- Advertisement -
ಹೊಸದಿಲ್ಲಿ:2023ರ ಎಎಫ್ಸಿ ಏಷ್ಯನ್ ಕಪ್ ಫೈನಲ್ ಗೆ ಭಾರತ ಫುಟ್ಬಾಲ್ ತಂಡ ಅರ್ಹತೆ ಪಡೆದಿದೆ. ಉಪಖಂಡದ ಸ್ಪರ್ಧೆಯಲ್ಲಿ ಭಾರತ ಐದನೆ ಬಾರಿಗೆ ಅಂತಿಮ ಸುತ್ತಿದೆ ಲಗ್ಗೆ ಹಾಕಿದೆ.
ಜೂ.17ರಂದು ಕೋಲ್ಕತ್ತಾದದಲ್ಲಿ ನಡೆಯಲಿರುವ ಫೈನಲ್ ನಲ್ಲಿ ಭಾರತ ಹಾಂಗ್ ಕಾಂಗ್ ವಿರುದ್ಧ ಆಡಲಿದೆ.
ಡಿ ಗುಂಪಿನಲ್ಲಿ ಆಡುತ್ತಿರುವ ಭಾರತ ಅಂಕಪಟ್ಟಿಯಲ್ಲಿ 6 ಅಂಕಗಳೊಂದಿಗೆ ಎರಡನೆ ಸ್ಥಾನ ಪಡೆದಿದೆ. ಬಿ ಗುಂಪಿನಲ್ಲಿ ಪ್ಯಾಲಿಸ್ತೈನ್ ತಂಡ ಫಿಲಿಫೈನ್ಸ್ ತಂಡವನ್ನು ಸೋಲಿಸುವ ಮೂಲಕ ಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಂಡಿತು.
ಕಳೆದ ವಾರ ಅಫ್ಘಾನಿಸ್ಥಾನ ತಂಡವನ್ನು ಸೋಲಿಸುವ ಮುನ್ನ ಕಾಂಬೊಡಿಯಾ ವಿರುದ್ಧ 2-0 ಗೋಲುಗಳಿಂದ ಗೆದ್ದು ಮೊದಲ ಅರ್ಹತೆ ಪಡೆಯಿತು. ಒಳ್ಳೆಯ ಫಾರ್ಮ್ ನಲ್ಲಿರುವ ಸುನಿಲ್ ಚೆಟ್ರಿ 4 ಗೋಲುಗಳನ್ನು ಹೊಡೆದಿದ್ದಾರೆ.
ಅಫ್ಘಾನಿಸ್ಥಾನ ವಿರುದ್ಧ ಹೊಡೆದ ಫ್ರೀಕಿಕ್ ತುಂಬ ಸೊಗಸಾಗಿತ್ತು.
- Advertisement -