www.karnatakatv.net : ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಜಿಸಿಸಿ ರಾಷ್ಟ್ರಗಳಿಂದ ಹೂಡಿಕೆದಾರರ ನಿಯೋಗವೊಂದು ಮುಂದಿನ ತಿಂಗಳು ಬೆಂಗಳೂರಿಗೆ ಆಗಮಿಸಲಿದೆ ಎಂದು ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಸೌದಿ ಅರಬೀಯಾ, ಒಮನ್ ಮತ್ತು ಯುಎಇ ರಾಷ್ಟ್ರಗಳ ಹೂಡಿಕೆದಾರರು ಬೆಂಗಳೂರು ಹೊರವಲಯದಲ್ಲಿ ವಿಶ್ವದರ್ಜೆ ಮಟ್ಟದ ಡಿಸೈನ್ ಡಿಸ್ಟ್ರಿಕ್ಟ್ ಸ್ಥಾಪನೆ ಸೇರಿದಂತೆ ಇನ್ನಿತರ ಪ್ರಮುಖ ಹೂಡಿಕೆ ಪ್ರಸ್ತಾಪಗಳಿಗೆ ಒಲವು ತೋರಿವೆ ಎಂದು ಐಟಿ ಬಿಟಿ ಮತ್ತು ತಂತ್ರಜ್ಞಾನ ಸಚಿವ ಡಾ. ಅಶ್ವತ್ಥ ನಾರಾಯಣ್ ಸುದ್ದಿಗಾರರಿಗೆ ತಿಳಿಸಿದರು. 1 ಸಾವಿರ ಕೋಟಿ ರೂ. ಉದ್ದೇಶಿತ ಡಿಸೈನ್ ಡಿಸ್ಟ್ರಿಕ್ಟ್ ಸುಮಾರು 100 ರಿಂದ 150 ಎಕರೆ ಪ್ರದೇಶದಲ್ಲಿ ಅಸ್ವಿತ್ವಕ್ಕೆ ಬರಲಿದೆ. ಇದರಲ್ಲಿ ಉದ್ಯಮರಂಗಕ್ಕೆ ಬೇಕಾಗುವ ಪ್ರತಿಯೊಂಗು ವಸ್ತುವನ್ನೂ ಜಾಗತಿಕ ಮಟ್ಟದಲ್ಲಿ ವಿನ್ಯಾಸಗೊಳಿಸಲಾಗುವುದು, ಇದು ಔದ್ಯಮಿಕ ವಿನ್ಯಾಸ, ಕಲೆ ಮತ್ತು ಫ್ಯಾಷನ್ ಸಂಸ್ಕೃತಿಗಳ ಸಂಗಮವಾಗಲಿದ್ದು, ಇಲ್ಲಿ ಬೆಂಗಳೂರು ಡಿಸೈನ್ ಫೆಸ್ಟಿವಲ್ ಹಮ್ಮಿಕೊಳ್ಳಲಾಗುವುದು, ಗಲ್ಫ್ ಇಸ್ಲಾಮಿಕ್ ಇನ್ವೇಸ್ಟ್ ಮೆಂಟ್ ಬೆಂಗಳೂರಿನಲ್ಲಿ ಕಚೇರಿ ತೆರೆಯಲು ಉದ್ದೇಶಿಸಿದೆ ಎಂದು ತಿಳಿಸಿದ್ದಾರೆ.