Bollywood News: ನಟಿ ಸನ್ನಿಲಿಯೋನ್ ಪತಿ-ಮಕ್ಕಳ ಜೊತೆ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಗಣಪನನ್ನು ಕೂರಿಸಿ, ತಮ್ಮ ಮೂವರು ಮಕ್ಕಳು ಮತ್ತು ಪತಿಯೊಂದಿಗೆ ಸನ್ನಿ ಗಣೇಶೋತ್ಸವ ಆಚರಿಸಿದ್ದಾರೆ.
ಗಣೇಶ ಚತುರ್ಥಿ ಮುಂಬೈನ ನಾಡ ಹಬ್ಬ. ಹಾಗಾಗಿ ಅಲ್ಲಿ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಗಣೇಶನಿಗೆ ಚಿನ್ನ, ವಜ್ರದಿಂದ ಸಿಂಗರಿಸಿ, ವಿಶೇಷ ಪೂಜೆ ಮಾಡಿ, ಭಕ್ತರಿಗೆ ಅನ್ನಸಂತರ್ಪಣೆ ಮಾಡಿ, ಸಂಭ್ರಮದಿಂದ ಗಣೇಶೋತ್ಸವ ಆಚರಿಸಲಾಗುತ್ತದೆ.
ಕೆಲವೆಡೆ ಗಣಪನನ್ನು ಒಂದು ದಿನ ಕೂರಿಸಿದರೆ, ಇನ್ನು ಕೆಲವೆಡೆ 5 ದಿನ, 7 ದಿನ, 9 ದಿನ, 11 ದಿನಗಳವರೆಗೂ ಕೂರಿಸಲಾಗುತ್ತದೆ. ಕೊನೆಯ ದಿನ ಮೆರವಣಿಗೆಯ ಮೂಲಕ ಸಂಭ್ರಮದಿಂದ, ಢೋಲು ಕುಣಿತಗಳೊಂದಿಗೆ ಗಣೇಶ ಚತುರ್ಥಿ ಆಚರಿಸಲಾಗುತ್ತದೆ.
ಅದೇ ರೀತಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಕೂಡ ತಮ್ಮ ಕುಟುಂಬಸ್ಥರೊಂದಿಗೆ ಗಣೇಶನ ಹಬ್ಬ ಮಾಡಿದ್ದು, ಗಣೇಶನನ್ನು ಕೂರಿಸಿ, ವಿಶೇಷ ಪೂಜೆ ಮಾಡಿದ್ದಾರೆ. ಅಲ್ಲದೇ, ಕೆಲ ಸ್ನೇಹಿತರನ್ನು ಕೂಡ ಪೂಜೆಗೆ ಆಮಂತ್ರಿಸಿದ್ದು, ಎಲ್ಲರೂ ಸೇರಿ, ಹಬ್ಬವನ್ನು ಎಂಜಾಯ್ ಮಾಡಿದ್ದಾರೆ.