ನಮಿತಾ ರವರು ಮೊದಲು ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. 1998 ರಲ್ಲಿ ತಮ್ಮ ಹದಿನೇಳನೆ ವಯಸ್ಸಿನಲ್ಲಿ ಮಿಸ್ ಸೂರತ್ ಆಗಿ ಹೊರಹೊಮ್ಮಿದ್ದರು. ನಂತರ 2001 ರ ಮಿಸ್ ಇಂಡಿಯಾ ಸ್ಫರ್ಧೆಯಲ್ಲಿ ರನ್ನರ್ ಅಪ್ನಂ ಆಗಿ, ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಮಿಂಚಿದರು. ನಮಿತಾ ರವರು ಮೊದಲು ಹಿಂದಿ ಚಿತ್ರರಂಗದಲ್ಲಿ ನೆಲೆಗೊಳ್ಳಲು ಪ್ರಯತ್ನಿಸಿದರು ಆದರೆ ಯಶಸ್ವಿಯಾಗಲಿಲ್ಲ. ಬಳಿಕ 2002 ರಲ್ಲಿ ತೆರೆಕಂಡ `ಸೊಂತಂ’ ಎಂಬ ತೆಲಗು ಚಿತ್ರದಿಂದ ಅವರ ಸಿನಿಪಯಣವನ್ನು ಆರಂಭಿಸಿ ತೆಲಗು ಚಿತ್ರರಂಗದಲ್ಲಿ ಮಿಂಚಲಾರಂಭಿಸಿದರು. ಅದಾದ ನಂತರ 2005 ರಲ್ಲಿ ತಮಿಳು ಚಿತ್ರರಂಗಕ್ಕೆ ಪ್ರವೇಶಿಸಿ ಅಪಾರ ಹೆಸರನ್ನು ಗಳಿಸಿದರು.
ಇವರು 2006 ರಲ್ಲಿ ತೆರೆಕಂಡ ಸ್ಯಾಂಡಲ್ ವುಡ್ ನ ರವಿಚಂದ್ರನ್ ರವರ `ನೀಲಕಂಠ’ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ `ಇಂದ್ರ’, `ಹೂ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಇದೀಗ ನಮಿತಾ ತಾಯಿಯಾಗುತ್ತಿದ್ದಾರಂತೆ. ತಾಯಂದಿರ ದಿನದಂದು ನಮಿತಾ ಈ ಸಿಹಿ ಸುದ್ದಿಯನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇನ್ನು ನಮಿತಾ ಪ್ರಗ್ನೆನ್ಸಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. “ಹೊಸ ಅಧ್ಯಾಯ ಶುರುವಾದಾಗ, ನಾನೂ ಬದಲಾದೆ, ಏನೋ ಒಂದು ನನ್ನೊಳಗೆ ವರ್ಗಾವಣೆಯಾಯಿತು. ಪ್ರಕಾಶಮಾನವಾದ ಹಳದಿ ಸೂರ್ಯ ನನ್ನ ಮೇಲೆ ಬೆಳಗುತ್ತಿದ್ದಂತೆ, ಹೊಸ ಜೀವನ, ಹೊಸ ಜೀವಿಗಳು ನನ್ನನ್ನು ಕರೆಯುತ್ತಿದೆ. ನಾನು ಸಾಕಷ್ಟು ದಿನಗಳಿಂದ ನಿನಗೋಸ್ಕರ ಪ್ರಾರ್ಥಿಸಿದ್ದೆ. ನೀನು ಒದೆಯುವುದು, ಅಲ್ಲಾಡುವುದನ್ನು ನಾನು ಫೀಲ್ ಮಾಡಬಲ್ಲೆ. ನಾನು ಎಂದಿಗೂ ಅನುಭವಿಸದ, ಅನುಭವಿಸಲಾರದ ಅನುಭವವನ್ನು ನೀನು ನೀಡುತ್ತಿರುವೆ” ಎಂದು ನಮಿತಾ ಬರೆದುಕೊಂಡಿದ್ದಾರೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