Monday, April 29, 2024

Latest Posts

ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮತ್ತೊಂದು ಮದುವೆಯ ಸಂಭ್ರಮ…! ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾದ ಮನೋರಂಜನ್…!

- Advertisement -

ಸ್ಯಾಂಡಲ್ ವುಡ್ ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮತ್ತೊಂದು ಮದುವೆ ಸಂಭ್ರಮ ಮನೆ ಮಾಡ್ತಿದೆ. ಈಗಾಗ್ಲೇ ಅದ್ಧೂರಿಯಾಗಿ ಪ್ರೀತಿಯ ಪುತ್ರಿಯ ವಿವಾಹ ಮಾಡಿಸಿರೋ ರವಿಮಾಮ ಮಗನ ಮದುವೆ ತಯಾರಿ ನಡೆಸ್ತಿದ್ದಾರೆ. ಸಿನಿ ದುನಿಯಾದಲ್ಲಿ ಮಿಂಚುತ್ತಿರುವ ರವಿಚಂದ್ರನ್ ಪುತ್ರ ಮನೋರಂಜನ್ ವೈವಾಹಿಕ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ.

2011ರಲ್ಲಿ ಮನೋರಂಜನ್ ಮದುವೆ ಆಗುವುದಾಗಿ ಹೇಳಿದ್ದರು. ಸಿನಿಮಾಗಳಲ್ಲಿ ಬ್ಯುಸಿಯಾಗಿರೋದ್ರಿಂದ ಈ ವರ್ಷ ಅಂದ್ರೆ 2021ರಲ್ಲಿ ನೂತನ ಬಾಳಿಗೆ ಹೆಜ್ಜೆ ಹಾಕಲಿದ್ದಾರಂತೆ. ಹಾಗಿದ್ರೆ ಲವ್ ಮ್ಯಾರೇಜ್ ಇಲ್ಲ ಆರೆಂಜ್ ಮ್ಯಾರೇಜ್ ಅಂದ್ರೆ ಮನು ಹೇಳೋದು ಅಪ್ಪ-ಅಮ್ಮ ಇಷ್ಟಪಡುವ ಹುಡ್ಗಿಯನ್ನು ಮದುವೆ ಆಗುತ್ತೇನೆ ಅಂತಾ. ನನಗೆ ಈಗ 32 ವರ್ಷ ವಯಸ್ಸು. ಅಪ್ಪ-ಅಮ್ಮ ಹುಡುಗಿ ನೋಡುವ ಶಾಸ್ತ್ರ ಆರಂಭಿಸಿದ್ದಾ ರೆ ಅಂತಾ ಹೇಳಿದ್ದಾರೆ.

ಸದ್ಯ ಮನೋರಂಜನ್ ಬಹುನಿರೀಕ್ಷಿತ ಮುಗಿಲ್ ಪೇಟೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಮುಂದಿನ ತಿಂಗಳಿನಿಂದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ. ಮನೋರಂಜನ್ ಪ್ರಾರಂಭ ಸಿನಿಮಾ ಶೂಟಿಂಗ್ ಮುಗಿಸಿ ರಿಲೀಸ್ ರೆಡಿಯಿದೆ. ಎನೀ ವೇ ಕನ್ನಡ ಚಿತ್ರರಂಗ ಈ ವರ್ಷ ಅದ್ಧೂರಿ ಮದುವೆಯೊಂದಕ್ಕೆ ಸಾಕ್ಷಿಯಾಗಲಿದೆ.

- Advertisement -

Latest Posts

Don't Miss