‘ತ್ರಿವಿಕ್ರಮ’ ಸಿನಿಮಾದ ಪ್ರೆಸ್ ಮೀಟ್ ನಲ್ಲಿ ಶರಣ್ ಮಾಡಿದ ಎಡವಟ್ಟಿಗೆ ನಕ್ಕ ತಾರಾ .!

ಕನ್ನಡ ಚಿತ್ರರಂಗದಲ್ಲಿ ಪ್ರೇಮಲೋಕವನ್ನು ಶೃಷ್ಟಿಸಿದ ಕ್ರೇಜಿ ಸ್ಟಾರ್ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ಪ್ರೇಕ್ಷಕರನ್ನು ರಂಜಿಸಿ ಮನೆ ಮಾತಾಗಿದ್ದಾರೆ. ಇದೀಗ ಅವರ ಮಗ ವಿಕ್ರಮ್ ರವಿಚಂದ್ರನ್ ಕೂಡ ತೆರೆಯ ಮೇಲೆ ಬರಲು ಸಜ್ಜಾಗಿದ್ದಾರೆ.

ರವಿಚಂದ್ರನ್ ಅವರ ಪುತ್ರ ವಿಕ್ರಮ್ ರವಿಚಂದ್ರನ್ ನಾಯಕನಾಗಿ ನಟಿಸಿರುವ ‘ತ್ರಿವಿಕ್ರಮ’ ಚಿತ್ರ ಇದೆ ಜೂನ್ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಬಿಡುಗಡೆ ಘೋಷಣೆ ಮಾಡಲು ಚಿತ್ರತಂಡ ಪತ್ರಿಕಾಗೋಷ್ಠಿಯನ್ನು ಆಯೋಜಿಸಿತ್ತು. ನಟಿ ತಾರಾ, ನಟರಾದ ಮನೋರಂಜನ್ ರವಿಚಂದ್ರನ್, ಸಾಧು ಕೋಕಿಲ, ಶರಣ್, ಆದಿ ಲೋಕೇಶ್, ನಿರ್ದೇಕರಾದ ಶಿವಮಣಿ, ಸಂತೋಷ್ ಆನಂದರಾಮ್, ಚೇತನ್ ಕುಮಾರ್ ಮುಂತಾದ ಗಣ್ಯರು ಈ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ವೇದಿಕೆ ಮೇಲೆ ಚಿತ್ರದ ನಟಿ ಆಕಾಂಕ್ಷಾ ಶರ್ಮಾ ಕೂತಿದ್ದ ಸೋಫಾದ ಮೇಲೆ ಶರಣ್ ಕೂಡ ಕೂರಲು ಹೋದರು. ಶರಣ್ ನಾಯಕಿಯ ತೊಡೆ ಮೇಲೆ ಕೂರಲು ಹೋಗಿದ್ದಕ್ಕೆ ಅಲ್ಲಿದ್ದ ನಟಿ ತಾರಾ ಬಿದ್ದು ಬಿದ್ದು ನಕ್ಕರು. ಅವರಿಂದಾದ ಈ ತಮಾಷೆಯಗೆ ನಟ ಶರಣ್ ತಲೆ ಮೇಲೆ ಕೈ ಇಟ್ಟುಕೊಂಡು ನಕ್ಕರು. ಹಾಗೆಯೇ ಅಲ್ಲಿದ್ದವರು ಕೂಡ ನಕ್ಕರು.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ

 

 

About The Author