ಕನ್ನಡ ಚಿತ್ರರಂಗದ ಡಾ.ರಾಜ್ ಕುಟುಂಬದವರ ದೊಡ್ಮನೆಯ ದೊಡ್ಡ ಗುಣಗಳ ಬಗ್ಗೆ ನಾವೇನು ಬಿಡಿಸಿ ಹೇಳ್ಬೇಕಿಲ್ಲ. ಯಾರೇ ಕಷ್ಟ ಅಂತಾ ಬಂದ್ರು ಕೈ ಎತ್ತಿಕೊಡುವ ನೀಡು ಗುಣ ಅವರದ್ದು. ಶಿವಣ್ಣ, ಪುನೀತ್, ರಾಘಣ್ಣ ಯಾರೇ ಆಗಲೇ ನಂಬಿದವರನ್ನು ಕೈ ಬಿಡೋದಿಲ್ಲ ಅನ್ನೋದಕ್ಕೆ ನಮ್ ಕಣ್ಮುಂದೆಯ ಸಾಕಷ್ಟು ಉದಾಹರಣೆಗಳಿವೆ.
ಅದರಂತೆ ಇತ್ತೀಚೆಗಷ್ಟೇ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ್ದ ದೊಡ್ಮನೆ ‘ಯುವರತ್ನ’ ಪುನೀತ್ ರಾಜ್ ಕುಮಾರ್ ಮತ್ತೊಮ್ಮೆ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ಅಪ್ಪು ಅಪ್ಪಟ ಅಭಿಮಾನಿಯೊಬ್ಬರನ್ನು ಭೇಟಿಯಾಗಿ ಅವರ ಆಸೆ ಈಡೇರಿಸಿದ್ದಾರೆ. ತುಮಕೂರಿನ ಕೊರಟಗೆರೆ ತಾಲೂಕಿನ ತೋವಿನಕೆರೆ ಗ್ರಾಮದ ದೇವಿಪ್ರಿಯಾ ಎನ್ನುವ ಬಾಲಕಿಯನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
ಬೇಸರದ ವಿಷ್ಯ ಏನಂದ್ರೆ ದೇವಿಪ್ರಿಯಾ ಕಳೆದೆರೆಡು ವರ್ಷಗಳಿಂದ ಈ ಬಾಲಕಿ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು, ಓಡಾಡದ ಪರಿಸ್ಥಿತಿಯಲ್ಲಿದ್ದಾಳೆ. ಜೀವನದಲ್ಲಿ ಒಮ್ಮೆಯಾದ್ರು ಅಪ್ಪು ಭೇಟಿಯಾಗಿ ಮಾತನಾಡಿಬೇಕು ಎನ್ನುವ ದೇವಿಪ್ರಿಯಾ ಆಸೆಯನ್ನು ಪುನೀತ್ ಈಡೇರಿಸಿದ್ದಾರೆ.
ಬಾಲಕಿಯ ಆಸೆ ತಿಳಿದು ಆಕೆಯನ್ನು ಭೇಟಿಯಾಗಿ ಮಾತನಾಡಿಸಿ ಧೈರ್ಯ ತುಂಬಿದ್ದಾರೆ. ಅಪ್ಪು ಪ್ರೀತಿಯ ಕಂಡು ಆ ಪುಟ್ಟ ಅಭಿಮಾನಿ ಸಖತ್ ಖುಷಿಪಟ್ಟಿದ್ದಾಳೆ. ಪುನೀತ್ ನೋಡಿ ದೇವಿಪ್ರಿಯಾ ಕುಟುಂಬದವರು ಸಹ ಸಂತಸಪಟ್ಟಿದ್ದಾರೆ. ಸದ್ಯ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು, ಅಪ್ಪು ದೊಡ್ಡ ಗುಣ ನೋಡಿ ಫ್ಯಾನ್ಸ್ ಪುನೀತರಾಗಿದ್ದಾರೆ.