ಏರ್ ಇಂಡಿಯಾ ಪೈಲೆಟ್ ಗಳಿಗೆ ಕೊರೊನಾ ಬಂದಿದ್ದು ಹೇಗೆ..?

ಕರ್ನಾಟಕ ಟಿವಿ : ವೈದ್ಯರು, ಯೋಧರು, ಪೊಲೀಸರಿಗೆ ಅಂಟಿದ್ದ ಕೊರೊನಾ  ಇದೀಗ ಏರ್ ಇಂಡಿಯಾದ ಐವರು ಪೈಲೆಟ್ ಗಳಿಗೂ ತಗುಲಿದೆ. ಹೌದು ಏರ್ ಇಂಡಿಯಾದ ಐವರು ಪೈಲೆಟ್ ಗಳಿಗೆ ಕೊರೊನಾ ಸೋಂಕು  ಧೃಢಪಟ್ಟಿದೆ.  ಏರ್ ಇಂಡಿಯಾ ಕಾರ್ಗೋ ವಿಮಾನಗಳ ಪೈಲೆಟ್ ಗಳಿಗೆ ಸೋಂಕು ತಗುಲಿದೆ.. ನಾಗರೀಕ ವಿಮಾನಯಾವ ಸಂಚಾರ ನಿಲ್ಲಿಸಿದ್ರು ಕಾರ್ಗೋ ವಿಮಾನಗಳು ಔಷಧಿ ಹಾಗೂ ಅಗತ್ಯ ವಸ್ತುಗಳ ಪೂರೈಕೆ ಹಾಗೂ ರಫ್ತು ಕೆಲಸಗಳನ್ನ ಮಾಡ್ತಿದ್ವು.. ಈ ವಿಮಾನಗಳು ಎರಡ್ಮೂರು ಬಾರಿ ಚೀನಾಗೂ ಸಂಚಾರ ಮಾಡಿವೆ.. ಈ ಹಿನ್ನೆಲೆ ಚೀನಾಗೆ ತೆರಳಿದ್ದ ವೇಳೆ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

About The Author