Sunday, June 1, 2025

Latest Posts

ಶಿವರಾತ್ರಿ ಹಬ್ಬಕ್ಕೆ ರಾ..ರಾ..ರಾ..ರಾಬರ್ಟ್ ಹವಾ…ಒಟಿಟಿಯಲ್ಲಿ ಯಾವುದೇ ಕಾರಣಕ್ಕೆ ರಿಲೀಸ್ ಆಗೋಲ್ಲ ದರ್ಶನ್ ಸಿನಿಮಾ…!

- Advertisement -

ಡಿಬಾಸ್ ದರ್ಶನ್ ಭಕ್ತಗಣಕ್ಕೆ ಇದು ಗುಡ್ ನ್ಯೂಸ್. ಶಿವರಾತ್ರಿ ಹಬ್ಬದೂಟದ ಸಂಭ್ರವನ್ನು ಡಬ್ಬಲ್ ಮಾಡೋದಿಕ್ಕೆ ಥಿಯೇಟರ್ ಅಂಗಳಕ್ಕೆ ರಾ..ರಾ..ರಾ..ರಾಬರ್ಟ್ ಬರ್ತಿದೆ. ದಚ್ಚು 53ನೇ ಸಿನಿಮಾ ಕಣ್ತುಂಬಿಕೊಳ್ಬೇಕು ಅಂತಾ ಕಾಯ್ತಿದೆ ದಚ್ಚು ಅಭಿಮಾನಿ ಬಳಗಕ್ಕೆ ಇವತ್ತು ದಾಸ ಸಖತ್ ನ್ಯೂಸ್ ಕೊಟ್ಟಿದ್ದಾರೆ. ಮಾರ್ಚ್ 11ರ ಶಿವರಾತ್ರಿ ಹಬ್ಬದಂದೂ ಥಿಯೇಟರ್ ಅಂಗಳದಲ್ಲಿ ರಾಬರ್ಟ್ ಖದರ್ ಶುರುವಾಗಲಿದೆ ಅಂತಾ ಸ್ವತಃ ದರ್ಶನ್ ಹೇಳಿದ್ದಾರೆ.

ಇವತ್ತು ಫೇಸ್ ಬುಕ್ ಫೇಜ್ ನಲ್ಲಿ ಲೈವ್ ಬಂದ ದರ್ಶನ್, ಕೊರೋನಾದಿಂದ ಜನರು ಸಂಕಷ್ಟ ಎದುರಿಸಿರುವ ಕಾರಣ ಈ ವರ್ಷ ಅದ್ಧೂರಿ ಹುಟ್ಟುಹಬ್ಬ ಆಚರಿಸುವುದು ಬೇಡ ಎಂದು ಹೇಳಿದ್ದರು. ಈ ವೇಳೆ ಅಭಿಮಾನಿಯೊಬ್ಬ ರಾಬರ್ಟ್ ಸಿನಿಮಾ ರಿಲೀಸ್ ಯಾವಾಗ ಎಂದು ಕೇಳಿದಾಗ, ಮಾರ್ಚ್ 11ಕ್ಕೆ ರಿಲೀಸ್ ಆಗುವ ಸಾಧ್ಯತೆಯಿದೆ ಎಂದು ಹೇಳಿದರು. ಆ ಬಳಿಕ ದಚ್ಚು ಟ್ವೀಟ್ ಮಾಡಿ ಆಫೀಷಿಯಲ್ ಆಗಿ ರಾಬರ್ಟ್ ಮಾರ್ಚ್ 11ರ ಮಹಾಶಿವರಾತ್ರಿ ಹಬ್ಬಕ್ಕೆ ರಿಲೀಸ್ ಆಗುವುದು ಎಂದು ಮಾಹಿತಿ ನೀಡಿದ್ದಾರೆ.

ಅಂದಹಾಗೇ ರಾಬರ್ಟ್ ಸಿನಿಮಾಕ್ಕೆ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದು, ದಚ್ಚು ಮೂರು ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗ್ಲೇ ರಿಲೀಸ್ ಆಗಿರುವ ರಾಬರ್ಟ್ ಸಿನಿಮಾದ ಸಾಂಗ್ಸ್ ಹಾಗೂ ಟೀಸರ್ ಸಖತ್ ಸೌಂಡ್ ಮಾಡುತ್ತಿದೆ. ಇನ್ನು, ದರ್ಶನ್ ಗೆ ಜೋಡಿಯಾಗಿ ಭದ್ರಾವತಿ ಬ್ಯೂಟಿ ಆಶಾ ಭಟ್ ನಟಿಸಿದ್ದಾರೆ.

- Advertisement -

Latest Posts

Don't Miss