ಮಹಾತ್ಮ ಗಾಂಧಿ ನರೇಗಾ ಯೋಜನೆ ಕೇಂದ್ರ ಸರ್ಕಾರ ಬಹು ನಿರೀಕ್ಷಿತ ಗ್ರಾಮೀಣ ಪ್ರದೇಶ ಅಭಿವೃದ್ಧಿಗಾಗಿ ಆರಂಭಿಸಿರುವ ಯೋಜನೆ.. ಈ ಯೋಜನೆ ಯಡಿ ಹಲವಾರು ಕಾಮಗಾರಿಗಳನ್ನು ಕೈ ಗೆತ್ತಿಕೊಳ್ಳಲಾಗಿದೆ. ಇದರಲ್ಲಿ ಬದು ನಿರ್ಮಾಣ ಅಭಿಯಾನ ಸಹ ಒಂದು..ರೈತರಿಗೆ ಬಲ ತುಂಬಲು ಆರಂಭಿಸಿರುವ ಈ ಅಭಿಯಾನ , ಈಗ ಅಧಿಕಾರಿಗಳ ಜೇಬು ತುಂಬುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಬದು ನಿರ್ಮಾಣ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಹೊಡೆದ ಆರೋಪ ಕೇಳಿ ಬಂದಿದೆ..
ನರೇಗಾ ಯೋಜನೆಯಡಿ ಬದು ನಿರ್ಮಾಣ ಯೋಜನೆಯಡಿ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ..
ಕಲಘಟಗಿ ತಾಲ್ಲೂಕಿನ ಅತೀ ಹೆಚ್ಚು ಬದು ನಿರ್ಮಾಣ ಹಿಂದಿದೆ ಹಲವು ಅನುಮಾನ
ಒಂದೇ ಪೋಟೋದಲ್ಲಿ ಎರೆಡೆರಡು ಬಿಲ್, ಬರೀ ದಾಖಲೆಯಲ್ಲಿ ಮಾತ್ರ ಬದು ರೈತರ ಜಮೀನಿನಲ್ಲಿ ಇಲ್ಲ
ಕೇಂದ್ರ ಸರ್ಕಾರ ಆರಂಭಿಸಿರುವ ನರೇಗಾ ಯೋಜನೆ ಗ್ರಾಮೀಣ ಪ್ರದೇಶಗಳಲ್ಲಿ ಚಾಪು ಮೂಡಿಸುತ್ತಿದೆ. ಜನರಿಗೆ ನೂರು ದಿನಗಳ ಕೂಲಿ ನೀಡಿ ಆರ್ಥಿಕ ಸಹಾಯ ಮಾಡುತ್ತಿದೆ. ಗ್ರಾಮ ಪಂಚಾಯತಿಗಳ ಬಲ ನೀಡುವ ನಿಟ್ಟಿನಲ್ಲಿ, ಈ ಯೋಜನೆ ಆರ್ಥಿಕ ಹಕ್ಕು ಪಂಚಾಯತಿಗಳಿಗೆ ನೀಡಲಾಗಿದೆ. ಈಗ ಇದೇ ಈ ಯೋಜನೆಗೆ ಮುಳುವಾಗಿದೆ. ನರೇಗಾ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ, ನೂರಾರು ಕೋಟಿ ಅನುದಾನದಲ್ಲಿ ಅರ್ಧ, ಪಂಚಾಯತಿ ಪಿಡಿಓ , ಅಧ್ಯಕ್ಷ, ಸದಸ್ಯರ ಪಾಲಾಗುತ್ತಿದೆ. ಇದಕ್ಕೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಬದೂ ನಿರ್ಮಾಣ ಕಾಮಗಾರಿಯಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರ ಸ್ಪಷ್ಟ ಉದಾಹರಣೆ…
ರೈತರಿಗೆ ಬೇಸಿಗೆ ಕಾಲದಲ್ಲಿ ನೀರಿನ ಅನುಕೂಲಕ್ಕಾಗಿ, ಅಂತರ್ಜಲ ಮಟ್ಟ ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರೈತರ ಜಮೀನಿನಲ್ಲಿ ಬದೂ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಸರ್ಕಾರ ನಿಯಮಗಳಂತೆ ಬದೂ ನಿರ್ಮಾಣ ಮಾಡಿಕೊಳ್ಳಲು ಸುಮಾರು 30 ಸಾವಿರ ಖರ್ಚಾಗಲಿದೆ. ಇದನ್ನು ನರೇಗಾ ಕಾರ್ಮಿಕರಿಂದ ಕಾಮಗಾರಿ ಮಾಡಿಸಬೇಕು.. ಈಗ ಇದರಲ್ಲೆ ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿ ಬಂದಿದೆ.. ಕಲಘಟಗಿ ತಾಲ್ಲೂಕಿನ ಅಧಿಕೃತ ದಾಖಲಾತಿಗಳ ಪ್ರಕಾರ 2023-24, 2024-25,2025-26 ಆರ್ಥಿಕ ವರ್ಷದಲ್ಲಿ ಸುಮಾರು 9 ಕೋಟಿ ಅನುದಾನದಲ್ಲಿ 2,813 ಬದು ನಿರ್ಮಾಣ ಆಗಿವೆ. ಆದರೆ ಈ ಬದುಗಳು ಕೆವಲ ದಾಖಲಾತಿ ಪುಸ್ತಕದಲ್ಲಿವೆ ಹೊರತು. ರೈತರ ಜಮೀನಿನಲ್ಲಿ ಇಲ್ಲ. ಬಹುತೇಕ ಬದುಗಳು ನಿರ್ಮಾಣವಾಗದೆ, ನಕಲಿ ದಾಖಲೆಗಳ ಸೃಷ್ಟಿಯಾಗಿ, ಹಣದ ರೂಪದಲ್ಲಿ ಅಧಿಕಾರಿಗಳ ಸ್ಥಳೀಯ ಜನಪ್ರತಿನಿಧಿಗಳ ಜೇಬಿಗೆ ಸೇರಿದೆ ಎನ್ನುವ ಆರೋಪ ಕೇಳಿ ಬಂದಿದೆ
