www.karnatakatv.net: ವಿಮಾನ ಏರಬೇಕಿದ್ದ ಪ್ರಯಾಣಿಕರೊಬ್ಬರ ಬ್ಯಾಗ್ ನಲ್ಲಿ ತಲೆ ಬರುಡೆ ನೋಡಿ ವಿಮಾನ ನಿಲ್ದಾಣಗಳು ದಂಗಾದ ಪ್ರಸಂಗ ಇಂಡೋರ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಹೌದು ಇಂಡೋರ್ ಏರ್ಪೋಟ್ ನಲ್ಲಿ ದೆಹಲಿಗೆ ಪ್ರಯಾಣಿಸಲಿದ್ದ ಪ್ರಯಾಣಿಕರೊಬ್ಬರ ಬ್ಯಾಗಿನಲ್ಲಿ ತಲೆಬುರುಡೆ ಪತ್ತೆಯಾಗಿದೆ. ಏರ್ ಪೋರ್ಟ್ ನಲ್ಲಿ ಸ್ಕ್ರೀನಿಂಗ್ ವೇಳೆ ಲಗ್ಗೇಜ್ ನಲ್ಲಿ ಕಾಣಿಸಿಕೊಂಡ ವಿಚಿತ್ರ ವಸ್ತುವನ್ನು ತೆಗೆದು ಪರೀಕ್ಷಿಸಿದಾಗ ಅದು ತಲೆ ಬುರುಡೆ ಅಂತ ತಿಳಿದುಬಂದಿದೆ. ಉಜ್ಜೈನ್ ನಿವಾಸಿ ಸಾಧ್ವಿ ಯೋಗಿಮಠ ಎಂಬ ಮಹಿಳೆಯ ಲಗ್ಗೇಜ್ ನಲ್ಲಿ ತಲೆ ಬುರುಡೆ ಕಂಡುಬಂದಿದೆ. ಈ ವೇಳೆ ಆಕೆಯನ್ನು ವಿಚಾರಿಸಿದಾಗ, ಅದು ಇತ್ತೀಚೆಗೆ ಮೃತಪಟ್ಟ ತನ್ನ ಸಂಬಂಧಿಯೊಬ್ಬರ ಅಸ್ಥ, ಅದನ್ನು ಹರಿದ್ವಾರದಲ್ಲಿ ಬಿಡಲು ತಂದಿರೋದಾಗಿ ಅಂತ ಆಕೆ ತಿಳಿಸಿದ್ದಾಳೆ. ಆದ್ರೆ ವಿಮಾನಯಾನ ನಿರ್ದೇಶನಾಲಯದ ನಿಯಮಾವಳಿಗಳ ಪ್ರಕಾರ ವಿಮಾನದಲ್ಲಿ ಮಾನವ ಅಸ್ಥಿಯನ್ನು ಕೊಂಡೊಯ್ಯಲು ಅಧಿಕಾರಿಗಳ ಅನುಮತಿ ಪಡೆದಿರಬೇಕು. ಆದ್ರೆ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಬೇರೆದಾರಿಯಿಲ್ಲದೆ ಅಸ್ಥಿಯನ್ನು ಆಕೆಯ ಸಂಬಂಧಿಗೆ ಅಸ್ಥಿಯನ್ನು ಒಪ್ಪಿಸಿ ಆಕೆ ತನ್ನ ಪ್ರಯಾಣ ಮುಂದುವರಿಸಬೇಕಾಯ್ತು.