Sandalwood News: ನಟಿ ಚಂದನಾ ಅನಂತಕೃಷ್ಣ ಸದ್ಯ ಲಕ್ಷ್ಮೀ ನಿವಾಸ ಸಿರಿಯಲ್‌ನಲ್ಲಿ ಬ್ಯುಸಿ ಇದ್ದಾರೆ. ಇದರ ಜತೆ ಸಿನಿಮಾ, ಡಾನ್ಸ್, ಸಂಗೀತ, ರೀಲ್ಸ್ ಹೀಗೆ ಎಲ್ಲದರಲ್ಲೂ ತಮ್ಮನ್ನು ತಾವು ತೊಡಗಿಸಿಕ“ಂಡಿದ್ದಾರೆ. ಇದೀಗ ಚಂದನಾ ಆಲ್ಬಮ್ ಸಾಂಗ್ ರಿಲೀಸ್ ಮಾಡಿದ್ದು, ಈ ಹಾಡನ್ನು ಚಂದನಾ ಅವರೇ ಹಾಡಿ, ಪ್ರೊಡ್ಯುಸ್ ಮಾಡಿ, ನಟನೆ ಕೂಡ ಮಾಡಿದ್ದಾರೆ.
ಈ ಆಲ್ಬಮ್ ಸಾಂಗ್ ಯಾವುದರ ಬಗ್ಗೆ ಇದೆ ಎಂದರೆ, ಪಹಲ್ಗಾಮ್ ದಾಳಿ ಬಗ್ಗೆ. ಇದೇ ವರ್ಷ ಕಾಶ್ಮೀರದ ಸೌಂದರ್ಯ ಸವಿಯಲು ತಮ್ಮ ಪತಿಯರ ಜತೆ ತೆರಳಿದ್ದ ಪತ್ನಿಯರ ಮುಂದೆಯೇ, ಆತಂಕವಾದಿಗಳು ಆ ಪತಿಯರನ್ನ ಧರ್ಮ ಕೇಳಿ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇದಕ್ಕೆ ಭಾರತೀಯ ಸೇನೆ ಪ್ರತೀದಾಳಿ ಮಾಡಿ ಸೇಡು ತೀರಿಸಿಕ“ಂಡಿದೆ.
ಆದರೆ ಹಾಗೆ ನವ ವಧು ವಿವಾಹವಾಗಿ, ಹನಿಮೂನ್‌ಗೆ ಹೋಗಿ, ಅಲ್ಲೇ ವಿಧವೆಯಾದ ರೀತಿ, ಆಕೆಯ ಮನಸ್ಸಿನಲ್ಲಿ ಮೂಡುವ ಭಾವನೆ, ದುಃಖ, ಕೋಪ ಎಲ್ಲವನ್ನೂ ಈ ವೀಡಿಯೋದಲ್ಲಿ ಅದೆಷ್ಟು ಅದ್ಭುತವಾಗಿ ತೋರಿಸಲಾಗಿದೆ ಎಂದರೆ, ನೋಡುಗರ ಕಣ್ಣಲ್ಲಿ ನೀರು ಬರಲಾರದೇ ಇರದು. ಈ ಆಲ್ಬಮ್ ಸಾಂಗ್ ನೋಡಿದವರು ಭಾವುಕರಾಗದೇ ಇರರು. ಅಷ್ಟು ಅದ್ಭುತವಾಗಿದೆ.
ಇದರಲ್ಲಿ ನವ ವಧುವಿನ ಪಾತ್ರದಲ್ಲಿ ಚಂದನಾ ಅನಂತ್ ಕೃಷ್ಣ ನಟಿಸಿದ್ದರೆ, ವರನಾಗಿ ನಿದರ್ಶನ್ ನಟಿಸಿದ್ದಾರೆ. ಅಂದಹಾಗೆ ಈ ಆಲ್ಬಮ್ ಸಾಂಗ್ ಹೆಸರು In His Name.. ಅವನ ಹೆಸರಿನಲ್ಲಿ.. ಇದು ಸಾಧಾರಣ ಕಥೆಯಲ್ಲ..