Friday, July 4, 2025

Latest Posts

‘ಯಶೋದ’ ಸಿನಿಮಾದ ನಟಿ ಸಮಂತಾ ಫಸ್ಟ್‌ ಲುಕ್ ರಿಲೀಸ್.!

- Advertisement -

ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ಸಮಂತಾ ವಿಚೇದನ ಪಡೆದ ಬಳಿಕ ಬಾರಿ ಸುದ್ದಿಯಲ್ಲಿದ್ದಾರೆ. ಇದೀಗ ಅವರ ಹೊಸ ಸಿನಿಮಾದ ಸಣ್ಣ ವಿಡಿಯೋ ತುಣುಕನ್ನು ಬಿಡುಗಡೆ ಮಾಡಿದ್ದು, ಆ ವಿಡಿಯೋ ಬಾರಿ ಕುತೂಹಲವನ್ನು ಸೃಷ್ಟಿಸಿದೆ.

ಸಮಂತಾ ಅಭಿನಯದ ಹೊಸ ಸಿನಿಮಾ ‘ಯಶೋದಾ’. ಈ ಚಿತ್ರ ಶ್ರೀದೇವಿ ಮೂವಿಸ್‌ ಬ್ಯಾನರ್‌ನಲ್ಲಿ ಸಿದ್ಧವಾಗಿದೆ. ಇನ್ನು ಈ ಸಿನಿಮಾ ಶೂಟಿಂಗ್‌ ಜೊತೆಗೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿಯೂ ಸಹ ತೊಡಗಿದೆ. ‘ಯಶೋದಾ’ ಸಿನಿಮಾ ಇದೀಗ ಸಣ್ಣ ವಿಡಿಯೋ ತುಣುಕನ್ನು ಬಿಡುಗಡೆ ಮಾಡಿದೆ. ಈ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಶ್ರೀದೇವಿ ಮೂವಿಸ್‌ ಬ್ಯಾನರ್‌ನಲ್ಲಿ ಸಿದ್ಧವಾಗಿರುವ ‘ಯಶೋದಾ’ ಸಿನಿಮಾ ಇದೀಗ ಸಣ್ಣ ವಿಡಿಯೋ ತುಣುಕನ್ನು ಹೊರತಂದಿದ್ದು, ಇದು ನಾಯಕಿ ಪ್ರಧಾನ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ನಟಿ ಸಮಂತಾ ರುತ್‌ಪ್ರಭು ಯಶೋದಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಸಿನಿಮಾ ಶೂಟಿಂಗ್‌ ಜತೆಗೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ಈ ಸಿನಿಮಾ ತಂಡ ತೊಡಗಿದೆ.

ಈ ಸಿನಿಮಾ ಶ್ರೀದೇವಿ ಪ್ರೊಡಕ್ಷನ್‌ನ 14ನೇ ಸಿನಿಮವಾಗಿದೆ. ಈ ಚಿತ್ರಕ್ಕೆ ಹರಿ ಮತ್ತು ಹರೀಶ್‌ ನಿರ್ದೇಶನ ಮಾಡಿದ್ದು, ಶಿವಲೆಂಕಾ ಕೃಷ್ಣ ಪ್ರಸಾದ್‌ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಸಿನಿಮಾ ಬಗ್ಗೆ ನಿರ್ಮಾಪಕರು ಮಾತನಾಡಿದ್ದು, “ಫ್ಯಾಮಿಲಿ ಮ್ಯಾನ್‌ 2′ ವೆಬ್‌ ಸಿರೀಸ್‌ ಮೂಲಕ ಪ್ಯಾನ್‌ ಇಂಡಿಯಾ ಜನರನ್ನು ಸಮಂತಾ ತಲುಪಿದ್ದಾರೆ. ಆ ಒಂದು ಕಾರಣಕ್ಕೆ ಎಲ್ಲಿಯೂ ಕೂಡ ಕಾಂಪ್ರಮೈಸ್‌ ಆಗದೇ, ಎಲ್ಲ ಕಡೆ ಸಲ್ಲುವ ಸಿನಿಮಾ ಮಾಡಿದ್ದೇವೆ. ಈ ಸಿನಿಮಾದಲ್ಲಿ ಸಮಂತಾ ಅವರ ಡೆಡಿಕೇಷನ್‌ ತೆರೆಮೇಲೆ ಕಾಣಿಸಲಿದೆ. ಅವರ ನಟನೆಯನ್ನು ನೋಡುವುದೇ ಒಂದು ಚಂದ” ಎಂದು ಹೇಳಿದ್ದಾರೆ.

