- Advertisement -
ರಾಷ್ಟ್ರೀಯ ಸುದ್ದಿ: ದುಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೇರಳಕ್ಕೆ ಮರಳಿದೆ. ಯಾಕೆಂದರೆ ವಿಮಾನದಲ್ಲಿನ ಹವಾ ನಿಯಂತ್ರಣದಲ್ಲಿ ಸಮಸ್ಯೆ ಉಂಟಾದ ಕಾರಣ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಕೇರಳಕ್ಕೆ ವಾಪಾಸಾಗಿದೆ.
ಸಮಯ 1.09 ನಿಮಿಷಕ್ಕೆ ವಿಮಾನ ಟೇಕ್ ಆಫ್ ಆಗಿದ್ದು ಟೇಕ್ ಆಫ್ ಆದ ಕೆಲವೇ ಗಂಟೆಗಳಲ್ಲಿ ಹವಾ ನಿಯಂತ್ರಣದಲ್ಲಿ ದೋಷ ಕಂಡುಬಂದ ಹಿನ್ನಲೆ ಕೇರಳದ ತಿರುವನಂತಪುರಂ ಗೆ ಮರಳಿದೆ ಸುಮಾರು 3.15 ಕ್ಕೆ ಯಾವುದೇ ಸಮಸ್ಯೆ ಇಲ್ಲದೆ ಭೂಸ್ಪರ್ಶ ಮಾಡಿದೆ.
ವಿಮಾನದಲ್ಲಿ ಸಿಬ್ಬಂಧಿಗಳು ಸೇರಿ 178 ಜನರನ್ನು ಹೊತ್ತುಕೊಂಡು ಆಕಾಶಕ್ಕೆ ಹಾರಿದ್ದ ವಿಮಾನ ಹವಾ ನಿಯಂತ್ರಣ ವ್ಯವಸ್ಥೆಯಲ್ಲಿ ದೋಷ ಕಂಡ ಹಿನ್ನಲೆಯಲ್ಲಿ ದುಬೈಗೆ ಹೊರಟಿದ್ದ ವಿಮಾನ ತಿರುವನಂತಪುರಂನಲ್ಲಿ ಲ್ಯಾಂಡ್ ಆಗಿದೆ.
Sim Card :ಸಿಮ್ ಕಾರ್ಡ್ ಒಂದು ಮೂಲೆ ಕತ್ತರಿಸಿರೋದು ಯಾಕೆ ಗೊತ್ತಾ..?!
- Advertisement -