ಇನ್ನೂ ಈ ಬದೂ ನಿರ್ಮಾಣ ಭ್ರಷ್ಟಾಚಾರದ ಆರೋಪದ ಮೊಲದ ಸ್ಥಾನದಲ್ಲಿರುವುದೆ ಕಲಘಟಗಿ ತಾಲ್ಲೂಕಿನ ಗಳಗಿಹುಲಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಐದು ವರ್ಷಗಳ ಅವಧಿಯಲ್ಲಿ 4 ಕೋಟಿ ವೆಚ್ಚದಲ್ಲಿ, 1,118 ಕ್ಕೂ ಅಧಿಕ ಬದುಗಳ ನಿರ್ಮಾಣ ಮಾಡಲಾಗಿದೆ. ಆದರೆ ಇದರಲ್ಲಿ ಅಧಿಕೃತವಾಗಿ ನಿರ್ಮಾಣವಾಗಿರುವ ಬದುಗಳು ಬೆರೆಳೆಣಿಕೆಯಷ್ಟು.. ಇನ್ನೂಳಿದ ಬದುಗಳನ್ನು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ, ಆಗದೆ ಇರುವ ಕಾಮಗಾರಿ, ಆಗಿದೆ ಎಂದು ಬಿಂಬಿಸಿ ಕೋಟಿ ಕೋಟಿ ಹಣ ಲೂಟಿ ಹೊಡೆದಿರುವ ಆರೋಪ ಆಗಿನ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷ, ಸದಸ್ಯರು ಮತ್ತು ಸಿಬ್ಬಂದಿ ಮೇಲೆ ಕೇಳಿ ಬಂದಿದೆ..ಸ್ವತಃ ಈ ಬಗ್ಗೆ ಗಳಗಿಹುಲಕೊಪ್ಪ ಗ್ರಾಮದ 70ಕ್ಕೂ ಅಧಿಕ ಗ್ರಾಮಸ್ಥರು ಜಿಲ್ಲಾಪಂಚಾತಿಗೆ ದೂರು ನೀಡಿದ್ದರು.. ಹೀಗಾಗಿ ಧಾರವಾಡ ಜಿಲ್ಲಾ ಪಂಚಾಯತಿ ಓಂಬುಡ್ಸಪರ್ಸನ್ ಮೂಲಕ ವಿಚಾರಣೆ ನಡೆಸಿ, ಈ ಪಂಚಾಯತಿಯಲ್ಲಿ ನರೇಗಾ ಯೋಜನೆಯಡಿ ಲೋಪದೋಷಗಳು ಕಂಡುಬಂದಿವೆ ಅಂತ ವರದಿ ನೀಡಿದೆ. ಅಲ್ಲದೆ ಸಿಬ್ಬಂದಿಗೆ ದಂಡ ಸಹಿತ ಎಚ್ಚರಿಕೆ ನೀಡಿದೆ.. ಇನ್ನೂ ವಿಪರ್ಯಾಸವೆಂದರೆ, ಲಿಖಿತ ದೂರು ನೀಡಿದ 70 ಜನ,ಓಂಬುಡ್ಸಪರ್ಸನ್ ವಿಚಾರಣೆ ಹಾಜರಾಗಿಲ್ಲ. ಹೀಗಾಗಿ ಕಮೀಟಿ ಬಿ ರಿಪೋರ್ಟ್ ಹಾಕಿದೆ. ಇದರಿಂದ ಹಿಂದೆ ಕೆಲ ಪ್ರಭಾವಿಗಳ, ಹಾಗೂ ಕೆಲ ಪಿಡಿಓಗಳ ಕೈವಾಡವಿದೆ ಎಂಬ ಅನುಮಾನ ಕೇಳಿಬಂದಿದೆ.
ಒಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಮತ್ತು ಗ್ರಾಮ ಪಂಚಾಯತಿ ಅಭಿವೃದ್ಧಿಗಾಗಿ ಕೋಟಿ ಕೋಟಿ ಅನುದಾನ ನೀಡುತ್ತಿದೆ. ಆದರೆ ಕೆಲ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಕಾಮಗಾರಿ ಅಭಿವೃದ್ಧಿ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಹೊಡೆಯುತ್ತಿರುವುದು ವಿಪರ್ಯಾಸ ಸಂಗತಿ.. ಇನ್ನೂ ಪ್ರಕರಣದ ತನಿಖೆಯ ಸಮಯದಲ್ಲಿ ದೂರುದಾರು ಯಾಕೆ ವಿಚಾರಣೆ ಬರಲಿಲ್ಲ, ಅವರ ಮೇಲೆ ಪ್ರಭಾವ ಬೀರಿದವರಾರು ಎನ್ನುವ ಸತ್ಯ ತನಿಖೆ ಮೂಲಕ ಹೊರಬರಬೇಕಾಗಿದೆ.
-ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