international news…
ಅಬುಧಾಬಿಯಿಂದ ಹೊರಡಿದ್ದು ವಿಮಾನದ ಒಂದು ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ವಿಮಾನವು ವಿಮಾನ ನಿಲ್ದಾಣಕ್ಕೆ ಹಿಂತಿರುಗಿದೆ. ಯಾವುದೇ ರೀತಿಯ ಅಪಾಯ ಪ್ರಕರಣಗಳು ಕಂಡುಬಂದಿಲ್ಲ, ಒಂದು ಕ್ಷಣಕ್ಕೆ ಜನ ಭಯಗೊಂಡಿದ್ದಾರೆ. ಅಬುಧಾಬಿಯಿಂದ ಕ್ಯಾಲಿಕಟ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಒಂದು ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿಮಾನ ನಿಲ್ದಾಣಕ್ಕೆ ಹಿಂತಿರುಗಿದೆ. ಸಮುದ್ರ ಮಟ್ಟದಿಂದ ಸುಮಾರು 1,000 ಅಡಿ ಎತ್ತರದಲ್ಲಿ ಜ್ವಾಲೆ ಪತ್ತೆಯಾಗಿದೆ. ಶುಕ್ರವಾರ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಇಂಜಿನ್‌ಗೆ ಬೆಂಕಿ ಹೊತ್ತಿಕೊಂಡ ನಂತರ ಅಬುಧಾಬಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಹೇಳಿಕೆಯ ಪ್ರಕಾರ, “ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ B737-800 ವಿಮಾನ ಆಪರೇಟಿಂಗ್ ಫ್ಲೈಟ್ IX 348 (ಅಬುಧಾಬಿ-ಕ್ಯಾಲಿಕಟ್ ) ನಂ.1 ಇಂಜಿನ್ ಫ್ಲ್ಯಾಮ್ ಔಟ್‌ನಿಂದ ಏರ್‌ಟರ್ನ್‌ಬ್ಯಾಕ್‌ನಲ್ಲಿ 1000 ಅಡಿಗಳಲ್ಲಿ ಎತ್ತರದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ.