Wednesday, December 11, 2024

Latest Posts

ದೀಪಾವಳಿಗಾಗಿ ಮನೆಗೆ ಪಟಾಕಿ ಕೊಂಡೊಯ್ಯುವ ವೇಳೆ ಪಟಾಕಿ ಸಿಡಿದು ಬೈಕ್ ಸವಾರ ಸಾ*ವು

- Advertisement -

Andhra Pradesh: ಮನೆಯಲ್ಲಿ ಸಂಭ್ರಮದ ದೀಪಾವಳಿ ಆಚರಿಸಬೇಕು ಎಂದು ಮನೆಗೆ ದೀಪಾವಳಿ ಕೊಂಡೊಯ್ಯುತ್ತಿದ್ದ ವೇಳೆ ಬೈಕ್ ಸವಾರ ಮೃತಪಟ್ಟ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಆಂಧ್ರದ ಎಲ್ಲೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಓರ್ವ ವ್ಯಕ್ತಿ ಈರುಳ್ಳಿ ಪಟಾಕಿ ಕೊಂಡೊಯ್ಯುತ್ತಿದ್ದ ವೇಳೆ, ಗುಂಡಿ ಇದ್ದ ಕಾರಣಕ್ಕೆ, ಹೋಂಡಾ ಆ್ಯಕ್ಟೀವಾ ಬೈಕ್ ಪದೇ ಪದೇ ಜಂಪ್ ಆಗುತ್ತಿತ್ತು. ಇದರ ರಭಸಕ್ಕೆ ಪಟಾಕಿ ಸ್ಪೋಟಗೊಂಡಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಕ್ಕಪಕ್ಕದಲ್ಲೇ ಇದ್ದ, ಕೆಲವರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಈರುಳ್ಳಿ ಬಾಂಬ್ ನೆಲಕ್ಕೆ ಬಿದ್ದರೆ ಸಾಕು ಸ್ಪೋಟಗೊಳ್ಳುತ್ತದೆ. ಹಾಗಾಗಿ ಗುಂಡಿ ಇದ್ದ ಕಾರಣಕ್ಕೆ, ಪಟಾಕಿ ಎಲ್ಲ ನೆಲಕ್ಕೆ ಬಿದ್ದು ಸ್ಪೋಟಗೊಂಡಿದೆ. ಇನ್ನು ಈ ಪಟಾಕಿ ಸುಟ್ಟರೆ, ಸಿಕ್ಕಾಪಟ್ಟೆ ಸೌಂಡ್ ಬರುವ ಪಟಾಕಿಯಾಗಿದ್ದು, ಹಲವು ಪಟಾಕಿ ಒಂದೇ ಸಲ ಒಡೆದ ಕಾರಣ, ಹಲವ ಕಿವಿ ತಮಟೆಗೆ ಪೆಟ್ಟು ಬಿದ್ದಿದೆ.

ಇನ್ನೊಂದೆಡೆ ಈರುಳ್ಳಿ ಪಟಾಕಿ ಬಳಸಲು ಆಂಧ್ರದಲ್ಲಿ ಅನುಮತಿ ಪಡೆಯಬೇಕು. ಏಕೆಂದರೆ, ಈ ಪಟಾಕಿಯನ್ನು ಉಗ್ರ ಕೃತ್ಯಗಳಲ್ಲಿ ಬಳಸುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಈ ವ್ಯಕ್ತಿ ನಿಜವಾಗಿಯೂ ದೀಪಾವಳಿಗಾಗಿ ಮನೆಯಲ್ಲಿ ಪಟಾಕಿ ಹಚ್ಚಲೆಂದೇ ತೆಗೆದುಕೊಂಡು ಹೋಗುತ್ತಿದ್ದನಾ ಅಥವಾ ಬೇರೆ ಕಾರಣಕ್ಕೆ ಪಟಾಕಿ ಸಾಗಿಸುತ್ತಿದ್ದನಾ ಅಂತಾ ತನಿಖೆಯಿಂದ ಬಯಲಾಗಬೇಕಿದೆ.

- Advertisement -

Latest Posts

Don't Miss