜೋಡಿ ಮತ್ತೆ ಒಂದಾಗಿದ್ದು, ಈ ಬಾರಿ ಯೂ ಸಕ್ಸಸ್ ಕಾಣೋ ನಿರೀಕ್ಷೆಯಲಿದ್ದಾರೆ ಅನೀಶ್-ನಿಶ್ವಿಕಾ.

ಇನ್ನೂ ಚಿತ್ರರಂಗದಲ್ಲಿ ಹತ್ತು ವರ್ಷ ಅನುಭವವಿರೋ ಹೊಂದಿರೋ ಅನೀಶ್ ಡೈರೆಕ್ಟರ್ ಕ್ಯಾಪ್ ತೊಡುವ ಹಂಬಲದಿಂದ ರಾಮಾರ್ಜುನ ಸಿನಿಮಾವನ್ನು ನಟಿಸಿ, ನಿರ್ದೇಶನ‌ ಮಾಡಿದ್ದಾರೆ. ಇನ್ನೂ ರಾಮಾರ್ಜುನ ಸಿನಿಮಾಗೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಹ‌ ನಿರ್ಮಾಪಕನಾಗಿರೋದ್ರ ಜೊತೆಗೆ ಸಿನಿಮಾ ಹಂಚಿಕೆಗೂ ಕೂಡ ಕೈ ಜೋಡಿಸಿದ್ದಾರೆ.

- Advertisement -

Latest Posts

Don't Miss