ಕಿರುತೆರೆ ನಟಿಯೊಂದಿಗೆ ನಿರ್ಮಾಪಕನ ವಿವಾಹ: ಫ್ಯಾನ್ಸ್ ಏನಂದ್ರು ಗೊತ್ತಾ..?!

Film News:

ತಮಿಳು ಕಿರುತೆರೆಯಲ್ಲಿ ಹೆಸರು ಮಾಡಿರುವ ನಟಿ, ನಿರೂಪಕಿಮಹಾಲಕ್ಷ್ಮೀ ಅವರ ವಿವಾಹ ಇಂದು (ಸೆಪ್ಟೆಂಬರ್ 1) ನಡೆದಿದೆ. ಖ್ಯಾತ ನಿರ್ಮಾಪಕ ರವೀಂದರ್​ ಚಂದ್ರಶೇಖರನ್ ಅವರೊಂದಿಗೆ ಮಹಾಲಕ್ಷ್ಮೀ ಅವರ ಮದುವೆ ಕಾರ್ಯ ನಡೆದಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಮಹಾಲಕ್ಷ್ಮೀ ತಿರುಪತಿಯಲ್ಲಿ ಸಪ್ತಪದಿ ತುಳಿದಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ನಟಿಯ ಆಯ್ಕೆಯ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ತಿರುಪತಿಯಲ್ಲಿ ಈ ಮದುವೆ ಕಾರ್ಯ ನಡೆದಿದೆ. ಇಬ್ಬರಿಗೂ ಇದು ಎರಡನೇ ಮದುವೆ. ‘ನನ್ನ ಜೀವನದಲ್ಲಿ ನಿಮ್ಮನ್ನು ಪಡೆದುಕೊಳ್ಳಲು ನಾನು ತುಂಬಾ ಅದೃಷ್ಟ ಮಾಡಿದ್ದೆ. ನನ್ನ ಜೀವನದಲ್ಲಿ ನೀವು ಪ್ರೀತಿ ತುಂಬಿದ್ದೀರಿ. ಲವ್​ ಯೂ’ ಎಂದು ಮಹಾಲಕ್ಷ್ಮೀ ಬರೆದುಕೊಂಡಿದ್ದಾರೆ. ಈ ಫೋಟೋ ಸಾಕಷ್ಟು ವೈರಲ್ ಆಗುತ್ತಿದೆ.

ಕೆಲವರು ಮಹಾಲಕ್ಷ್ಮೀ ಅವರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಶುಭಾಶಯ ತಿಳಿಸಿದ್ದಾರೆ. ಆದರೆ, ಒಂದು ವರ್ಗದ ಜನರು ಈ ವಿವಾಹದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ‘ಇದು ನಿಜವಾದ ಮದುವೆಯೋ ಅಥವಾ ಧಾರಾವಾಹಿಯ ಮದುವೆಯೋ’ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ‘ನನ್ನ ಬಳಿ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ’ ಎಂದು ಕಮೆಂಟ್ ಮಾಡಿದ್ದಾರೆ.

ರವೀಂದರ್‌ ಚಂದ್ರಶೇಖರನ್ ಹಾಗೂ ಮಹಾಲಕ್ಷ್ಮೀ ಒಂದೇ ಇಂಡಸ್ಟ್ರಿಯಲ್ಲಿ ಇದ್ದವರು. ಇಬ್ಬರೂ ಒಟ್ಟಾಗಿ ಕೆಲಸ ಮಾಡಿದ್ದರು. ರವೀಂದರ್ ನಿರ್ಮಾಣದ ‘ವಿಡಿಯುಮ್‌ ವಾರೈ ಕಾಥಿರು’ ಸಿನಿಮಾದಲ್ಲೂ ಮಹಾಲಕ್ಷ್ಮೀ ಅಭಿನಯಿಸಿದ್ದರು. ಆ ಚಿತ್ರದಲ್ಲಿ ವಿದಾರ್ಥ್‌ ಮತ್ತು ವಿಕ್ರಾಂತ್ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದರು.

ನಟಿ ನಿರ್ಮಾಪಕ ನಿರ್ಮಿಸಿದ ಅನೇಕ ವೆಬ್ ಸೀರೀಸ್ ಹಾಗು  ದಾರವಾಹಿಗಳಲ್ಲಿ ನಟಿಸಿದ್ದಾರೆ ಎನ್ನಲಾಗುತ್ತಿದೆ. ಬಹಳ ದೀರ್ಘ ವರ್ಷಗಳಿಂದಲೇ ಇಬ್ಬರೂ ಪರಿಚಿತ ಎನ್ನಲಾಗುತ್ತಿದೆ.ಸದ್ಯ  ಇವರಿಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು ನಾಯಕಿಗೆ ಮಗು ಕೂಡ  ಇದೆ ಎಂಬುವುದಾಗಿ ತಿಳಿದು ಬಂದಿದೆ. ಏನೇ ಆದರು ವಿವಾಹ ಎನ್ನುವುದು ಸ್ವರ್ಗದಲ್ಲೇ  ನಿಶ್ಚಿತ  ಎಂಬುವ ನಂಬಿಕೆಗೆ ಈ ವಿವಾಹವು ಸಾಕ್ಷಿ ಎಂಬಂತಿದೆ. ಇವರಿಬ್ಬರ  ವಿವಾಹ ಜೀವನ ಸಖವಾಗಿರಲಿ ಎಂಬುವುದೇ ನಮ್ಮ ಆಶಯ.

ಒರಿಸ್ಸಾ ಬೀಚ್‌ನಲ್ಲಿ ಕಿಚ್ಚ ಸುದೀಪ್.!

ಮಲಯಾಳಂ ನಟ ಲಾಲೇಟ್ಟ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ ಚಂದನವನದ ನಿರ್ದೇಶಕ…!

ಹೊರಗಿನಿಂದ ಬಿಗ್ ಬಾಸ್ ಮನೆಯಲ್ಲಿ ಹುಡುಗರಿಗೆ ಸಿಗುತ್ತಂತೆ ಆ ವಸ್ತು…? ಸೋನು ಗೌಡ ಲೀಕ್ ಮಾಡಿದ್ರು ಮನೆ ಸೀಕ್ರೇಟ್..!

About The Author