Wednesday, September 11, 2024

Latest Posts

ಈ ಬಾರಿಯ ಬಿಗ್‌ಬಾಸ್-9ಕ್ಕೆ ಯಾರಾಗ್ತಾರೆ ಹೋಸ್ಟ್..?

- Advertisement -

 

ಪ್ರತೀಬಾರಿ ಬಿಗ್‌ಬಾಸ್ ಸೀಸನ್ ಬಂದ್ರೆ ಸಾಕು ಅಲ್ಲಿ ಕಿಚ್ಚನ ಅಭಿಮಾನಿಗಳೂ ಕೂಡ ಈ ರಿಯಾಲಿಟಿ ಶೋಗಾಗಿ ಎದುರು ನೋಡ್ತಿರ್ತಾರೆ. ಯಾಕಂದ್ರೆ ಬಿಗ್‌ಬಾಸ್ ಸೀಸನ್ ಶುರುವಾದಾಗಿನಿಂದ ಈ ಶೋನ ಅದ್ಭುತವಾಗಿ ಅಚ್ಚುಕಟ್ಟಾಗಿ ನಿರೂಪಣೆ ಮಾಡಿಕೊಂಡು ಬರ್ತಿರೋದು ನಮ್ಮೆಲ್ಲರ ಪ್ರೀತಿಯ ಕಿಚ್ಚ ಸುದೀಪ್.

ಸಾಕಷ್ಟು ಬಾರಿ ಈ ಬಾರಿಯ ಬಿಗ್‌ಬಾಸ್ ಶೋಗೆ ಕಿಚ್ಚನ ನಿರೂಪಣೆ ಇರೋದಿಲ್ಲ ಅಮತೆಲ್ಲಾ ಸುದ್ದಿಯಾಗಿತ್ತು. ಆದರೆ ಬಿಗ್‌ಬಾಸ್ ಅಭಿಮಾನಿಗಳು ಅದನ್ನ ನಂಬಲು ರೆಡಿಯಾಗಿರಲಿಲ್ಲ. ಯಾಕಂದ್ರೆ ಕಿಚ್ಚನ ಸಮಯ ಪ್ರಜ್ನೆ, ಜಾಣ್ಮೆಯ ಮಾತುಗಳು ಅಭಿಮಾನಿಗಳ ಮನಸ್ಸು ಗೆದ್ದಿತ್ತು, ಜೊತೆಗೆ ಕಿಚ್ಚನ ಖಡಕ್ ಧನಿಗಾಗಿಯೇ ಎಷ್ಟೋ ಜನ ಬಿಗ್‌ಬಾಸ್ ಶೋ ನೋಡ್ತಿದ್ರು. ಹಾಗಾದ್ರೆ ಈ ಬಾರಿ ಬಿಗ್‌ಬಾಸ್ ಸೀಸನ್-೯ರ ನಿರೂಪಕ ನಿಜಕ್ಕೂ ಯಾರು..ಈ ಪರಶ್ನೆ ಎಲ್ಲಾ ಅಭಿಮಾನಿಗಳಲ್ಲೂ ಕುತೂಹಲ ಮೂಡಿಸಿದೆ.

“ವಿಕ್ರಾಂತ್ ರೋಣ” ಬಳಿಕ ಬಿಗ್‌ಬಾಸ್‌ಗೆ ಕಿಚ್ಚನ ಕಿಕ್ ಸ್ಟಾರ್ಟ್..!

ಸದ್ಯ ವಿಕ್ರಾಂತ್ ರೋಣ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರೋ ಬಾದ್‌ಶಾ ಸುದೀಪ್, ಬಿಗ್‌ಬಾಸ್ ಹೋಸ್ಟಿಂಗ್ ಮಾಡ್ತಾರೋ ಇಲ್ವೋ ಅಂತ ಫ್ಯಾನ್ಸ್ ದಂಗಾಗಿದ್ದಾರೆ. ಬಿಗ್‌ಬಾಸ್ ಅಂದ್ರೆ ಸುದೀಪ್ ಅನ್ನೋಹಾಗೆ ಅವರ ಮಾತುಗಳು, ಅವ್ರ ಮ್ಯಾನರಿಸಂ, ಅವ್ರ ಡ್ರೆಸ್ಸಿಂಗ್ ಸ್ಟೆöÊಲ್ ಎಲ್ಲವೂ ಅಭಿಮಾನಿಗಳಿಗೆ ಮತ್ತಷ್ಟು ಕಿಕ್ ಕೊಡುತ್ತೆ. ಹಾಗಾಗಿ ಕಿಚ್ಚನ ಸ್ಥಾನಕ್ಕೆ ಬೇರೊಬ್ಬ ನಟ ಬಂದರೂ ಅವರನ್ನ ಅಭಿಮಾನಿಗಳು ಮೆಚ್ಚಿಕೊಳ್ಳೋದು ಬಿಗ್‌ಬಾಸ್ ಶೋನಲ್ಲಿ ಬಹುತೇಕ ಕಡಿಮೆ ಅನ್ನೋ ಲೆಕ್ಕಾಚಾರ ಎಲ್ಲರಲ್ಲಿದೆ. ಅದರಂತೆಯೇ ಯಾವುದೇ ವಿಚಾರ ಮಾಡದೇ ಈ ಸೀಸನ್‌ನಲ್ಲಿಯೂ ಎಲ್ಲರ ಆಸೆಯಂತೆಯೇ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಲಿದ್ದಾರೆ.

ಇನ್ನು ಜುಲೈ ೨೮ರಂದು ಕಿಚ್ಚ ಸುದೀಪ್ ನಟಿಸಿರೋ ಬಹುನಿರೀಕ್ಷಿತ ಸಿನಿಮಾ “ವಿಕ್ರಾಂತ್ ರೋಣ” ವಿಶ್ವದಾದ್ಯಂತ ತೆರೆಕಾಣಲಿದೆ. ಬಿಗ್‌ಬಾಸ್ ಸೀಸನ್-೯ ಶೋ ಆಗಸ್ಟ್ನಲ್ಲಿ ಶುರುವಾಗಲಿದೆ. ಹೀಗಾಗಿ ಎಲ್ಲಾ ಯೋಚಿಸಿಯೇ ನಿರ್ಧಾರ ತೆಗೆದುಕೊಂಡಿರೋ ಕಿಚ್ಚ, ವಿಕ್ರಾಂತ್ ರೋಣ ರಿಲೀಸ್ ಬಳಿಕ ಬಿಗ್‌ಬಾಸ್ ಶೋಗೆ ಕಿಕ್ ಸ್ಟಾರ್ಟ್ ಕೊಡಲಿದ್ದಾರೆ.

- Advertisement -

Latest Posts

Don't Miss