Saturday, June 21, 2025

Latest Posts

ಪವರ್ ಸ್ಟಾರ್ ಪುನೀತ್ ನಿರ್ಮಾಣದ ಸಿನಿಮಾದಲ್ಲಿ ಡ್ಯಾನೀಶ್ ಸೇಠ್ ಗೆ ಜೋಡಿಯಾದ ಸಂಯುಕ್ತ ಹೊರನಾಡು…

- Advertisement -

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪಿಆರ್ ಕೆ ಪ್ರೊಡಕ್ಷನ್ ಹೌಸ್ ನಡಿ ‘ಒನ್ ಕಟ್ ಟು ಕಟ್’ ಸಿನಿಮಾ ಸೆಟ್ಟೇರಿದೆ. ಇತ್ತೀಚೆಗಷ್ಟೇ ಸಿನಿಮಾದ ಸ್ಕ್ರೀಪ್ ಪೂಜೆ ನೆರವೇರಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾದ ಪುನೀತ್ ಹಾಗೂ ಅಶ್ವಿನಿ ದಂಪತಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

ಈ ಹಿಂದೆ ಲಾಕ್ ಡೌನ್ ಟೈಮ್ ನಲ್ಲಿ ಪಿಆರ್ ಕೆ ಪ್ರೊಡಕ್ಷನ್ ನಡಿ ಬಂದಿದ್ದ ‘ಫ್ರೆಂಚ್ ಬಿರಿಯಾನಿ’ ಸಿನಿಮಾದಲ್ಲಿ ಪ್ರೇಕ್ಷಕರನ್ನು ನಕ್ಕು-ನಲಿಸಿದ್ದ ಡ್ಯಾನೀಶ್ ಸೇಠ್ ಮತ್ತೊಮ್ಮೆ ಪುನೀತ್ ನಿರ್ಮಾಣದ ಸಿನಿಮಾ ‘ಒನ್ ಕಟ್ ಟು ಕಟ್’ ನಟಿಸ್ತಿದ್ದಾರೆ. ಲವ್, ಕಾಮಿಡಿ ಹಾಗೂ ಸಾಮಾಜಿಕ ಸಂದೇಶ ಇರುವ ಈ ಸಿನಿಮಾದಲ್ಲಿ ಡ್ಯಾನೀಶ್ ಗೆ ಜೋಡಿಯಾಗಿ ಸಂಯುಕ್ತ ಹೊರನಾಡು ಬಣ್ಣ ಹಚ್ಚಿದ್ದಾರೆ.

ಸದ್ಯ ‘ಒನ್ ಕಟ್ ಟು ಕಟ್’ ಶೂಟಿಂಗ್ ಗೆ ಸಂಯುಕ್ತ ಭಾಗಿಯಾಗಿದ್ದು, ಈ ವೇಳೆ ನಟ ಪುನೀತ್ ಸಹ ಶೂಟಿಂಗ್ ಸೆಟ್ ಗೆ ಭೇಟಿ ನೀಡಿದ್ದಾರೆ. ಅಪ್ಪು ಜೊತೆ ಶೂಟಿಂಗ್ ಸೆಟ್ ನಲ್ಲಿರುವ ಫೋಟೋಗಳನ್ನು ಸಂಯುಕ್ತ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇನ್ನೂ ಈ ಸಿನಿಮಾದಲ್ಲಿ ಡ್ಯಾನಿಶ್ ಸೇಠ್, ಸಂಯುಕ್ತಾ ಹೊರನಾಡು ಜೊತೆ ಪ್ರಕಾಶ್ ಬೆಳವಾಡಿ, ಸಂಪತ್ ಮೈತ್ರೇಯ, ಮತ್ತು ರೂಪಾ ರಾಯಪ್ಪ ಸೇರಿದಂತೆ ಹಲವರು ನಟಿಸ್ತಿದ್ದು, ವಂಸಿಧರ್ ಭೋಗರಾಜು ನಿರ್ದೇಶನ ಮಾಡ್ತಿದ್ದಾರೆ.

- Advertisement -

Latest Posts

Don't Miss