ನಂತರ ಚಿತ್ರೀಕರಣದ ಬಗ್ಗೆಯೂ ಮಾಹಿತಿ ನೀಡಿರುವ ಅವರು, “ಚಿತ್ರದ ಕ್ಲೈಮ್ಯಾಕ್ಸ್‌ ಹಂತವನ್ನು ಏಪ್ರಿಲ್‌ನಲ್ಲಿ ಚಿತ್ರೀಕರಿಸಿದ್ದು, ಕೊಡೈಕೆನಲ್‌ನಲ್ಲಿ ಚಿತ್ರೀಕರಿಸಲಾಗಿದೆ. ಶೇ. 80 ಭಾಗದ ಶೂಟಿಂಗ್‌ ಮುಕ್ತಾಯವಾಗಿದ್ದು, ಹೈದರಾಬಾದ್‌ನಲ್ಲಿ ಕೊನೇ ಶೆಡ್ಯೂಲ್‌ ನಡೆಯುತ್ತಿದೆ. ಇನ್ನು ಜೂನ್‌ 1ಕ್ಕೆ ಶೂಟ್‌ ಮುಗಿಸಲಿದ್ದೇವೆ. ಇಡೀ ಸಿನಿಮಾದಲ್ಲಿ ಗ್ರಾಫಿಕ್ಸ್‌ ಕೆಲಸ ಪ್ರಮುಖ ಪಾತ್ರ ವಹಿಸಲಿದೆ. ನಿರ್ದೇಶಕರ ಕೆಲಸವೂ ಇಂಪ್ರೆಸಿವ್‌ ಆಗಿದೆ” ಎಂದು ತಿಳಿಸಿದ್ದಾರೆ.

ಅದಷ್ಟೇ ಅಲ್ಲದೆ, ಇದು ಕೇವಲ ತೆಲುಗಿನಲ್ಲಿ ಮಾತ್ರವಲ್ಲದೆ, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಕೂಡ ಬಿಡುಗಡೆಯಾಗಲಿದೆ. ಚಿತ್ರದ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು, ಆಗಸ್ಟ್‌ 12ಕ್ಕೆ ತೆರೆಯ ಮೇಲೆ ತರಲು ತೀರ್ಮಾನ ಮಾಡಲಾಗಿದೆ. ಇನ್ನು ಈ ಚಿತ್ರದಲ್ಲಿ ಸ್ಟಾರ್‌ ನಟರ ದೂಡ್ಡ ಬಳಗವೇ ಇದ್ದು, ವರಲಕ್ಷ್ಮೀ ಶರತ್‌ಕುಮಾರ್‌, ಉನ್ನಿ ಮುಕುಂದನ್‌, ರಾವ್‌ ರಮೇಶ್‌, ಮುರಳಿ ಶರ್ಮಾ, ಸಂಪತ್‌ ರಾಜ್, ಶತ್ರು, ಮಧುರಿಮಾ, ಕಲ್ಪಿಕಾ ಗಣೇಶ್‌, ದಿವ್ಯಾ ಶ್ರೀಪಾದ್‌, ಪ್ರಿಯಾಂಕಾ ಶರ್ಮಾ ಸೇರಿ ಹಲವರು ಕಾಣಿಸಿಕೊಂಡಿದ್ದಾರೆ.

ಇನ್ನು ತಾಂತ್ರಿಕ ವರ್ಗಕ್ಕೆ ಬಂದರೆ ಮಣಿಶರ್ಮಾ ಸಂಗೀತ, ಪಲ್ಗುಮ್‌ ಚಿನ್ನರಾಯನ, ಡಾ.ಚಲ್ಲ ಭಾಗ್ಯಲಕ್ಷ್ಮಿ ಸಂಭಾಷಣೆ, ಚಂದ್ರಬೋಸ್‌ ರಾಮಜೋಗಯ್ಯ ಶಾಸ್ತ್ರೀ ಸಾಹಿತ್ಯ, ಎಂ.ಸುಕುಮಾರ್‌ ಛಾಯಾಗ್ರಹಣ ಚಿತ್ರಕ್ಕಿದೆ. ಹಾಗೂ ಮಾರ್ತಾಂಡ್‌ ವೆಂಕಟೇಶ್‌ ಸಂಕಲನ ಮಾಡುತ್ತಿದ್ದಾರೆ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ

 

- Advertisement -

Latest Posts

Don't Miss