ವೇಶ್ಯೆ ಪಾತ್ರದಲ್ಲಿ ನಟಿ ಮಯೂರಿ.!

‘ಅಶ್ವಿನಿ ನಕ್ಷತ್ರ’ ಧಾರಾವಾಹಿಯ ಮೂಲಕ ನಟಿ ಮಯೂರಿ ಕಿರುತೆರೆಗೆ ಎಂಟ್ರಿ ಕೊಟ್ಟು ಎಲ್ಲರ ಮನೆ ಮಾತಾದರು. ನಂತರ ‘ಕೃಷ್ಣ ಲೀಲಾ’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದರು. ಹಾಗೆಯೆ ಈ ಸಿನಿಮಾ ಇವರಿಗೆ ದೊಡ್ಡ ಬ್ರೇಕ್ ನೀಡಿತು. ನಂತರ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮದುವೆಯಾದ ಮೇಲೆ ನಟನೆಯಿಂಯ ಬ್ರೇಕ್ ತೆಗೆದುಕೊಂಡಿದ್ದ ನಟಿ ಮಯೂರಿ ಇದೀಗ ವಿಭಿನ್ನ ಕಥೆಯುಳ್ಳ ಒಂದ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ವ್ಹೀಲ್‌ ಚೇರ್‌ ರೋಮಿಯೋ’ ಎಂಬ ಸಿನಿಮಾದಲ್ಲಿ ನಟಿ ಮಯೂರಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಮಯೂರಿ ಮತ್ತೆ ತಮ್ಮ ಸಿನಿ ಜರ್ನಿಯನ್ನು ಮುಂದುವರಿಸಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಮಯೂರಿ ದೃಷ್ಟಿ ವಿಕಲಚೇತನ ವೇಶ್ಯೆ ಪಾತ್ರದಲ್ಲಿ ನಟಿಸಿದ್ದಾರೆ.

‘ಬಹಳ ದಿನಗಳ ನಂತರ ನನ್ನನ್ನು ನಾನು ಬೆಳ್ಳಿತೆರೆ ಮೇಲೆ ನೋಡಿಕೊಳ್ಳುವಂತಹ ಸಮಯ ಈಗ ಬಂದಿದೆ. ‘ವ್ಹೀಲ್‌ ಚೇರ್‌ ರೋಮಿಯೋ’ ಚಿತ್ರ ಬದುಕಿನಲ್ಲಿ ಬಹಳ ವಿಭಿನ್ನ ಸಿನಿಮಾ. ಇದೊಂದು ಪ್ರಯೋಗಾತ್ಮಕ ಸಿನಿಮಾ. ಸಾಕಷ್ಟು ಜನ ನನಗೆ ‘ನೀವು ವೇಶ್ಯೆಯ ಪಾತ್ರವನ್ನು ಹೇಗೆ ಒಪ್ಪಿಕೊಂಡ್ರಿ’ ಎಂದು ಕೇಳುತ್ತಿದ್ದಾರೆ. ಈ ಸಿನಿಮಾ ನೋಡಿದ ಮೇಲೆ ನಾನ್ಯಾಕೆ ಅದನ್ನು ಒಪ್ಪಿಕೊಂಡೆ ಎಂದು ಗೊತ್ತಾಗುತ್ತದೆ’ ಎಂದು ಮಯೂರಿ ತಿಳಿಸಿದ್ದಾರೆ.

ಸಮಾಜಕ್ಕೆ ‘ವೇಶ್ಯೆ’ ಪದದ ಬಗ್ಗೆ ಬೇರೆಯದ್ದೇ ದೃಷ್ಟಿಕೋನವಿದೆ. ಒಮ್ಮೆ ಆ ಕ್ಷೇತ್ರಕ್ಕೆ ಯಾಕೆ ಬರುತ್ತಾರೆ ಎಂಬುದನ್ನು ತಿಳಿದುಕೊಂಡರೆ ಬಹುಶಃ ನಮ್ಮ ದೃಷ್ಟಿಕೋನ ಬದಲಾಗಬಹುದು. ಯಾರೂ ಕೂಡ ಈ ವೃತ್ತಿಯನ್ನು ಬೇಕೆಂದು ಆಯ್ಕೆ ಮಾಡಿಕೊಂಡಿರುವುದಿಲ್ಲ. ಅದಕ್ಕೆ ಅದರದ್ದೇ ಆದ ಕಾರಣವಿರುತ್ತದೆ’ ಎಂದಿದ್ದಾರೆ.

ಇನ್ನು ಈ ಸಿನಿಮಾ ಇದೆ ಶುಕ್ರವಾರ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದಾರೆ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ

 

About The Author