Saturday, March 2, 2024

Latest Posts

6 ತಿಂಗಳು ನೆನಪಿನ ಶಕ್ತಿ ಕಳೆದುಕೊಂಡಿದ್ದ ಸ್ಟಾರ್ ನಟಿ..!

- Advertisement -

ಮುಂಬೈ: ಬಾಲಿವುಡ್ ನ ಟಾಪ್ ನಟಿಯಲ್ಲಿ ಒಬ್ಬರಾದ ದಿಶಾ ಪಠಾಣಿ 6 ತಿಂಗಳ ಕಾಲ ನೆನಪಿನ ಶಕ್ತಿ ಕಳೆದುಕೊಂಡು ತನ್ನ ಜೀವನದ ಆರು ತಿಂಗಳನ್ನು ವ್ಯರ್ಥ ಮಾಡಿಕೊಂಡದ್ದಾಗಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಜೀವನ ಚರಿತ್ರೆ ಆಧಾರಿತ 2016ರಲ್ಲಿ ತೆರೆ ಕಂಡ ಚಿತ್ರ ‘ಎಂ.ಎಸ್.ಧೋನಿ- ದಿ ಅನ್ ಟೋಲ್ಡ್’ ಸ್ಟೋರಿ ಚಿತ್ರದಲ್ಲಿ ತನ್ನ ನೈಜ ನಟನೆಯಿಂದ ದೇಶದ ಜನರ ಮನಗೆದ್ದಿದ್ದ ಈ ನಟಿ ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಹೌದು, ಫಿಟ್ನೆಸ್ ಮತ್ತು ಮಾರ್ಷಿಯಲ್ ಆರ್ಟ್ಸ್ ನತ್ತ ಸಿಕ್ಕಾಪಟ್ಟೆ ಕ್ರೇಜ್ ಹೊಂದಿರುವ ದಿಶಾ ಪಠಾಣಿ ತಮ್ಮ ಸುಂದರವಾದ ನೀಳ ಮೈಮಾಟದಿಂದ ಪಡ್ಡೆಹುಡುಗರ ಹೃದಯ ಕದ್ದಿದ್ದಾಳೆ. ಸದಾ ಕಿಕ್ ಬಾಕ್ಸಿಂಗ್, ಕರಾಟೆ, ಕುಂಗ್ ಫೂ ಸೇರಿದಂತೆ ಇತರೆ ಸಮರಕಲೆಗಳಲ್ಲಿ ಆಸಕ್ತಳಾಗಿರೋ ದಿಶಾ ಒಂದು ಹೊತ್ತು ಊಟ ಮಾಡೋದು ಮರೆತರೂ ವರ್ಕೌಟ್ ಮಾಡೋಕೆ ಮಾತ್ರ ಮರೆಯೋದಿಲ್ಲ.

ಇಂಥಹ ದಿಶಾ ಪಠಾಣಿ ಒಂದು ದಿನ ಹೀಗೆ ಸಮರಕಲೆ ಅಭ್ಯಾಸಿಸುವಾಗ ತಲೆಗೆ ತೀವ್ರವಾಗಿ ಪೆಟ್ಟು ತಿಂದು ಆಸ್ಪತ್ರೆ ಸೇರಿದ್ರು. ದಿಶಾ ಮೆದುಳಿನ ಭಾಗಕ್ಕೆ ಘಾಸಿಯಾಗಿದ್ದ ಪರಿಣಾಮ ಆಕೆ ನೆನಪಿನ ಶಕ್ತಿ ಕಳೆದುಕೊಳ್ಳುವಂತಾಯಿತು. ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆದ ಬಳಿಕವೂ ದಿಶಾಳಿಗೆ ನೆನಪಿನ ಶಕ್ತಿ ಬರಲೇ ಇಲ್ಲ. ಬಳಿಕ ನಿಧಾನಗತಿಯಲ್ಲಿ ಚಿಕಿತ್ಸೆ ಮತ್ತಿತರ ಔಷಧಗಳಿಂದಾಗಿ ದಿಶಾ ಸುಮಾರು 6 ತಿಂಗಳ ಬಳಿಕ ನೆನಪಿನಶಕ್ತಿ ಮರಳಿ ಪಡೆದರಂತೆ. ದಿಶಾ ಬಾಳಲ್ಲಿ ಈ ಕಹಿ ಘಟನೆ ನಡೆದು ಸುಮಾರು 3 ವರ್ಷಗಳೇ ಕಳೆದಿವೆ. ಈ ಶಾಕಿಂಗ್ ಸುದ್ದಿಯನ್ನ ಈಕೆಯೇ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದು ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾಳೆ. ಇತ್ತೀಚೆಗೆ ದಿಶಾ , ಬಾಲಿವುಡ್ ಸುಲ್ತಾನ ಸಲ್ಮಾನ್ ಖಾನ್ ಜೊತೆ ‘ಭಾರತ್’ ಎಂಬ ಚಿತ್ರದಲ್ಲಿ ನಟಿಸಿದ್ದು ಬಾಕ್ಸಾಫಿಸ್ ಕೊಳ್ಳೆ ಹೊಡೆದಿದೆ.

- Advertisement -

Latest Posts

Don't Miss