Saturday, July 5, 2025

Latest Posts

ಏರೋ ಇಂಡಿಯಾ ಶೋ; ಇಂದು ಅದ್ಧೂರಿ ತೆರೆ !

- Advertisement -

State news

ಬೆಂಗಳೂರು(ಫೆ.೧೮): ಯಲಹಂಕ ವಾಯುನೆಲೆಯಲ್ಲಿ ನಡೆದ ಐದು ದಿನಗಳ ಏರೋ ಇಂಡಿಯಾ ಶೋ ಗೆ ಇಂದು ಕೊನೆ ದಿನವಾಗಿದೆ. ಹೀಗಾಗಿ ಹಲವಾರು ಜನ ಯಲಹಂಕದತ್ತ ಕಾಲಿಡುತ್ತಿದ್ದು, ಕೊನೆಯ ದಿನದ ಅಂಗವಾಗಿ ಹೆಬ್ಬಾಳ, ಯಲಹಂಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಇನ್ನೂ ಹೆಚ್ಚಾಗಿದೆ. ಕೆಲಸ ಕಚೇರಿಗಳಿಗೆ ತೆರಳುವ ಮಂದಿ ಒಂದಿಷ್ಟು ಗಮನಿಸಿಕೊಂಡು ಓಡಾಡಬೇಕಾಗುತ್ತದೆ. ಐದು ದಿನಗಳ ಕಾಲ ಈ ಏರೋ ಇಂಡಿಯಾ ಶೋ ನಡೆದಿದ್ದು, ವಿವಿಧ ಭಾಗಗಳಿಂದ ಜನ ಆಗಮಿಸಿದ್ದು, ಆಗಸದಲ್ಲಿ ಹಾರಾಡುವ ಲೋಹದ ಹಕ್ಕಿಗಳನ್ನು ನೋಡಲು ಜನ ಮುಗಿಬೀಳುತ್ತಿದ್ದರು.

ಈ ಏರ್ ಶೋದಲ್ಲಿ ಯುದ್ಧ ವಿಮಾನಗಳು, ಹೆಲಿಕಾಫ್ಟರ್ ಗಳು ಸ್ಪರ್ಧೆಗೆ ಇಳಿದು ಕಸರತ್ತು ನಡೆಸಿದವು. ಮೊದಲೇ ನೋಂದಣಿ ಮಾಡಿಕೊಂಡ ಜನರಿಗೆ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ಜನ ಕುಟುಂಬ ಸಮೇತ ವಾಯನೆಲೆಗೆ ಲಗ್ಗೆ ಇಟ್ಟಿದ್ದು, ಆಕಾಶದತ್ತ ಮುಖ ಮಾಡಿ ವಿಮಾನಗಳನ್ನು ವೀಕ್ಷಿಸಿದರು. ಜೊತೆಗೆ ವಿವಿಧ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಸಂಭ್ರಮದಲ್ಲಿ ಮುಳುಗಿದರು.

ಸುಖೋಯ್, ತೇಜಸ್, ಪ್ರಚಂಡ, ಸೂರ್ಯಕಿರಣ ತಂಡಗಳು ಎಂದಿನAತೆ ಬಾನಿನಲ್ಲಿ ಚಿತ್ತಾರ ಮೂಡಿಸಿದವು. ಕೊನೆಯದಾಗಿ, ಸೂರ್ಯಕಿರಣ್ ಲಘು ವಿಮಾನಗಳ ತಂಡದ ಪ್ರದರ್ಶನ ಜನಪ್ರೀಯವಾಗಿತ್ತು. ಈ ತಂಡದ ಪ್ರದರ್ಶನವಾದ ಬಳಿಕ ಏರೋ ಇಂಡಿಯಾ ಶೋಗೆ ತೆರೆಬಿದ್ದಿತು. ಗೇಟ್ ನಂಬರ್ ೮, ೯ ರಲ್ಲಿ ಚಿಕ್ಕ ಮಾರುಕಟ್ಟೆಯೂ ಸೃಷ್ಟಿಯಾಗಿದ್ದು, ಸೈನಿಕರ ಜಾಕೆಟ್, ಟೀ ಶಟ್ ð, ವಿಮಾನಗಳ ಕಲಾಕೃತಿ ಹೀಗೆ ಹಲವಾರು ಮಳಿಗೆಗಳನ್ನು ನೋಡಬಹುದಿತ್ತು.

- Advertisement -

Latest Posts

Don't Miss