ಮಲಯಾಳಂನ ಖ್ಯಾತ ನಟಿ ಪ್ರಿಯಾ ಆನಂದ್ ವಿಚಿತ್ರ ಹೇಳಿಕೆಯೊಂದನ್ನು ನೀಡಿದ್ದು, ಅದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಹೌದು, ಅಮೇರಿಕಾದಲ್ಲಿ ಬೆಳೆದ ಈ ಚೆಲುವೆ ಬಹುಭಾಷಾ ನಟಿ ಎಂದೇ ಖ್ಯಾತಿಪಡೆದಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದ ಪ್ರಿಯಾ ರಾಜಕುಮಾರ್, ಜೇಮ್ಸ್ ಅಂತಹ ಚಿತ್ರಗಳಲ್ಲಿ ನಟಿಸಿ ಕನ್ನಡ ಸಿನಿ ಪ್ರೇಕ್ಷಕರಿಗೂ ಕೂಡಾ ಹತ್ತಿರವಾಗಿದ್ದವರು. ಅಷ್ಟೇ ಅಲ್ಲದೆ ವಾಮನನ್ ಚಿತ್ರದ ಮೂಲಕ ಕಾಲಿವುಡ್‍ಗೆ ಪಾದಾರ್ಪಣೆ ಮಾಡಿದ್ದ ಅವರು, ಶಿವಕಾರ್ತಿಕೇಯನ್, ಅಥರ್ವ, ವಿಕ್ರಮ್ ಪ್ರಭು, ಗೌತಮ್ ಕಾರ್ತಿಕ್ ಮತ್ತು ಆರ್ಜೆ ಬಾಲಾಜಿ ಅವರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದರು. ಆದರೆ ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಪ್ರಿಯಾ ಆನಂದ್ ತಮ್ಮ ಮದುವೆಯ ಬಗ್ಗೆ ಕೆಲವು ಆಸಕ್ತಿದಾಯಕ ಕಾಮೆಂಟ್‍ಗಳನ್ನು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು ಅತ್ಯಾಚಾರ, ಮಹಿಳೆಯರ ಅಕ್ರಮ ಬಂಧನ ಮತ್ತು ನ್ಯಾಯಾಲಯ ಪ್ರಕರಣಗಳ ಆರೋಪದ ಮೇಲೆ ದೇಶದಿಂದ ಪಲಾಯನ ಮಾಡಿದ್ದ ನಿತ್ಯಾನಂದ ಸ್ವಾಮಿಯನ್ನು ಮದುವೆಯಾಗಲು ಬಯಸಿದ್ದೇನೆ ಎಂದಿದ್ದಾರೆ. ನಿತ್ಯಾನಂದ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು, ಅವರು ಸತ್ತಿದ್ದಾರೆ ಎಂಬ ವದಂತಿಯಿರುವ ಸಮಯದಲ್ಲಿ ಈ ಹೇಳಿಕೆ ನೀಡಿರುವುದು ಆಸಕ್ತಿದಾಯಕವಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಿತ್ಯಾನಂದ ಸ್ವಾಮಿಯನ್ನು ಸಾವಿರಾರು ಭಕ್ತರು ಪೂಜಿಸುತ್ತಾರೆ. ನಾನು ಅವನನ್ನು ಮದುವೆಯಾದರೆ, ನಾನು ನನ್ನ ಹೆಸರನ್ನು ಸಹ ಬದಲಾಯಿಸಬೇಕಾಗಿಲ್ಲ ಎಂದಿದ್ದಾರೆ.
ನಿತ್ಯಾನಂದ ಯಾವಾಗಲೂ ಸತ್ಯವಾಗಿದ್ದೇನೆ. ನಾನು ದೇವರು ಎಂದು ಹೇಳಿಕೊಂಡು ಅನೇಕ ಮುಗ್ಧ ಜನರನ್ನು ಬುಟ್ಟಿಗೆ ಹಾಕಿಕೊಂಡು ತನ್ನ ಭಕ್ತರನ್ನಾಗಿಸಿಕೊಂಡಿದ್ದನು. ನಿತ್ಯಾನಂದ ಈ ಹಿಂದೆ ಅನೇಕ ವಿವಾದದಗಳಲ್ಲಿ ಸಿಕ್ಕಿಬಿದ್ದಿದ್ದನು. ಆದಾಗ್ಯೂ, ಅವನ ಮೇಲೆ ಅತ್ಯಾಚಾರ, ಮಹಿಳೆಯರ ಅಕ್ರಮ ಬಂಧನ ಮತ್ತು ನ್ಯಾಯಾಲಯದ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಇದಾದ ಬಳಿಕ ನಿತ್ಯಾನಂದ ದೇಶದಿಂದ ಕಣ್ಮರೆಯಾದನು. ನಂತರದಲ್ಲಿ ಅವನು ಈಕ್ವೆಡಾರ್ ಬಳಿಯ ಒಂದು ದ್ವೀಪದಲ್ಲಿ ವಾಸಿಸಲ ತೊಡಗಿದನು. ಆ ದ್ವೀಪಕ್ಕೆ ಕೈಲಾಸ ದೇಶ ಎಂದು ಹೆಸರಿಟ್ಟು ಅಲ್ಲಿಯೇ ವಾಸಿಸುತ್ತಿದ್ದಾನೆ. ಅಲ್ಲಿ ತನ್ನದೆ ಆದ ಒಂದು ವಿಶೇಷ ಕರೆನ್ಸಿಯನ್ನು ಸಹ ಮುದ್ರಿಸಿದನು. ತಮ್ಮ ದೇಶಕ್ಕೆ ಬರುವ ಭಕ್ತರು ನೇರವಾಗಿ ಶಿವನ ದರ್ಶನ ಪಡೆಯುತ್ತಾರೆ ಎಂದು ಅನೇಕ ಪಾಶ್ಚಿಮಾತ್ಯ ಜನರಿಗೆ ದೇವರಾದನು.
ಅದರ ನಂತರ ಕೆಲವು ವರ್ಷಗಳವರೆಗೆ ಅವನ ಬಗ್ಗೆ ಯಾವುದೇ ಸುದ್ದಿ ಇರಲಿಲ್ಲ. ಕೆಲವು ತಿಂಗಳ ಹಿಂದೆ, ನಿತ್ಯಾನಂದ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದನು ಎಂದು ವರದಿಗಳು ಬಂದಿದ್ದವು. ಇದರ ನಡುವೆ ಖ್ಯಾತ ನಟಿ ಪ್ರಿಯಾ ಅವರ ಈ ಹೇಳಿಕೆಗಳು ಅಭಿಮಾನಗಳಲ್ಲಿ ಗೊಂದಲವನ್ನು ಸೃಷ್ಟಿ ಮಾಡುತ್ತಿವೆ.