Thursday, May 30, 2024

Latest Posts

ಪದೇ ಪದೇ ಐಶ್ವರ್ಯಾ ರೈ, ಅಮಿತಾಬ್‌ ಬಚ್ಚನ್ ಹೆಸರು ಉಲ್ಲೇಖ: ರಾಹುಲ್ ವಿರುದ್ಧ ಬಿಗ್‌ಬಿ ಫ್ಯಾನ್ಸ್ ಗರಂ

- Advertisement -

Political News: ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಈ ಮೊದಲು ಭಾರತ್ ಜೋಡೋ ಯಾತ್ರೆ ವೇಳೆ ನಟಿ ಐಶ್ವರ್ಯಾ ರೈ ಮತ್ತು ಅಮಿತಾಬ್‌ ಬಚ್ಚನ್ ಹೆಸರು ತೆಗೆದುಕೊಂಡು ವ್ಯಂಗ್ಯವಾಡಿದ್ದರು. ಈ ವೇಳೆ ಹಲವು ನೆಟ್ಟಿಗರು ರಾಹುಲ್ ವಿರುದ್ಧ ಗರಂ ಆಗಿದ್ದರು.

ಏಕೆಂದರೆ ರಾಹುಲ್ ಗಾಂಧಿ, ರಾಮಮಂದಿರ ಉದ್ಘಾಟನೆ ವೇಳೆ, ನನಗೆ ಅಮಿತಾಬ್, ಐಶ್ವರ್ಯಾ ರೈಯಂಥ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕಂಡರೆ ಹೊರತು, ಬಡವರು ಯಾರೂ ಕಾಣಲಿಲ್ಲ ಎಂದು ಹೇಳಿದ್ದರು. ಈ ವೇಳೆ ಐಶ್ವರ್ಯಾ ರೈಯನ್ನು ನಾಾಚ್ನೇವಾಲಿ ಎಂದು ಸಂಬೋಧಿಸಿದ್ದರು. ಈ ಕಾರಣಕ್ಕೆ ಬಾಲಿವುಡ್‌ನ ಕೆಲ ಸೆಲೆಬ್ರಿಟಿಗಳು ಮತ್ತು ನೆಟ್ಟಿಗರು ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಇದೀಗ ಮತ್ತೊಮ್ಮೆ ರಾಹುಲ್ ಗಾಂಧಿ ಅಮಿತಾಬ್ ಮತ್ತು ಐಶ್ವರ್ಯಾ ಜೊತೆ ವಿರಾಟ್ ಕೊಹ್ಲಿ ಹೆಸರು ಕೂಡ ಹೇಳಿದ್ದಾರೆ. ನರೇಗಾ ಹೋರಾಟಕ್ಕಾಗಿ, ಭೂಸ್ವಾಧೀನ ತಿದ್ದುಪಡಿ ಕಾಯ್ದೆ ಬಗ್ಗೆ ಮಾತನಾಡುವುದು ಮುಖ್ಯವಲ್ಲ, ನಾನು ಅಮಿತಾಬ್, ಐಶ್ವರ್ಯ, ವಿರಾಟ್ ಕೊಹ್ಲಿ ಹೆಸರು ತೆಗೆದುಕೊಳ್ಳುವುದು ಇವರಿಗೆಲ್ಲ ಮುಖ್ಯವಾಗಿದೆ ಎಂದು ತಮ್ಮ ವಿರುದ್ಧ ಮಾತನಾಡಿದವರ ಬಗ್ಗೆ ರಾಹುಲ್ ಪ್ರಶ್ನಿಸಿದ್ದಾರೆ.

ಭಾಷಣ ಮಾಡುವ ವೇಳೆ ಕುಸಿದು ಬಿದ್ದ ಕೇಂದ್ರ ಸಚಿವ ನಿತೀನ್ ಗಡ್ಕರಿ..

ಕದ್ದುಮುಚ್ಚಿ ನಿರ್ಧಾರ ತೆಗೆದುಕೊಳ್ಳಲು ಅಧಿಕಾರ ಕೊಟ್ಟವರು ಯಾರು?: ಸಿಎಂಗೆ ಸುನೀಲ್ ಕುಮಾರ್ ಪ್ರಶ್ನೆ

ಆರೋಪಿ ಫಯಾಜ್ ಮೊಬೈಲ್ನಲ್ಲಿದ್ದ ಫೋಟೋಗಳು ಲೀಕ್ ಆಗಿದ್ದು ಹೇಗೆ?: ಪ್ರಹ್ಲಾದ್ ಜೋಶಿ ಪ್ರಶ್ನೆ..

- Advertisement -

Latest Posts

Don't Miss