Tuesday, April 22, 2025

Latest Posts

‘ಆ’ ದಿನದಂದೇ ಹೊಸ ಕೆಲಸಕ್ಕೆ ಕೈ ಹಾಕಿದ ಸ್ಯಾಂಡಲ್ ವುಡ್ ಚಿಟ್ಟೆ…! ವಸಿಷ್ಠ ‘ಸಿಂಹ’ನ ನಡೆಗೆ ಎಲ್ಲೆಡೆಯಿಂದ ಭಾರೀ ಮೆಚ್ಚುಗೆ

- Advertisement -

ಗಾಂಧಿನಗರದಲ್ಲಿ ತಮ್ಮ ವಿಶಿಷ್ಟ ಮ್ಯಾನರಿಸಂನಿಂದಲ್ಲೇ ಖ್ಯಾತಿ ಪಡೆದಿರುವ ಕಂಚಿನ ಕಂಠದ ನಟ ವಸಿಷ್ಠ ಸಿಂಹ. ಸಾಫ್ಟವೇರ್ ಕ್ಷೇತ್ರದಲ್ಲಿ ಲಕ್ಷ-ಲಕ್ಷ ಸಂಬಳ ಬಿಟ್ಟು ಬಣ್ಣದ ಬದುಕಿನಲ್ಲಿ ನೆಲೆಕಟ್ಟಿಕೊಳ್ಳುವ ಆಸೆ ಹೊತ್ತು ಬಂದ ಮೈಸೂರಿನ ಹುಡ್ಗ ಇಂದು ಕನ್ನಡ ಸಿನಿಮಾ ಇಂಡಸ್ಟ್ರೀಯ ಬಹುಬೇಡಿಕೆ ನಟ. ರುದ್ರತಾಂಡವ, ರಾಜಾಹುಲಿ ಸಿನಿಮಾಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಎನಿಸಿಕೊಂಡ ಬಳಿಕ ವಸಿಷ್ಠ ಪೂರ್ಣ ಪ್ರಮಾಣದ ನಾಯಕನಾಗಿ ಮಿಂಚಿದ್ರು. ಅದ್ರಲ್ಲೂ ವಸಿಷ್ಠನಿಗೆ ನೇಮೂ-ಫೇಮೂ ತಂದುಕೊಟ್ಟಿದ್ದು ಮಾತ್ರ ಟಗರು ಸಿನಿಮಾ. ಚಿಟ್ಟೆ ಕ್ಯಾರೆಕ್ಟರ್ ಮೂಲಕ ಅಭಿಮಾನಿಗಳನ್ನು ರಂಜಿಸಿದ ಇವ್ರು ಇಂದು ಕನ್ನಡ ಮಾತ್ರವಲ್ಲ ತಮಿಳು, ತೆಲುಗು ಇಂಡಸ್ಟ್ರೀಯಲ್ಲಿಯೂ ಮಿಂಚಲು ರೆಡಿಯಾಗಿದ್ದಾರೆ.

ರೀಲ್ ಅಲ್ಲ ರಿಯಲ್ ನಲ್ಲೂ ಹೀರೋ ವಸಿಷ್ಠ

ವಸಿಷ್ಠ ಸಿಂಹ ಕೇವಲ ನಟ ಮಾತ್ರವಲ್ಲ ಸಾಮಾಜಿಕ ಕಳಕಳಿಯುಳ್ಳ ನಟ. ಕಷ್ಟಗಳಿಗೆ ಮಿಡಿಯುವ ಸಹೃದಯಿ ಜೀವ. ಲಾಕ್ ಡೌನ್ ಟೈಮ್ ನಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ ವಸಿಷ್ಠ ಹೊಸ ವರ್ಷದ ಮೊದಲ ದಿನದಂದೂ ಜನ ಮೆಚ್ಚುವ ಕೆಲಸ ಮಾಡಿದ್ದಾರೆ.  ಬನ್ನೇರುಘಟ್ಟದ ನ್ಯಾಷನಲ್ ಪಾರ್ಕ್ ನಲ್ಲಿ ಆರು ತಿಂಗಳ ಸಿಂಹದ ಮರಿಯನ್ನು ಒಂದು ವರ್ಷದವರೆಗೆ ದತ್ತು ಪಡೆದಿದ್ದಾರೆ. ದತ್ತು ಪಡೆದ ಸಿಂಹದ ಮರಿಗೆ ತಮ್ಮ ತಂದೆಯ ಹೆಸರು ವಿಜಯ ನರಸಿಂಹ ಎಂದು ನಾಮಕರಣವನ್ನು ಮಾಡಿದ್ದಾರೆ.

ವಿಶೇಷ ಏನಪ್ಪ ಅಂದ್ರೆ ವಸಿಷ್ಠ ಸಿಂಹ ದತ್ತು ಪಡೆದಿರುವ ಸಿಂಹದ ಮರಿ ನಟಸಾರ್ವಭೌಮ ಡಾ.ರಾಜ್ ಕುಮಾರ್ ಅವರು ಹುಟ್ಟಿದ ದಿನದಂದು ಅಂದ್ರೆ ಏಪ್ರಿಲ್ 24ರಂದು ಜನಿಸಿದೆ. ಈ ದಿನ ಹುಟ್ಟಿರುವ ಸಿಂಹದ ಮರಿ ದತ್ತು ಪಡೆದಿರುವ ಈ ಸಿಂಹ ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾರೆ. ಹೊಸ ವರ್ಷದ ದಿನದಂದೂ ಇಂತಹ ಕೆಲಸ ಮಾಡಿರೋ ಚಿಟ್ಟೆಯ ನಡೆಗೆ ಭಕ್ತಗಣ ಊಘೇ-ಊಘೇ ಅಂತಿದ್ದಾರೆ. ನಮ್ಮ ಹೀರೋ ರೀಲ್ ಅಲ್ಲ ರಿಯಲ್ ನಲ್ಲೂ ಸೂಪರ್ ಹೀರೋ ಅಂತಿದ್ದಾರೆ ವಸಿಷ್ಠನ ಅಭಿಮಾನಿ ಬಳಗ.

- Advertisement -

Latest Posts

Don't Miss