Monday, November 17, 2025

Latest Posts

AI ಮಾರಕ! ಚಿತ್ರರಂಗ ಎಡವಿದ್ದೆಲ್ಲಿ?: Nagathihalli Chandrashekhar Podcast

- Advertisement -

Sandalwood: ಸದ್ಯ ಎಲ್ಲಿ ನೋಡಿದ್ರೂ ಎಐ ಮ್ಯಾಜಿಕ್ ನಡೀತಿದೆ. ಎಷ್ಟೋ ಕೆಲಸಗಳನ್ನು ಸುಲಭವಾಗಿಸುತ್ತಿದೆ. ಎಷ್ಟೋ ಜನರಿಗೆ ಕೆಲಸ ಸಿಗುವಂತೆ ಮಾಡಿದ್ರೆ, ಇನ್ನು ಅದೆಷ್ಟೋ ಕಂಪನಿಗಳು ಎಐ ಬಳಸಿ, ಹಲವರನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಇಂಥ ಎಐ ಚಿತ್ರರಂಗಕ್ಕೆ ಮಾರಕವೋ, ಪೂರಕವೋ ಎಂಬ ಪ್ರಶ್ನೆಗೆ ನಿರ್ದೇಶಕರಾದ ನಾಗತೀಹಳ್ಳಿ ಚಂದ್ರಶೇಖರ್ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ.

ಎಐ ಸದ್ಯಕ್ಕೆ ಚಿತ್ರರಂಗಕ್ಕೆ ಮಾರಕ. ಆದರೆ ಅದನ್ನು ನಾವು ಪೂರಕವನ್ನಾಗಿಸಬಹುದು. ಎಐ ಸೈನ್ಸ್, ರಿಸರ್ಜ್, ಸರ್ಜರಿ ಹೀಗೆ ಎಲ್ಲ ಕಡೆಯೂ ಬಂದಿದೆ. ಇನ್ನು ಮುಂದೆ ಸಿನಿಮಾಕ್ಕೂ ಬರಬಹುದು. ಆದರೆ ಅದನ್ನು ಹೇಗೆ ಬಳಸಬೇಕು ಅನ್ನೋದು ನಿಮಗೆ ತಿಳಿದಿರಬೇಕು. ಎಲ್ಲ ಕೆಲಸ ಎಐಗೆ ಬಿಟ್ಟರೆ, ಅದು ನಗೆಪಾಟಲಾಗಿಬಿಡುತ್ತದೆ ಅಂತಾರೆ ನಿರ್ದೇಶಕರು.

ಮುಂದೆ ಎಐನಲ್ಲೇ ಸಿನಿಮಾ ಮಾಡುವ ದಿನಗಳು ಬಂದರೂ ಬರಬಹುದು. ಆದರೆ ನಾವು ಅದನ್ನು ಹೇಗೆ ಬಳಸಬೇಕು ಅನ್ನೋದು ತಿಳಿದಿರಬೇಕು. ಆಗ ಸಿನಿಮಾ ಸರಿಯಾಗಿ ಬರುತ್ತದೆ ಅಂತಾರೆ ನಾಗತೀಹಳ್ಳಿ ಚಂದ್ರಶೇಖರ್. ಇನ್ನು ಸಿನಿಮಾವನ್ನು ಪ್ರತೀ ಬಾರಿ ಪ್ರಯೋಗ ಅಂತಾ ಮಾಡಬಾರದು ಅಂದಿರುವ ನಿರ್ದೇಶಕರು ಸಿನಿಮಾ ಮಾಡುವ ಬಗ್ಗೆ ಹೆಚ್ಚು ಕುತೂಹಲಕಾರಿ ಮಾಹಿತಿ ನೀಡಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

 

 

- Advertisement -

Latest Posts

Don't Miss