Sunday, September 8, 2024

Latest Posts

ಮಾಲಿವುಡ್ ಗೆ ಎಂಟ್ರಿ‌ ಕೊಟ್ಟ ಶ್ರೀಮನ್ನಾರಾಯಣನ ಬೆಡಗಿ… ನಿವೀನ್ ಪೌಳಿ ಜೊತೆ ಶಾನ್ವಿ ಶ್ರೀವಾಸ್ತವ್ ಡ್ಯುಯೇಟ್….!

- Advertisement -

ಟಾಲಿವುಡ್ ಮೂಲಕ‌ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಚೆಲುವೆ ಶಾನ್ವಿ ಶ್ರೀವಾಸ್ತವ್. ಬಳಿಕ ಕನ್ನಡ ಸಿನಿಮಾ ಇಂಡಸ್ಟ್ರೀಗೆ ಪಾದಾರ್ಪಣೆ ಮಾಡಿ ಉಪೇಂದ್ರ, ದರ್ಶನ್, ಯಶ್, ರಕ್ಷಿತ್, ಗಣೇಶ್ ಸೇರಿದಂತೆ ಹಲವು ಸ್ಟಾರ್ ಹೀರೋಗಳ ಜೊತೆ ಮಿಂಚಿದ ಈ ಬ್ಯೂಟಿ‌ ಸದ್ಯ ಕನ್ನಡದ ಬ್ಯುಸಿಯೆಸ್ಟ್ ನಟಿ. ಇದೀಗ ಶಾನ್ವಿ ಮಾಲಿವುಡ್ ಇಂಡಸ್ಟ್ರೀಗೂ ಎಂಟ್ರಿ ಕೊಟ್ಟಿದ್ದಾರೆ.

ಮೊದಲ ಬಾರಿಗೆ ಮಾಲಿವುಡ್ ಅಂಗಳಕ್ಕೆ ಎಂಟ್ರಿ‌ ಕೊಟ್ಟಿರುವ ಶಾನ್ವಿ, ಇಲ್ಲಿಯೂ ಸ್ಟಾರ್ ಹೀರೋ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾಳೆ. ಮಲಯಾಳಂನ ಸ್ಟಾರ್​ ನಟ ನಿವೀನ್​ ಪೌಳಿ ಹಾಗೂ ನಟ ಆಸಿಫ್​ ಅಲಿ ಜೊತೆ ಶಾನ್ವಿ ನಟಿಸ್ತಿದ್ದು, 18 ವರ್ಷದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಅಂದಹಾಗೇ ಚಿತ್ರಕ್ಕೆ ಮಹಾವೀರ್​​ಯರ್ ಅನ್ನೋ ಟೈಟಲ್ ಇಡಲಾಗಿದೆ.

- Advertisement -

Latest Posts

Don't Miss