ಪ್ರಶಾಂತ್ ನೀಲ್ ಸಿನಿಮಾ ಅಂದ್ರೆ ಪ್ಯಾನ್ ಇಂಡಿಯಾ ವೈಬ್ ಗ್ಯಾರಂಟಿ! ಈಗ ಜೂ.ಎನ್‌ಟಿಆರ್ ಜೊತೆ ಅವರು ಮಾಡ್ತಿರೋ ಬಹುನಿರೀಕ್ಷಿತ ಸಿನಿಮಾಗೆ ಮತ್ತೊಬ್ಬ ಭರ್ಜರಿ ನಟ ಸೇರ್ಪಡೆಯಾಗಿದ್ದಾರೆ. ‘ಡ್ರ್ಯಾಗನ್’ ಅಂತ ಫ್ಯಾನ್ಸ್ ಕರೀತಿರೋ ಈ ಸಿನಿಮಾದಲ್ಲಿ ಇದೀಗ ನಟ ಪ್ರಕಾಶ್ ರಾಜ್ ಎಂಟ್ರಿ ಫಿಕ್ಸ್ ಆಗಿದೆ. ಈಗಾಗಲೇ ಜೂ.ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬೋ ಸಖತ್ ಹೈಪ್ ಕ್ರಿಯೇಟ್ ಮಾಡಿದೆ, ಈಗ ಇದೇ ಸಿನಿಮಾದಲ್ಲಿ ಪ್ರಕಾಶ್ ರಾಜ್ ಎಂಟ್ರಿ ಪಕ್ಕಾ ಆಗಿರೋದು ಸಿನಿ ಪ್ರಿಯರಲ್ಲಿ ಮತ್ತಷ್ಟು ಕುತೂಹಲ ಹುಟ್ಟುಹಾಕಿದೆ. ವರದಿಗಳ ಪ್ರಕಾರ, ನಟ ಪ್ರಕಾಶ್ ರಾಜ್ ‘ಡ್ರ್ಯಾಗನ್’ ಸಿನಿಮಾದಲ್ಲಿ ಸೂಪರ್ ಸ್ಟ್ರಾಂಗ್ ಮತ್ತು ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪ್ರಶಾಂತ್ ನೀಲ್ ತಮ್ಮ ಸಿನಿಮಾಗಳಲ್ಲಿ ಎಲ್ಲಾ ಭಾಷೆಯ ಕಲಾವಿದರನ್ನೂ ಮಿಕ್ಸ್ ಮಾಡೋದು ಹೊಸ ವಿಷಯವೇನಲ್ಲ. ‘ಕೆಜಿಎಫ್’ ನಿಂದ ‘ಸಲಾರ್’ ವರೆಗೂ ಕನ್ನಡದ ಟ್ಯಾಲೆಂಟ್‌ಗೆ ಅವರು ದೊಡ್ಡ ವೇದಿಕೆಯನ್ನ ಸೃಷ್ಟಿಸಿದ್ದಾರೆ. ಈ ಬಾರಿಯೂ ಕನ್ನಡದ ನಟಿ ರುಕ್ಮಿಣಿ ವಸಂತ್ ನಾಯಕಿಯಾಗಿ ಆಯ್ಕೆಯಾಗಿದ್ದು, ಹಲವು ಕನ್ನಡದ ಕಲಾವಿದರು ಮತ್ತು ತಂತ್ರಜ್ಞರು ಸಿನಿಮಾದಲ್ಲಿ ಭಾಗಿಯಾಗಿದ್ದಾರೆ. ಇತ್ತೀಚೆಗೆ ಮಲಯಾಳಂ ಸ್ಟಾರ್ ಟೊವಿನೋ ಥಾಮಸ್‌ಗೆ ಕೂಡ ರೋಲ್ ಆಫರ್ ಹೋಗಿತ್ತು. ಆದರೆ ಅವರು ನೋ ಹೇಳಿದ ಬಳಿಕ ಈಗ ಆ ರೋಲೆ ಗೆ ಪ್ರಕಾಶ್ ರಾಜ್ ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಸುದ್ದಿ ಕೂಡ ಸಿನಿ ವಲಯದಲ್ಲಿ ಜೋರಾಗಿ ಕೇಳಿ ಬರ್ತಿದೆ.
ಜೂ.ಎನ್‌ಟಿಆರ್ ಮತ್ತು ಪ್ರಕಾಶ್ ರಾಜ್ ಕಾಂಬೋ ಈಗಾಗಲೇ ಟಾಲಿವುಡ್‌ನಲ್ಲಿ ಸೂಪರ್ ಹಿಟ್. ‘ಟೆಂಪರ್’, ‘ಬೃಂದಾವನಂ’, ‘ಅಶೋಕ್’, ‘ಸಾಂಬಾ’ ಸಿನಿಮಾಗಳಲ್ಲಿ ಇವರಿಬ್ಬರ ಸ್ಕ್ರೀನ್ ಪ್ರೆಸೆನ್ಸ್ ಭಾರೀ ಸದ್ದು ಮಾಡಿತ್ತು. ವಿಶೇಷವಾಗಿ ‘ಟೆಂಪರ್’ನ ಫೈರ್ ಕೆಮಿಸ್ಟ್ರಿ ಇನ್ನೂ ಫ್ಯಾನ್ಸ್ ಫೇವರಿಟ್.
ಈಗ ಅದೇ ಮ್ಯಾಜಿಕ್ ‘ಡ್ರ್ಯಾಗನ್’ನಲ್ಲಿ ರಿಪೀಟ್ ಆಗುತ್ತಾ? ಇಲ್ಲಾ ಮತ್ತೋಂದು ಹೊಸ ಕ್ರೇಜ್ ಕ್ರಿಯೇಟ್ ಮಾಡುತ್ತಾ ಅಂತ ಕಾದು ನೋಡಬೇಕಿದೆ.




