ಸೋನೂ ಸೂದ್.. ಬಾಲಿವುಡ್, ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್‌ನಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಿದ ನಾಯಕ. ಆದ್ರೆ ನಿಜ ಜೀವನದಲ್ಲಿ ಮಾತ್ರ ರಿಯಲ್ ಹೀರೋ. ಲಾಕ್‌ಡೌನ್ ಟೈಮ್‌ನಲ್ಲಿ ಬಡಬಗ್ಗರಿಗೆ, ಅಸಹಾಯಕರಿಗೆ ಸಹಾಯ ಮಾಡಲು ಶುರುಮಾಡಿದ ಸೋನು ಇಂದಿಗೂ ಕೂಡ ಹಲವರ ನೆರವಿಗೆ ಧಾವಿಸುತ್ತಿದ್ದಾರೆ. ಕರ್ನಾಟಕ ಜನರಿಗೂ ಕೂಡ ಸೋನುಸೂದ್ ಸಹಾಯ ಮಾಡಿದ್ದಾರೆ.

ಪುಸ್ತಕ, ಬಟ್ಟೆ, ಧವಸ ಧಾನ್ಯ ದಾನದಿಂದ ಹಿಡಿದು, ನಿರ್ಗತಿಕರಿಗೆ ತಮ್ಮ ಊರಿಗೆ ತೆರಳಲು ಬಸ್ ವ್ಯವಸ್ಥೆ ಮಾಡಿ ತಮ್ಮ ತವರಿಗೆ ಹೋಗಿ ತಲುಪಲು ಸೋನು ಸಹಕರಿಸಿದ್ದಾರೆ. ಇತ್ತೀಚೆಗಷ್ಟೇ ಆನ್‌ಲೈನ್ ತರಬೇತಿ ಪಡೆಯುವುದಕ್ಕಾಗಿ ವಿದ್ಯಾರ್ಥಿಗಳು ಕಷ್ಟ ಪಡುತ್ತಿದ್ದಾರೆಂದು ತಿಳಿದ ಸೋನು, ಓರ್ವ ವಿದ್ಯಾರ್ಥಿನಿಗಾಗಿ ಇಡೀ ಊರಿಗೆ ಇಂಟರ್‌ನೆಟ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಹೀಗೆ ಸಮಾಜ ಸೇವೆ ಮಾಡುತ್ತಿರುವ ಸೋನ್‌ಸೂದ್‌ಗೆ ಪ್ರತಿದಿನ ಸಹಾಯ ಕೇಳಿಕೊಂಡು ಹಲವರು ಟ್ವೀಟ್ ಮಾಡುತ್ತಾರೆ. ಅವರ ಟ್ವೀಟ್‌ಗೆ ಸ್ಪಂದಿಸುವ ಸೋನು, ತಮಗಾದ ಸಹಾಯ ಮಾಡುತ್ತಾರೆ. ಆದ್ರೆ ಯುವಕನೊಬ್ಬ ಸೋನೂಸೂದ್ ಬಳಿ ಐ ಫೋನ್‌ಗಾಗಿ ಬೇಡಿಕೆ ಇಟ್ಟಿದ್ದಾನೆ. ನನಗೆ ಐ ಫೋನ್ ಕೊಡಿಸಿ, ಈ ಬಗ್ಗೆ ನಾನು ನಿಮಗೆ 20 ಬಾರಿ ಟ್ವೀಟ್ ಮಾಡಿದ್ದೇನೆ ಎಂದು ಈಶಾನ್ ದ್ವಿವೇದಿ ಎಂಬ ಯುವಕ ಬರೆದುಕೊಂಡಿದ್ದಾನೆ.
ಇದಕ್ಕೆ ತಕ್ಕಂತೆ ರಿಪ್ಲೈ ಕೊಟ್ಟ ನಟ ಸೋನುಸೂದ್, ನನಗೂ ಐ ಫೋನ್ ಬೇಕು, ನಾನು ಇದಕ್ಕಾಗಿ 21 ಬಾರಿ ಟ್ವೀಟ್ ಮಾಡುವೆ ಎಂದು ರಿಪ್ಲೈ ಕೊಟ್ಟಿದ್ದಾರೆ. ಬಡಬಗ್ಗರಿಗೆ ನಿರ್ಗತಿಕರಿಗೆ ಸಹಾಯ ಮಾಡಲು ಮುಂದಾಗಿರುವ ಸೋನು ಬಳಿ, ಈ ರೀತಿ ಬೇಡಿಕೆ ಇಟ್ಟಿರುವ ಯುವಕನಿಗೆ ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ಕಾಮೆಂಟ್ ಬರುತ್ತಿದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

