Wednesday, August 6, 2025

Latest Posts

ನಟಿ ಐಶ್ವರ್ಯ ರೈ ಹೆಸರಲ್ಲಿ ನಕಲಿ ಪಾಸ್ ಪೋರ್ಟ್ ಬಳಕೆ ಮಾಡಿದ್ದ ವಿದೇಶಿಗರು ಪೊಲೀಸರ ವಶ

- Advertisement -

ನೀಲಿ ಕಂಗಳ ಚೆಲುವೆ ಎಂದೇ ಖ್ಯಾತಿ ಹೊಂದಿರುವ ಬಾಲಿವುಡ್ ನಟಿ ಐಶ್ವರ್ಯ ರೈ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡವರು. ಸಿನಿರಂಗದಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು ಮತ್ತು ವಿಶ್ವದಾದ್ಯಂತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಆದರೆ ನಟಿ ಐರ್ಶರ್ಯ ರೈ ಅವರ ಹೆಸರಿನಲ್ಲಿ ನಕಲಿ ಪಾಸ್ ಪೋರ್ಟ್ ಬಳಕೆ ಮಾಡಿ ಭೂಪರು ಪೊಲೀಸರ ವಶವಾಗಿದ್ದಾರೆ. ನಕಲಿ ಪಾಸ್ ಪೋರ್ಟ್ ಮಾಡಿಸಿದವರು ವಿದೇಶಿಗರಾಗಿದ್ದು, ಉತ್ತರ ಪ್ರದೇಶದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇಬ್ಬರು ನೈಜೀರಿಯನ್ ಹಾಗೂ ಒಬ್ಬ ಘಾನಾದ ಪ್ರಜೆಯಿಂದ ನಕಲಿ ಪಾಸ್ ಪೋರ್ಟ್ ವಶ ಪಡಸಿಕೊಂಡು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅದರ ಜೊತೆ 4 ಕೋಟಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡಿದ್ದಾರೆ.

ಅಮಿತಾಬ್ ಬಚ್ಚನ್ ಗೆ ‘ಭಾರತ ರತ್ನ ಪ್ರಶಸ್ತಿ’ ನೀಡಲು ಮಮತಾ ಬ್ಯಾನರ್ಜಿ ಮನವಿ

ಉತ್ತರ ಪ್ರದೇಶದ ಗ್ರೇಟರ್ ನೊಯ್ಡಾನಲ್ಲಿ ವಾಸವಿದ್ದ ಈ ಮೂವರು ವಿವಿಧ ಸೈಬರ್ ಸಂಬಂಧಿತ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಮಾಜಿ ಮಿಲಿಟರಿ ಅಧಿಕಾರಿಯೊಬ್ಬರಿಗೆ ಮೋಸ ಮಾಡಿ ಸುಮಾರು 1.81 ಕೋಟಿ ಹಣ ಲಪಟಾಯಿಸಿದ್ದರು. ಅವರು ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿದ್ದು, ಭಾರಿ ಮೊತ್ತದ ಹಣದ ಜೊತೆಗೆ ಐಶ್ವರ್ಯಾ ರೈ ಹೆಸರಿನಲ್ಲಿರುವ ನಕಲಿ ಪಾಸ್‌ಪೋರ್ಟ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಮಧ್ಯರಾತ್ರಿ ಮನೆಗೆ ಆಕಸ್ಮಿಕ ಬೆಂಕಿ : ಒಂದೇ ಕುಟುಂಬದ 6ಜನ ಸಾವು

ರಸ್ತೆ ಸರಿಪಡಿಸಲು ಗ್ರಾಮಸ್ಥರಿಂದ ಪ್ರತಿಭಟನೆ

- Advertisement -

Latest Posts

Don't Miss