Wednesday, January 22, 2025

Latest Posts

“ಮಾರ್ಟಿನ್”ಗೆ ಎದುರಾಳಿಯಾದ ಬಾಲಿವುಡ್ ತಂಗಬಲ್ಲಿ..!

- Advertisement -

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳು ಮಾರ್ಟಿನ್ ಸಿನಿಮಾ ಅಪ್ಡೇಟ್‌ಗಾಗಿ ಚಾತಕ ಪಕ್ಷಿಯಂತೆ ಕಾಯ್ತಿದ್ದಾರೆ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಕೆಜಿಎಫ್-2, 777 ಚಾರ್ಲಿ ಸಿನಿಮಾ ಹವಾ ನಡೀತಾಯಿದ್ದು, ಮುಂದಿನ ದಿನಗಳಲ್ಲಿ ಯಾವ ಹೀರೋ ಸಿನಿಮಾ ರಿಲೀಸಾಗ್ಬೋದು ಅಂತ ಎದುರುನೋಡ್ತಿದ್ದಾರೆ.

ಹಾಗೇ ನೋಡೋದಾದರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿರೋ ಸಿನಿಮಾವಾಗಿದೆ. ಪೊಗರು ತೋರಿಸಿದ ಬಳಿಕ ನಟ ಧ್ರುವ ಸರ್ಜಾ ಮಾರ್ಟಿನ್ ಅವತಾರ ತಾಳಿದ್ದು, ಸೆಪ್ಟೆಂಬರ್ ೩೦ರಂದು ಬಿಡುಗಡೆಯಾಗೋದು ಕನ್ಫರ್ಮ್ ಅಂತ ಈಗಾಗಲೇ ಅಧಿಕೃತವಾಗಿ ವಿಷಯ ತಿಳಿಸಿದೆ ಚಿತ್ರತಂಡ. ವಿಷಯ ಅದಲ್ಲ, ಸದ್ಯ ಮಾರ್ಟಿನ್ ಸಿನಿಮಾ ಶೂಟಿಂಗ್ ಯಾವ ಹಂತದಲ್ಲಿದೆ, ಸಿನಿಮಾದಲ್ಲಿ ಯಾರೆಲ್ಲಾ ಕಲಾವಿದರು ಮತ್ತೆ ಸೇರಿದ್ದಾರೆ ಅನ್ನೋದು. ಹೌದು, ತಮ್ಮ ನೆಚ್ಚಿನ ನಟನ ಸಿನಿಮಾ ಮಾರ್ಟಿನ್ ಚಿತ್ರದ ಅಪ್ಡೇಟ್ಸ್ ಸದ್ಯ ಚಿತ್ರತಂಡ ರಿವೀಲ್ ಮಾಡ್ತಾಯಿಲ್ಲ. ಆದಾಗ್ಯೂ ನಮಗೆ ಸಿಕ್ಕಿರೋ ಮೂಲಗಳ ಮಾಹಿತಿ ಪ್ರಕಾರ ಮಾರ್ಟಿನ್ ಸಿನಿಮಾ ಶೇಕಡ 80ರಷ್ಟು ಶೂಟಿಂಗ್ ಭಾಗ ಕಂಪ್ಲೀಟ್ ಆಗಿದೆ. ವಿಶಾಖಪಟ್ಟಣದಲ್ಲಿ ಶೂಟಿಂಗ್ ಮುಗಿಸಿ ಬಂದಿರೋ ಮಾರ್ಟಿನ್ & ಟೀಂ ಈಗ ಬೆಂಗಳೂರಿಗೆ ಬಂದಿದೆ.

ಎ.ಪಿ ಅರ್ಜುನ್ ಹಾಗೂ ಧ್ರುವ ಸರ್ಜಾರ ಸೆಕೆಂಡ್ ಟೈಂ ಕಾಂಬಿನೇಶನ್ ಸಿನಿಮಾ ಇದಾಗಿರೋದ್ರಿಂದ, ಕಾಮನ್ನಾಗಿಯೇ ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಈ ಚಿತ್ರದ ಮೇಲಿದೆ. ಇನ್ನು ಬೆಂಗಳೂರಿನಲ್ಲಿ ಚಿತ್ರದ ಹಾಡುಗಳ ಚಿತ್ರೀಕರಣ ನಡೆಯಲಿದ್ದು, ದುಬಾರಿ ಮೊತ್ತದಲ್ಲಿ ಹಾಡುಗಳಿಗೆ ಸೆಟ್ ನಿರ್ಮಾಣವಾಗಲಿದೆ. ಮಾರ್ಟಿನ್ ಕ್ಲೆöÊಮ್ಯಾಕ್ಸ್ ಕೂಡ ಸಿಕ್ಕಾಪಟ್ಟೆ ರೋಮಾಂಚಕವಾಗಿರಲಿದ್ದು, ವಿದೇಶದಲ್ಲಿ ಶೂಟಿಂಗ್ ಮಾಡೋ ಪ್ಲಾನ್‌ನಲ್ಲಿ ಚಿತ್ರತಂಡವಿದೆ.

ವಿಶೇಷ ಅಂದ್ರೆ ಮಾರ್ಟಿನ್ ಚಿತ್ರದಲ್ಲಿ ಧ್ರುವ ಸರ್ಜಾಗೆ ಎದುರಾಳಿಯಾಗಲಿರೋ ವಿಲನ್ ಬಾಲಿವುಡ್‌ನ ಖ್ಯಾತ ಖಳನಟ ನಿಖಿತಿನ್ ಧೀರ್. ಶಾರುಖ್ಖಾನ್, ದೀಪಿಕಾ ಪಡುಕೋಣೆ ನಟನೆಯ ಚೆನ್ನೆöÊ ಎಕ್ಸೆ÷್ಪಸ್ ಚಿತ್ರದಲ್ಲಿ ತಂಗಬಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮಾರ್ಟಿನ್ ಚಿತ್ರದ ಮೂಲಕ ಎಂಟ್ರಿ ಕೊಡ್ತಿದ್ದಾರೆ ಬಾಲಿವುಡ್ ನಟ ನಿಖಿತಿನ್ ಧೀರ್.

ನಳಿನಾಕ್ಷಿ ,ಕರ್ನಾಟಕ ಟಿವಿ

- Advertisement -

Latest Posts

Don't Miss