Beauty tips:
ನಿಮ್ಮ ಚರ್ಮ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ,ಅದಕ್ಕೆ ಪರಿಹಾರ ಕಂಡು ಕೊಳ್ಳಲು ವೈದ್ಯರ ಮೊರೆಹೋಗಿ ಸಾವಿರ ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ ಟ್ರೀಟ್ಮೆಂಟ್ ತಗೊಂಡ್ರು ಸ್ವಲ್ಪಕಾಲ ಮಾತ್ರ ಅದು ಉಳಿಯುತ್ತದೆ .ಆದರೆ ನಾವು ಹೇಳುವ ಈ ಚಿಕಿತ್ಸೆ ಒಮ್ಮೆ ಟ್ರೈ ಮಾಡಿನೋಡಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ .ನಿಮ್ಮ ಚರ್ಮ ಬ್ರೈಟ್ ಆಗಿ ಕಾಂತಿಯುತವಾಗಿ ಚಂದ್ರನಂತೆ ಹೊಳೆಯುತ್ತದೆ .ನಿಮ್ಮ ಚರ್ಮ ನಳನಳಿಸುವಂತೆ ಬೆಳ್ಳಗಾಗುತ್ತದೆ, ನಾವು ಹೇಳುವ ಈ ಟಿಪ್ಸ್ಅನ್ನು ಫಾಲೋ ಮಾಡಿದರೆ, ನಿಮಗೆ ಯಾವುದೇ ರೀತಿಯಾದ ಸೌಂದರ್ಯದ ಚಿಕಿತ್ಸೆ ಅವಶ್ಯಕತೆ ಇಲ್ಲದೆ, ಬ್ಯೂಟಿ ಪಾರ್ಲರ್ ಗೆ ಹೋಗುವ ಅವಶ್ಯಕತೆ ಇಲ್ಲದೆ ಕಾಂತಿಯುತವಾದ ಅದ್ಭುತವಾದ ಚರ್ಮವನ್ನು ನೀವು ಪಡೆಯಬಹುದು. ಆಗಾದರೆ ಈ ಚಿಕಿತ್ಸೆ ಯಾವುದು ಎಂದು ನೋಡೋಣ ಬನ್ನಿ .
ಮೊದಲಿಗೆ ನಿಮ್ಮ ಚರ್ಮ ಕಪ್ಪಾಗಲು ಹಾಗೂ ಚರ್ಮದ ಸಮಸ್ಯೆ ಬರಲು ಕಾರಣವೇನು ಎಂದು ನೀವು ತಿಳಿದುಕೊಳ್ಳಬೇಕು. ಸಾಮಾನ್ಯವಾಗಿ ಚರ್ಮ ಸಮಸ್ಯೆಗೆ ಮೂಲ ಕಾರಣ ಅಜೀರ್ಣವೆನ್ನಬಹುದು ,ಅಜೀರ್ಣದಿಂದ ನಿಮ್ಮ ದೇಹದಲ್ಲಿ ಪಿತ್ತವೃದ್ದಿಯಾಗುತ್ತದೆ, ಪಿತ್ತದಿಂದ ಚರ್ಮ ಕಾಂತಿಯನ್ನು ಕಳೆದುಕೊಳ್ಳುತದೆ. ಚರ್ಮದಲ್ಲಿ ಡ್ರೈನೆಸ್ ಹೆಚ್ಚಾಗುತ್ತದೆ ,ಡ್ರೈನೆಸ್ ಯಿಂದ ಚರ್ಮದ ತೇಜಸ್ಸು ಕಡಿಮೆಯಾಗುತ್ತಾ ಬರುತ್ತದೆ .ಆದ್ದರಿಂದ ಪಿತ್ತವನ್ನು ಬ್ಯಾಲೆನ್ಸ್ ಮಾಡಿದರೆ ನಿಮ್ಮ ಚರ್ಮದ ಹೊಳಪು ಚನ್ನಗಿರುತ್ತದೆ .ಆದರೆ ಪಿತ್ತವನ್ನು ಹೇಗೆ ಬ್ಯಾಲೆನ್ಸ್ ಮಾಡಬೇಕು ಎಂದು ತಿಳಿದು ಕೊಳ್ಳೋಣ .
