Sunday, September 8, 2024

Latest Posts

T20 WORLD CUP: ಅಫ್ಘಾನಿಸ್ತಾನ ಸೆಮಿಫೈನಲ್​ಗೆ- ಭಾರತಕ್ಕೆ ಯಾರು ಎದುರಾಳಿ?

- Advertisement -

ಭಾರೀ ಕುತೂಹಲ ಮೂಡಿಸಿದ್ದ ಹಾಗೂ ಅಭಿಮಾನಿಗಳ ಉಸಿರು ಬಿಗಿ ಹಿಡಿಯುವಂತೆ ಮಾಡಿದ್ದ ಬಾಂಗ್ಲಾದೇಶ ವಿರುದ್ಧದ ಟಿ20 ವಿಶ್ವಕಪ್​ ಸೂಪರ್ 8 ಪಂದ್ಯದಲ್ಲಿ ಅಫ್ಘಾನಿಸ್ತಾನ 8 ರನ್​ಗಳ ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ ಮೊದಲ ಬಾರಿಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.
ಕಿಂಗ್​ಸ್ಟನ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆಫ್ಘನ್, 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು ಕೇವಲ 115 ರನ್ ಮಾತ್ರ ಗಳಿಸಿತು. ಓಪನರ್ ಗರ್ಭಝ್ 43, ಇಬ್ರಾಹಿಮ್ ಝಡ್ರಾನ್ 18 ಹಾಗೂ ರಶೀದ್ ಖಾನ್ 19 ರನ್ ಗಳಿಸಿದ್ರು. ಬಾಂಗ್ಲಾ ಪರ ರಶೀದ್ ಹೊಸೈನ್ 3 ವಿಕೆಟ್ ಪಡೆದು ಮಿಂಚಿದ್ರು.


116 ರನ್​ಗಳ ಸುಲಭ ಟಾರ್ಗೆಟ್ ಬೆನ್ನತ್ತಿದ್ದ ಬಾಂಗ್ಲಾ, 23 ರನ್​ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮಳೆ ಅಡಚಣೆ ನಡುವೆಯೇ ನಡೆದ ಪಂದ್ಯದಲ್ಲಿ ರಶೀದ್ ಖಾನ್ ಸ್ಪಿನ್ ಮೋಡಿಗೆ ಬಾಂಗ್ಲಾ ಬ್ಯಾಟರ್​ಗಳು ಪೆವಿಲಿಯನ್ ಪರೇಡ್ ನಡೆಸಿದ್ರು.
ಡೆತ್ ಓವರ್​ಗಳಲ್ಲಿ ವೇಗಿ ನವೀನ್ ಉಕ್ ಹಕ್ ಬಾಂಗ್ಲಾಗೆ ಶಾಕ್ ಮೇಲೆ ಶಾಕ್ ಕೊಟ್ರು. ಇದರೊಂದಿಗೆ ಬಾಂಗ್ಲಾ 17.5 ಓವರ್​ಗಳಲ್ಲಿ 105 ರನ್​ಗೆ ತನ್ನಲ್ಲಾ ವಿಕೆಟ್ ಕಳೆದುಕೊಂಡಿತು. ವಿಕೆಟ್ ಕೀಪರ್ ಲಿಟನ್ ದಾಸ್ ಅಜೇಯ 54 ರನ್ ಗಳಿಸಿದ್ದು ಬಿಟ್ರೆ, ಉಳಿದ್ಯಾವ ಬ್ಯಾಟರ್ ಕೂಡ ಬಿಗ್ ಇನ್ನಿಂಗ್ಸ್ ಕಟ್ಟಲಿಲ್ಲ. ನವೀನ್ ಉಲ್ ಹಕ್ ಹಾಗೂ ರಶೀದ್ ಖಾನ್ ತಲಾ 4 ವಿಕೆಟ್ ಪಡೆದು ತಂಡಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ರು.
ಜೂ.26ರಂದು ಟ್ರಿನಿಡಾಡ್​ನ ಬ್ರಿಯನ್ ಲಾರಾ ಸ್ಟೇಡಿಯಂನಲ್ಲಿ ನಡೆಯಲಿರೋ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ ಮುಖಾಮುಖಿಯಾಗಲಿವೆ. ಗಯಾನಾದಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

- Advertisement -

Latest Posts

Don't Miss