Thursday, November 21, 2024

Latest Posts

ನಟ ಧನಂಜಯ್ ಮದುವೆ ಫಿಕ್ಸ್ : ಯಾವ ನಟಿಗೂ ಕಮ್ಮಿ ಇಲ್ಲ ಡಾಲಿಯ ಭಾವಿ ಮಡದಿ

- Advertisement -

Sandalwood News: ತಮ್ಮ ನಟನೆಯ ಮೂಲಕ ಎಲ್ಲರ ಮನೆ ಮಾತಾಗಿರುವ ಡಾಲಿ ಧನಂಜಯ್ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ವೈದ್ಯೆಯಾದ ಧನ್ಯತಾ ಜೊತೆ ಡಾಲಿ ಮದುವೆ ಫಿಕ್ಸ್ ಆಗಿದ್ದು, ಕನ್ನಡ ರಾಜ್ಯೋತ್ಸವದ ದಿನ ಪ್ರಿವೆಡ್ಡಿಂಗ್ ಫೋಟೋ ಶೂಟ್ ಮತ್ತು ವೀಡಿಯೋ ಅಪ್ಲೋಡ್ ಮಾಡುವ ಮೂಲಕ, ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಧನ್ಯತಾ ಮತ್ತು ಧನಂಜಯ್ ಇಬ್ಬರೂ ಹಲವು ವರ್ಷಗಳಿಂದ ಪರಿಚಯವಿದ್ದು, ಈ ಪರಿಚಯವೇ ಪ್ರೀತಿಯಾಗಿ, ಇದೀಗ ಇಬ್ಬರೂ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಧನ್ಯತಾ ಚಿತ್ರದುರ್ಗದವರಾಗಿದ್ದು ಮೈಸೂರಿನಲ್ಲಿ ವ್ಯಾಸಂಗ ಮುಗಿಸಿದ್ದಾರೆ ಮತ್ತು ಡಾಲಿ ಓದಿದ್ದು ಮೈಸೂರಿನಲ್ಲಿ. ಹಾಗಾಗಿ ಇಬ್ಬರಿಗೂ ಮೈಸೂರಿನಲ್ಲಿ ಪರಿಚಯವಾಗಿತ್ತು.  ಈ ಕಾರಣ, ಫೆಬ್ರವರಿ 16ರಂದು ಮೈಸೂರಿನಲ್ಲೇ ವಿವಾಹ ಕಾರ್ಯಕ್ರಮ ನಡೆಯಲಿದೆ. ಮದುವೆ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳು, ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ.

ಈ ಬಗ್ಗೆ ವೀಡಿಯೋ ಹಂಚಿಕೊಂಡ ಧನಂಜಯ್, ಪ್ರೀತಿಯ ಕರುನಾಡಿಗೆ, ನನ್ನಿಚ್ಛೆಯಂತೆ, ಕುಟುಂಬದ ಇಚ್ಛೆಯಂತೆ, ನಿಮ್ಮೆಲ್ಲರ ಇಚ್ಛೆಯಂತೆ, ಸದ್ಯದಲ್ಲೇ ಮದುವೆಯಾಗುತ್ತಿದ್ದೇನೆ. ಪ್ರತಿ ಹೆಜ್ಜೆಯಲ್ಲೂ ಕೈ ಹಿಡಿದು ನಡೆಸಿದ್ದೀರಿ, ಮನದಾಳದಿಂದ ಹರಸಿದ್ದೀರಿ. ಬದುಕಿನ ಮಹತ್ವವಾದ ಘಟ್ಟಕ್ಕೆ ಗೆಳತಿ ಧನ್ಯತಾಳೊಂದಿಗೆ ಹೆಜ್ಜೆಯಿಡುತ್ತಿದ್ದೇನೆ. ಪ್ರೀತಿ, ಆಶೀರ್ವಾದವಿರಲಿ. ಮದುವೆಗೆ ಕರಿತೀನಿ, ಎಲ್ಲ ಬಂದು ಊಟ ಮಾಡಿಕೊಂಡು ಹೋಗ್ಬೇಕು. ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿಯ ಶುಭಾಶಯಗಳು ಎಂದು ತಿಳಿಸಿದ್ದಾರೆ.

ರಾಜ್ಯೋತ್ಸವದ ದಿನ ಈ ಶುಭಸುದ್ದಿ ಕೊಟ್ಟ ಕಾರಣಕ್ಕೆ, ರಾಜ್ಯೋತ್ಸವ ಮತ್ತು ಕನ್ನಡಕ್ಕೆ ಸಂಬಂಧಪಟ್ಟ ಥೀಮ್‌ನಲ್ಲೇ ಡಾಲಿ ಮತ್ತು ಡಾಕ್ಟ್ರು ಫೋಟೋ, ವೀಡಿಯೋ ಶೂಟ್ ಮಾಡಿಸಿಕೊಂಡಿದ್ದಾರೆ. ಹಳಗನ್ನಡಲ್ಲೇ ಭಾವಿ ಪತ್ನಿಗೆ ಕವಿತೆ ಹೇಳಿದ್ದಾರೆ ಧನಂಜಯ್.

ಇಷ್ಟು ದಿನ ಡಾಲಿ ರಾಜಕೀಯಕ್ಕೆ ಸೇರಲಿದ್ದಾರೆ ಅಂತಲೇ ಸುದ್ದಿ ಇತ್ತು. ಆದರೆ ತಾನು ರಾಜಕೀಯ ಪಕ್ಷಕ್ಕೆ ಬೆಂಬಲಿಸುತ್ತೇನೆ ಹೊರತು ಸದ್ಯಕ್ಕೆ ಯಾವ ಪಕ್ಷಕ್ಕೂ ಸೇರುತ್ತಿಲ್ಲವೆಂದು ಡಾಲಿ ಹೇಳಿದ್ದರು. ಇದೀಗ ಡಾಲಿ ತಮ್ಮ ಮ್ಯಾರೇಜ್ ಸುದ್ದಿ ಕೊಟ್ಟಿದ್ದು, ಡಾಲಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

- Advertisement -

Latest Posts

Don't Miss