ಒಂದು ಗ್ಲಾಸ್ ಬಿಸಿ ನೀರಿನಲ್ಲಿ ಒಂದು ಚಮಚ ತುಪ್ಪ ಬೆರೆಸಿ ಕುಡಿಯುವುದರಿಂದ ಹಾಗೂ ನೆನೆಸಿರುವ ಬಾದಾಮಿಯನ್ನು ಸೇವನೆ ಮಾಡುವುದರಿಂದ ನಿಮಗೆ ಅದ್ಭುತವಾದ ಪರಿಣಾಮ ಸಿಗುತ್ತದೆ .ಹಾಗೂ ಇದರ ಜೊತೆಗೆ ,ಕರಳು ಶುದ್ದಿಯಾಗಲು ಮನೆಯಲ್ಲೆ 2ಸ್ಪೂನ್ ನಿಂಬೆಹಣ್ಣಿನರಸ ,1ಸ್ಪೊನ್ ಹಸಿಶುಂಠಿಯರಸ ,ಸ್ವಲ್ಪ ಹಿಂಗು 3ರನ್ನು ಬೆಚ್ಚಗೆಯ ನೀರಿನಲ್ಲಿ ಮಿಕ್ಸ್ ಮಾಡಿ ಮುಂಜಾನೆ ಕಾಲಿ ಹೊಟ್ಟೆಯಲ್ಲಿ ಸೇವಿಸಬೇಕು , ಹೀಗೆ ಕುಡಿಯುವುದರಿಂದ ಟಾಕ್ಸಿನ್ಸ್ ನಿಮ್ಮ ದೇಹದಿಂದ ಹೊರಗಡೆ ಬರುತ್ತದೆ. ಇದರ ಜೊತೆಗೆ ಬೆಟ್ಟದ ನೆಲ್ಲಿಕಾಯಿ ಜ್ಯೂಸು ,ಸೇವಿಸುವುದರಿಂದ ನಿಮ್ಮ ಬಾಡಿ ಡಿಟಾಕ್ಸಿಫೈ ಆಗುತ್ತದೆ. ಮತ್ತು ನಿಮ್ಮ ಸ್ಕಿನ್ ಹೊಳೆಯುತ್ತದೆ. ಇವೆಲ್ಲವೂ ಶರೀರದ ಒಳಗಡೆಯಿಂದ ಶುದ್ದಿ ಮಾಡುತ್ತದೆ .ನಮ್ಮ ಚರ್ಮ ಚನ್ನಗಿರಬೇಕು ಎಂದರೆ ಮೊದಲು ನಾವು ಆಂತರಿಕವಾಗಿ ಶುದ್ದಿ ಗೊಳಿಸುವುದು ಮುಖ್ಯವಾಗಿರುತ್ತದೆ. ನಂತರ ನಿಮ್ಮ ಚರ್ಮಕ್ಕೆ ಫೇಸ್ ಪ್ಯಾಕನ್ನು ಬಳಸಬೇಕು .
ಈ ಫೇಸ್ ಪ್ಯಾಕನ್ನು ಮನೆಯಲ್ಲೇ ಹೇಗೆ ತಯಾರಿಸಬೇಕು ಎಂದು ತಿಳಿದು ಕೊಳ್ಳೋಣ.
ಪೋಲಿಷ್ ಆಗದೆ ಇರುವ ಅಕ್ಕಿಯ ಅನ್ನ ಕುದಿಯುತ್ತಿರುವಾಗ ಅದರ ಮೇಲೆ ಗಂಜಿಲೇಪಲ ವಾಗುತ್ತದೆ. ಆ ಗಂಜಿಯನ್ನು 200ಗ್ರಾಂ ತೆಗೆದು ಕೊಳ್ಳಬೇಕು ,ಅದರ ಜೊತೆ 200ಗ್ರಾ೦ ಹಾಲನ್ನು ಸೇರಿಸಬೇಕು ,ಎರಡು ಮಿಕ್ಸ್ ಮಾಡಿ ನಿದಾನವಾಗಿ ಮುಖಕ್ಕೆ ಮಸಾಜ್ ಮಾಡುಬೇಕು ಹೀಗೆ ಮಸಾಜ್ ಮಾಡಿ 1ಗಂಟೆ ಹಾಗೆಯೆ ಬಿಡಬೇಕು ನಂತರ ತಣ್ಣಗಿರುವ ನೀರಿನಿಂದ ಮುಖವನ್ನು ತೊಳೆಯಬೇಕು .ಇದು ಚರ್ಮದ ಆರೋಗ್ಯಕ್ಕೆ ಹಾಗೂ ಚರ್ಮದ ವೃದ್ಧಿಗೆ ಸೌಂದರ್ಯ ಚಿಕಿತ್ಸೆಯಾಗಿ ಕೆಲಸ ಮಾಡುತ್ತದೆ .
ಪ್ಲೇಟ್‌ಲೆಟ್ ಅಂದರೆ ಏನು…? ಪ್ಲೇಟ್‌ಲೆಟ್‌ಗಳು ಏಕೆ ಕಡಿಮೆಯಾಗುತ್ತದೆ… ?