Tuesday, January 14, 2025

Latest Posts

ಜೂನಿಯರ್ ಚಿರುಗೆ ನಾಮಕರಣದ ತಯಾರಿಯಲ್ಲಿ ಮೇಘನಾ ಕುಟುಂಬ..! ಚಿರು ಪುತ್ರನಿಗೆ ಇಡುವ ಹೆಸರೇನು ಗೊತ್ತಾ..?

- Advertisement -

ದುಃಖದ ಮಡುವಿನಲ್ಲಿ ತುಂಬಿದ್ದ ಸರ್ಜಾ ಕುಟುಂಬದಲ್ಲಿ ನಗುವಿನ ಅಲೆ ಮೂಡಿಸಿದ್ದು ಮುದ್ದಾದ ಜೂನಿಯರ್ ಚಿರು. ಮೇಘನಾ ಮಡಿಲಿಗೆ ಚಿಂಟು ಬಂದ್ಮೇಲೆ ಎಲ್ಲವೂ ಬದಲಾಗಿದೆ. ಮೇಘನಾ ಮುಖದಲ್ಲಿ ನಗು, ಸರ್ಜಾ ಕುಟುಂಬದಲ್ಲಿ ನೆಮ್ಮದಿ, ಸುಂದರ್ ರಾಜ್ ಫ್ಯಾಮಿಲಿಯಲ್ಲಿ ಸಂಭ್ರಮ ಎಲ್ಲವೂ ಮನೆ ಮಾಡಿದೆ. ಈ ನಡುವೆಯೇ ಮೇಘನಾ ಇಡೀ ಕುಟುಂಬಕ್ಕೆ ಕೊರೋನಾ ಸೋಂಕು ತಗುಲಿತ್ತು. ಇದೀಗ ಜೂನಿಯರ್ ಚಿರು ಹಾಗೂ ಮೇಘನಾ ಕೊರೋನಾ ಎದುರಿಸಿ ಆರೋಗ್ಯಯುತರಾಗಿದ್ದಾರೆ. ಈ ಖುಷಿ ಜೊತೆಗೆ ಸರ್ಕಾ ಕುಟುಂಬದ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ತಿದೆ.

ಅದ್ಧೂರಿ ನಾಮಕರಣಕ್ಕೆ ಸುಂದರ್ ರಾಜ್ ಕುಟುಂಬ ತಯಾರಿ..!

ಮುದ್ದಿನ ಮೊಮ್ಮಗ ಚಿಂಟುವಿನ ಅದ್ಧೂರಿ ನಾಮಕರಣಕ್ಕೆ ಸುಂದರ್ ರಾಜ್ ಕುಟುಂಬ ತಯಾರಿ ನಡೆಸ್ತಿದೆ. ಜೂನಿಯರ್ ಚಿರುಗೆ ಏನ್ ಹೆಸರಿಡ್ತಾರೆ ಅನ್ನೋ ಚರ್ಚೆ ಮೇಘನಾ ಅಭಿಮಾನಿ ಬಳಗದಲ್ಲಿ ಚರ್ಚೆ ನಡೆಯುತ್ತಿದೆ. ಈಗಾಗ್ಲೇ ಮೊಮ್ಮಗನಿಗೆ ಚಿಂಟು ಅಂತಾ ಪ್ರೀತಿಯಿಂದ ಕರೆಯುವ ಸುಂದರ್ ರಾಜ್ ಹಾಗೂ ಪ್ರಮೀಳಾ ದಂಪತಿಗಳು ಚಿಂತನ್ ಅನ್ನೋ ಹೆಸರಿಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗ್ತಿದೆ.

ಅಪ್ಪ-ಅಮ್ಮನ ಹೆಸರಿನಲ್ಲಿಯೇ ಪುತ್ರನಿಗೆ ನಾಮಕರಣ ಮಾಡಲು ಪ್ಲಾನ್ ನಡೆಸಿದ್ದಾರೆ ಸುಂದರ್ ರಾಜ್ ದಂಪತಿ. ಅದರಂತೆ ಚಿರು ಹೆಸರಿನ ಮೊದಲ ಅಕ್ಷರ ‘ಚ’ ಹಾಗೂ ಮೇಘನಾ ಹೆಸ್ರುನ ಕೊನೆಯ ಅಕ್ಷರ ‘ನ’ ಬಳಸಿ ನಾಮಕರಣ ಮಾಡಲು ತೀರ್ಮಾನ ಮಾಡಲಾಗ್ತಿದೆ ಎನ್ನಲಾಗ್ತಿದೆ. ಚ,ನ ಎರಡು ಅಕ್ಷರ ಸೇರಿಸಿ ಚಿಂತನ್ ಅನ್ನೋ ಹೆಸರಿಡಲು ಸಜ್ಜಾಗಿದೆಯಂತೆ ಸುಂದರ್ ರಾಜ್ ಕುಟುಂಬ. ಒಟ್ನಲ್ಲಿ ಜೂನಿಯರ್ ಚಿರು ಹೆಸರು ಏನ್ ಇಡ್ತಾರೆ ಅನ್ನೋ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿದ್ದು, ಇದೇ ಹೆಸ್ರು ಫೈನಲ್ ಆಗುತ್ತಾ..? ಇಲ್ಲ ಬೇರೆ ಏನಾದ್ರೂ ಹೆಸ್ರು ಇಡ್ತಾರೆ ಕಾದು ನೋಡ್ಬೇಕು.

- Advertisement -

Latest Posts

Don't Miss