ಸಾಕಷ್ಟು ಹೆಸರು ಮಾಡಿರುವ ನಟಿ ತಾರಾ ಅವರು ತಮ್ಮ ಅದ್ಭುತ ನಟನೆಯಿಂದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅನೇಕ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರ ಕಾರು ಚಾಲಕನ ವಿರುದ್ಧ ಅಜಾಗರೂಕ ಚಾಲನೆ ಎಂದು ದೂರು ದಾಖಲಿಸಲಾಗಿದೆ. ಅ.29 ರಂದು ನಟಿ ತಾರಾ ಅವರು ಬೆಂಗಳೂರಿನ ಕತ್ರಿಗುಪ್ಪೆ ಹತ್ತಿರ ಕಾರಿನಲ್ಲಿ ತೆರಳುವಾಗ ಅವರ ಕಾರು ಚಾಲಕ ಅಕ್ಷಯ್ ಅವರು ಮುಂದೆ ಚಲಿಸುತ್ತಿದ್ದ ಮತ್ತೊಂದು ಕಾರಿಗೆ ಗುದ್ದಿದ್ದಾರೆ. ಮುಂದೆ ಇದ್ದ ಕಾರು ಜಖಂಗೊಂದಿತ್ತು, ಅಕ್ಷಯ್ ಅವರ ಅಜಾಗರೂಕ ಚಾಲನೆಯಿಂದ ಈ ಘಟನೆ ಸಂಭವಿಸಿದೆ ಎಂದು ಮುಂದಿನ ಕಾರಿನಲ್ಲಿದ್ದ ಗಿರೀಶ್ ಅವರು ಆರೀಪಿಸಿದ್ದರು.
ಬೆಳಗಾವಿಯಲ್ಲಿ ಅಧಿಕಾರಿಗಳಿಂದಲೇ ಬ್ಯಾಂಕ್ ಲೂಟಿ
ಘಟನಾ ನಂತರ ಕಾರು ರಿಪೇರಿ ಮಾಡಿಸುವುದಾಗಿ ಅಕ್ಷಯ್ ಭರವಸೆ ನೀಡಿದ್ದರು. ನಂತರ ಸಾಕಷ್ಟು ಸಾಕಷ್ಟು ಅಲೆದಾಡಿಸಿದ್ದಾರೆ ಎಂದು ಗಿರೀಶ್ ಅವರು ದೂರು ನೀಡಿದ್ದಾರೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ‘ಅಜಾಗರೂಕ ಚಾಲನೆ’ ಎಂದು ಪ್ರಕರಣ ದಾಖಲಿದ್ದಾರೆ.