ಅಂತೂ ಇಂತೂ ಹಲವು ಗಾಳಿ ಸುದ್ದಿಗಳಿಗೆಲ್ಲ ಬ್ರೇಕ್ ಹಾಕಿ ನಟಿ ಶುಭಪುಂಜಾ ಮದುವೆಗೆ ರೆಡಿಯಾಗಿದ್ದು, ಮಂಗಳೂರು ಮೂಲದ ಸುಮಂತ್‌ರನ್ನ ವಿವಾಹವಾಗಲಿದ್ದಾರೆ.
ಗ್ಯಾಸ್ ಏಜೆನ್ಸಿ ಬ್ಯುಸಿನೆಸ್‌ನಲ್ಲಿ ಕೆಲಸ ಮಾಡುತ್ತಿರುವ ಸುಮಂತ್, ಜಯಕರ್ನಾಟಕ ಸಂಘಟನೆಯ ಬೆಂಗಳೂರು ಸೌತ್ ವಿಂಗ್ ಪ್ರೆಸಿಡೆಂಟ್ ಆಗಿದ್ದಾರೆ.

ಇನ್ನು ಮಗಳ ಮದುವೆಗೆ ಕಾತರರಾಗಿದ್ದ ಶುಭಪುಂಜಾ ತಾಯಿ ಶುಭ ಮತ್ತು ಸುಮಂತ್ ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದಾರೆ. ಮೊದಲು ಮಗನ ಪ್ರೀತಿಗೆ ಒಪ್ಪಲು ಕೊಂಚ ಹಿಂದೇಟು ಹಾಕಿದ್ದ ಸುಮಂತ್ ಪೋಷಕರು ಮಗನ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇನ್ನು ಇದೇ ವರ್ಷ ಶುಭಪುಂಜಾ ಗುರುಹಿರಿಯರ ಸಮ್ಮುಖದಲ್ಲಿ ಸುಮಂತ್‌ರನ್ನ ವರಿಸಲಿದ್ದಾರೆ.
ಶುಭ- ಸುಮಂತ್ ಲವ್ ಶುರುವಾಗಿದ್ದು ಹೇಗೆ ಅಂತಾ ನೋಡೋದಾದ್ರೆ, ನಟಿ ಶುಭಪುಂಜಾ ಒಂದು ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಭೇಟಿ ನೀಡಿದ್ದ ಸಂದರ್ಭದಲ್ಲಿ, ಸುಮಂತ್ ಕೂಡಾ ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಂತರ ಸುಮಂತ್ ಕೂಡ ಜಯಕರ್ನಾಟಕ ಸಂಘಟನೆಗೆ ಸಂಬಂಧಪಟ್ಟ ಕಾರ್ಯಕ್ರಮಕ್ಕೆ ಶುಭಪುಂಜಾರನ್ನ ಗೆಸ್ಟ್ ಆಗಿ ಇನ್ವೈಟ್ ಮಾಡಿದ್ದರು. ಈ ಗೆಳೆತನ ಕೆಲ ಸಮಯದ ಬಳಿಕ ಪ್ರೀತಿಯ ರೂಪ ಪಡೆಯಿತು.
ಮನೆಯಲ್ಲಿ ಪ್ರೀತಿಗೆ ಒಪ್ಪಿಸಿ, ಮದುವೆಯಾಗಲು ಹೊರಟಿರು ಶುಭ- ಸುಮಂತ್ ಹಲವು ಗಾಸಿಪ್‌ಗಳಿಗೆ ಬ್ರೇಕ್ ಹಾಕಿದ್ದಾರೆ. ಕೊರೊನಾ ಲಾಕ್‌ಡೌನ್ ಇರುವ ಕಾರಣ ಇಬ್ಬರೂ ಸಿಂಪಲ್ ಆಗಿ ವಿವಾಹವಾಗಲು ನಿರ್ಧರಿಸಿದ್ದು, ಇದೇ ವರ್ಷ ವಿವಾಹವಾಗಲಿದ್ದಾರೆ.
ಸ್ಲಂಬಾಲ, ಅಂಜದಿರು, ಚಂಡ, ಸಿಗಂದೂರು ಚೌಡೇಶ್ವರಿ ಮಹಿಮೆ, ಕಂಠೀರವ, ಪ್ರೀತಿ ಹಂಗಾಮ, ತಾಕತ್ ಸೇರಿ ಹಲವು ಚಿತ್ರಗಳಲ್ಲಿ ಶುಭಪುಂಜಾ ನಟಿಸಿದ್ದಾರೆ.

