ದಿಗ್ಭ್ರಮೆಯಿಂದ ಮೂರ್ಛೆ ಹೋದ ನಟ, ಈ ಸಮಸ್ಯೆ ಎಷ್ಟು ಅಪಾಯಕಾರಿ ಗೊತ್ತಾ?

ಬಾಲಿವುಡ್‌ನ ಹಿರಿಯ ನಟ ಗೋವಿಂದ ಅಚಾನಕವಾಗಿ ಮೂರ್ಛೆ ಹೋಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯಕೀಯ ಮೂಲಗಳ ಪ್ರಕಾರ, ಅವರಿಗೆ ದಿಗ್ಭ್ರಮೆ ತೊಂದರೆ ಕಾಣಿಸಿಕೊಂಡಿದ್ದು, ಈ ಕಾರಣದಿಂದ ಅವರು ತಾತ್ಕಾಲಿಕವಾಗಿ ಪ್ರಜ್ಞೆ ಕಳೆದುಕೊಂಡಿದ್ದಾರೆ.

ಮೂಲಗಳ ಪ್ರಕಾರ, ನಟ ಗೋವಿಂದ ಇದ್ದಕ್ಕಿದ್ದಂತೆ ತಲೆತಿರುಗಿ ನೆಲಕ್ಕೆ ಬಿದ್ದರು. ವೈದ್ಯರು ತಕ್ಷಣ ಚಿಕಿತ್ಸೆ ನೀಡಿದ್ದು, ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಗೋವಿಂದ ಅವರಿಗೆ ಕಂಡುಬಂದ ಸಮಸ್ಯೆ ದಿಗ್ಭ್ರಮೆ. ಇದು ಪ್ರತ್ಯೇಕ ಕಾಯಿಲೆಯಲ್ಲ. ಮೆದುಳಿಗೆ ತಾತ್ಕಾಲಿಕವಾಗಿ ಆಮ್ಲಜನಕ ಕಡಿಮೆ ಸಿಗುವ ಲಕ್ಷಣವಾಗಿದೆ. ಇದರ ಪರಿಣಾಮವಾಗಿ ಕೆಲಕ್ಷಣಗಳ ಕಾಲ ಪ್ರಜ್ಞೆ ಕಳೆದುಕೊಳ್ಳುವುದು ಸಾಮಾನ್ಯ.

ಹಾಗಾದ್ರೆ ದಿಗ್ಭ್ರಮೆ ಎಂದರೇನು? ವೈದ್ಯರ ಪ್ರಕಾರ, ದಿಗ್ಭ್ರಮೆ ಎಂದರೆ ತಲೆತಿರುಗುವಿಕೆ, ಗೊಂದಲ, ಗಮನ ಕೆಂದ್ರೀಕರಿಸಲು ಆಗದಿರುವುದು, ಸ್ಮರಣಶಕ್ತಿ ಕುಗ್ಗುವುದು ಮತ್ತು ಪರಿಸ್ಥಿತಿಯ ಅರಿವು ತಪ್ಪುವುದು ಹೀಗೆ ಅನೇಕ ಲಕ್ಷಣಗಳ ಸಂಯೋಜನೆಯಾಗಿದೆ. ಇದು ಹಲವು ಕಾರಣಗಳಿಂದ ಉಂಟಾಗಬಹುದು.

ದಿಗ್ಭ್ರಮೆ ಸಮಸ್ಯೆಗೆ ನಿಜವಾದ ಕಾರಣ ಏನು ಅನ್ನೋದನ್ನ ನೋಡೋದಾದ್ರೆ
ಸೋಂಕುಗಳು, ಪಾರ್ಶ್ವವಾಯು, ಬುದ್ಧಿಮಾಂದ್ಯತೆಯಂತಹ ವೈದ್ಯಕೀಯ ಪರಿಸ್ಥಿತಿಗಳು, ತಲೆಗೆ ಗಾಯಗಳು, ಕಡಿಮೆ ರಕ್ತದ ಸಕ್ಕರೆ, ನಿರ್ಜಲೀಕರಣದಂತಹ ದೈಹಿಕ ಸಮಸ್ಯೆಗಳು, ಮದ್ಯಪಾನ, ಕೆಲವು ಔಷಧಿಗಳು ಅಥವಾ ಮಾದಕ ದ್ರವ್ಯಗಳ ದುರುಪಯೋಗ, ನಿದ್ರೆಯ ಕೊರತೆ​, ಮೆದುಳಿನ ಗೆಡ್ಡೆಗಳು
ಕೆಲವು ಹಾರ್ಮೋನ್ ಅಥವಾ ಎಲೆಕ್ಟ್ರೋಲೈಟ್ ಅಸಮತೋಲನಗಳು ಕಾರಣವಾಗಿದೆ.

ಹಾಗಾದ್ರೆ ಎಷ್ಟು ಅಪಾಯಕಾರಿ ಅನ್ನೋದು ಗೊತ್ತಾ? ವೈದ್ಯರ ಪ್ರಕಾರ, ಮೂರ್ಛೆ ಹೋಗುವುದು ಬಹುತೇಕ ಸಂದರ್ಭಗಳಲ್ಲಿ ಗಂಭೀರ ಸಮಸ್ಯೆಯಲ್ಲ. ಇದು ಶಾಖ, ಹಸಿವು ಅಥವಾ ಒತ್ತಡದಿಂದಲೂ ಉಂಟಾಗಬಹುದು. ಆದರೆ, ಪದೇಪದೇ ಮೂರ್ಛೆ ಹೋಗುವುದು ಅಥವಾ 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಯಲ್ಲಿ ಸಂಭವಿಸುವುದು ಗಂಭೀರ ಕಾಯಿಲೆಯ ಸೂಚನೆಯಾಗಿರಬಹುದು. ಸದ್ಯ ಗೋವಿಂದ ಅವರ ಸ್ಥಿತಿ ಈಗ ಸ್ಥಿರವಾಗಿದ್ದು, ಮುಂದಿನ 24 ಗಂಟೆಗಳ ಕಾಲ ವೈದ್ಯರ ನಿಗಾದಲ್ಲಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author