www.karnatakatv.net :ರಾಯಚೂರು: ಏಮ್ಸ್ ಹೋರಾಟ ಸಮಿತಿ ಮತ್ತು ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ್ ನಡುವೆ ವಾಗ್ವಾದ ನಡೆಯಿತು. ಏಮ್ಸ್ ರಾಯಚೂರಿನಲ್ಲಿ ಸ್ಥಾಪಿಸುವಂತೆ ಒತ್ತಾಯಿಸಿ ಹೋರಾಟ ಸಮಿತಿ ಇಂದು ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ ಅವರ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿದರು.
ರಾಯಚೂರು ಜಿಲ್ಲೆಗೆ ನಿರಂತರವಾಗಿ ಅನ್ಯಾಯ ಮಾಡಲಾಗುತ್ತಿದೆ. ಐಐಟಿಯನ್ನ ಧಾರವಾಡಕ್ಕೆ ನೀಡಲಾಯಿತು. ಪರ್ಯಾಯವಾಗಿ ಏಮ್ಸ್ ರಾಯಚೂರಿಗೆ ನೀಡುವಂತೆ ಹೋರಾಟ ಸಮಿತಿ ಆಗ್ರಹವಾಗಿದ್ದು, ಇಂದಿನ ಧರಣಿಯಲ್ಲಿ ಹೋರಾಟ ಸಮಿತಿಯವರು ಶಾಸಕರ ವಿರುದ್ದ ಘೋಷಣೆ ಕೂಗಿದಾಗ ಶಾಸಕ ಶಿವರಾಜ ಪಾಟೀಲ್ ಕೆಂಡಮಂಡಲರಾಗಿ, ಜಿಲ್ಲೆಯಲ್ಲಿ ನಾನೊಬ್ಬನೇ ಶಾಸಕನಿಲ್ಲ ಇನ್ನೂ ಆರು ಜನ ಶಾಸಕರಿದ್ದಾರೆ ಅವರ ಕಚೇರಿ ಮುಂದೆಯೂ ಧರಣಿ ಮಾಡಿ ಘೋಷಣೆ ಕೂಗಿ, ನಿಮ್ಮ ಹೋರಾಟಕ್ಕೆ ಬೆಂಬಲಿಸಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ, ಇನ್ನುಳಿದ ಶಾಸಕರ ರಾಜೀನಾಮೆ ಪಡೆಯುವ ಶಕ್ತಿ ನಿಮಗಿದೆಯೇ ಎಂದು ಏರು ಧ್ವನಿಯಲ್ಲಿ ಹೋರಾಟಗಾರರನ್ನ ತರಾಟೆಗೆ ತೆಗೆದುಕೊಂಡರು.
ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು

