ನಟ ದುನಿಯಾ ವಿಜಯ್ ಗೆ ಪೊಲೀಸರ ಬುಲಾವ್
ಸ್ಯಾಂಡಲ್ವುಡ್ ಕರಿಚಿರತೆ ನಟ ದುನಿಯಾ ವಿಜಯ್ ಗೆ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ.. ಜೊತೆಗೆ ವಿಚಾರಣೆಗೆ ಹಜಾರಾಗುವಂತ್ತೆ ತಿಳಿಸಿದ್ದಾರೆ
ದುನಿಯಾ ವಿಜಯ್ ಮಗನ ಮೇಲೆ ಹಲ್ಲೆ ಮಾಡಿದ್ದ ಪಾನಿಪುರಿ ಕಿಟ್ಟಿ ಮೇಲೆ ಎಫ್.ಐ. ಆರ್. ದಾಖಲಿಸಲಾಗಿತ್ತು. ನಟ ದುನಿಯಾ ವಿಜಯ್ ಅವರು ದೂರು ಕೊಟ್ಟಿದ್ದರು. 2018 ರ ಪ್ರಕರಣ ಮತ್ತೆ ರೀ ಓಪನ್ ಆಗಿದ್ದು ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಹೈಕೋರ್ಟ್ ಸೂಚನೆ ಮೇರೆಗೆ ಪಾನಿಪುರಿ ಕಿಟ್ಟಿ ಮತ್ತು ಮಾರುತಿ ಗೌಡ ಮೇಲೆ
ಎಫ್.ಐ. ಆರ್. ದಾಖಲಿಸಲಾಗಿದೆ.
ಪಾನಿಪುರಿ ಕಿಟ್ಟಿಯ ಸಹೋದರ ಮಾರುತಿ ಗೌಡ ಅವರನ್ನು ವಿಜಯ್ ಅವರು ಕಾರಲ್ಲಿ ಕರೆದೊಯ್ದಿದ್ದರು. ಕಾರಿನಲ್ಲಿ ಮಾರುತಿಗೆ ಹಿಗ್ಗಮುಗ್ಗ ಥಳಿಸಿದ್ದ ವಿಜಯ್ ಅವರ ತಂಡ ಅವರ ಮೇಲೆ ಹಲ್ಲೆ ಮಾಡಿತ್ತು.
ನನ್ನ ಮಗ ಸಾಮ್ರಾಟ್ ನಿಗೆ ಬೈದು ಬೆದರಿಕೆ ಹಾಕಿದ್ದಾರೆ ಎಂದು ವಿಜಯ್ ದೂರು ನೀಡಿದ್ದರು. ಪಾನಿಪುರಿ ಕಿಟ್ಟಿ ಅವರು ವಿಜಯ್ ಮೇಲೆ ಸೆಕ್ಷನ್ 307ರ ಅಡಿಯಲ್ಲಿ ಕೇಸ್ ದಾಖಲಿಸಿದ್ದರು. ಸದ್ಯ ವಿಜಯ್ ಮೇಲಿರುವ ಕೇಸ್ ಕೋರ್ಟ್ನಲ್ಲಿ ನಡೆಯುತ್ತಿದೆ.