Saturday, August 9, 2025

Latest Posts

ಕಿಚ್ಚ ಸುದೀಪ್ ಗೆ ಮದುವೆ ಆಮಂತ್ರಣ ನೀಡಿದ ಲವ್ ಮೋಕ್ಟೇಲ್ ಜೋಡಿ

- Advertisement -

ಶಾಪಿಂಗ್, ಬ್ಯಾಚ್ಯುಲರ್ ಪಾರ್ಟಿ ಮುಗಿಸಿ ಮದುವೆಗೆ ರೆಡಿಯಾಗ್ತಿರೋ ಲವ್ ಮೋಕ್ಟೇಲ್ ಜೋಡಿ ಮಿಲನಾ-ಕೃಷ್ಣ ಮದುವೆ ಆಮಂತ್ರಣ ಕೊಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಪ್ರೇಮಿಗಳ ದಿನದಂದು ಅಂದ್ರೆ ಫೆಬ್ರವರಿ 14ರಂದು ಹೊಸ ಬಾಳಿಗೆ ಹೆಜ್ಜೆ ಹಾಕಲಿರುವ ಆದಿ-ನಿಧಿಮಾ ಜೋಡಿ, ಸ್ಯಾಂಡಲ್ ವುಡ್ ತಾರಾ ಬಳಗವನ್ನು ಮದುವೆಗೆ ಆಮಂತ್ರಿಸುತ್ತಿದ್ದಾರೆ.

ಇದೀಗ ಈ ಜೋಡಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮನೆಗೆ ತೆರಳಿ ಆಮಂತ್ರಣ ನೀಡಿ ಮದುವೆಗೆ ಆಹ್ವಾನಿಸಿದ್ದಾರೆ. ಕಿಚ್ಚನಿಗೆ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಆಪ್ತರು. ಲವ್ ಮೋಕ್ಟೇಲ್ ಸಿನಿಮಾಕ್ಕೂ ಕಿಚ್ಚ ಪ್ರೋತ್ಸಾಹ ನೀಡಿ ಬೆಂಬಲಿಸಿದ್ದರು.

ಇತ್ತೀಚೆಗೆ ಗೋಲ್ಡನ್ ಕ್ವೀನ್ ಅಮೂಲ್ಯರನ್ನು ಭೇಟಿಯಾಗಿದ್ದ ಮಿಲನಾ-ಕೃಷ್ಣ ಮದುವೆ ಮದುವೆ ಕರೆಯೋಲೆ ನೀಡಿದ್ದರು. ಅಲ್ಲದೇ ನಟಿ ದೀಪಿಕಾ ದಾಸ್ ಮನೆಗೂ ಈ ಜೋಡಿ ಭೇಟಿ ಕೊಟ್ಟು ಮದುವೆಗೂ ಆಹ್ವಾನಿಸಿದ್ದಾರೆ.

ಲವ್ ಮೋಕ್ಟೇಲ್ ಸೂಪರ್ ಸಕ್ಸಸ್ ಬಳಿಕ ಮಿಲನಾ-ಕೃಷ್ಣ ತಮ್ಮ ಲವ್ ಸ್ಟೋರಿ ಬಗ್ಗೆ ಹೇಳಿಕೊಂಡಿದ್ದರು. ಸದ್ಯ ಈ ಜೋಡಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸ್ತಿದ್ದು, ಲವ್ ಮೋಕ್ಟೇಲ್-2 ಸಿನಿಮಾ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ.

- Advertisement -

Latest Posts

Don't Miss