ಟೈಮ್ ಸಿಕ್ಕಗಲೆಲ್ಲಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಯಾಮೆರಾ ಹೆಗಲಿಗೇರಿಸಿಕೊಂಡು ಕಾಡಿಗೆ ಎಂಟ್ರಿ ಕೊಡ್ತಾರೆ. ಸುಂದರವಾದ ವೈಲ್ಡ್ ಲೈಫ್ ಫೋಟೋಗ್ರಾಫಿ ಮಾಡ್ತಾರೆ. ಪ್ರಾಣಿ-ಪಕ್ಷಿಗಳು ಅಂದ್ರೆ ಇಷ್ಟಪಡುವ ದಾಸ ಅರಣ್ಯ ಇಲಾಖೆಯ ರಾಯಭಾರಿಯೂ ಆಗಿದ್ದಾರೆ. ತಮ್ಮ ತೋಟದ ಮನೆ ಬಂಡೀಪುರ-ನಾಗರಹೊಳೆ ಅಭಯಾರಣ್ಯ ಜೊತೆಗೆ ಉತ್ತರ ಭಾರತದ ಕಾಡಿಗೂ ಹೋಗಿ ವೈಲ್ಡ್ ಲೈಫ್ ಫೋಟೋಗ್ರಾಫಿ ಮಾಡಿಕೊಂಡು ಬರ್ತಾರೆ.
ಇದೀಗ ದಚ್ಚು, ಶೂಟಿಂಗ್ ಗೆ ಕೊಂಚ ಬಿಡುವು ಕೊಟ್ಟು ಮತ್ತೆ ವನ್ಯಜೀವಿಗಳ ಛಾಯಾಚಿತ್ರಣ ಮಾಡಲು ರೆಡಿಯಾಗಿದ್ದಾರೆ. ಅದಕ್ಕಾಗಿ ಇತ್ತೀಚೆಗಷ್ಟೆ ದರ್ಶನ್ ನಾಗರಹೊಳೆ ಕಾಡಿನಲ್ಲಿ ಸಫಾರಿ ಮಾಡಿದ್ದಾರೆ. ಸಫಾರಿಯಲ್ಲಿ ಸಾರಥಿ ಕ್ಯಾಮೆರಾದಲ್ಲಿ ಹುಲಿ ಸೆರೆಹಿಡಿದಿದ್ದಾರೆ.
ಈ ಹಿಂದೆ 2019ರಲ್ಲಿ ಕೀನ್ಯಾಗೆ ಭೇಟಿ ನೀಡಿದ್ದ ದಚ್ಚು ಕೀನ್ಯಾ ಅರಣ್ಯದಲ್ಲಿ ಪ್ರಾಣಿಗಳು ಮತ್ತು ಪಕ್ಷಿಗಳನ್ನು ಸೆರೆಹಿಡಿದಿದ್ದರು. ಆ ನಂತರ ಉತ್ತರಾಖಂಡ ರಾಜ್ಯದ ಸತ್ತಾಲ್ ಗೆ ಭೇಟಿ ನೀಡಿ, ಸತ್ತಾಲ್ ನ ಸುಂದರ ತಾಣಗಳು ದಾಸ ಕ್ಯಾಮೆರಾದಲ್ಲಿ ಸೆರೆಯಾಗಿದ್ದು. ಇದೀಗ ಸಾರಥಿ ನಾಗರಹೊಳೆಯಲ್ಲಿ ಬೀಡುಬಿಟ್ಟಿದ್ದಾರೆ.
ಸದ್ಯ ದಾಸ ಶೂಟಿಂಗ್ ಗೆ ಬ್ರೇಕ್ ಹಾಕಿ ಕಾಡು ಮೇಡು ಸುತ್ತಾ ಸಖತ್ ಎಂಜಾಯ್ ಮಾಡ್ತಿದ್ದು, ದಚ್ಚು ವೈಲ್ಡ್ ಲೈಫ್ ಫೋಟೋಗ್ರಾಫಿ ನೋಡಿ ಫ್ಯಾನ್ಸ್ ಖುಷಿಪಡ್ತಿದ್ದಾರೆ.