Recipe: ಬೇಕಾಗುವ ಸಾಮಗ್ರಿ: 2 ಕಪ್ ಮೈದಾ, 1 ಕಪ್ ರವೆ, 2ರಿಂದ 3 ಈರುಳ್ಳಿ, 1 ಕಪ್ ಶೇಂಗಾ,1 ಸ್ಪೂನ್ ಧನಿಯಾ, ಸ್ವಲ್ಪ ಕರಿಬೇವು, 5ರಿಂದ 6 ಎಸಳು ಬೆಳ್ಳುಳ್ಳಿ, ಸಣ್ಣ ತುಂಡು ಶುಂಠಿ, 3ರಿಂದ 4 ಹಸಿಮೆಣಸು, ಅವಶ್ಯಕತೆ ಇದ್ದರೆ ಸೋಡಾ, 3ರಿಂದ 4 ಸ್ಪೂನ್ ತುಪ್ಪ ಅಥವಾ ಬಿಸಿ ಎಣ್ಣೆ, ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ಮಿಕ್ಸಿ ಜಾರ್‌ಗೆ ಧನಿಯಾ, ಬೆಳ್ಳುಳ್ಳಿ, ಹಸಿಮೆಣಸು, ಶುಂಠಿ ಹಾಕಿ ತರಿ ತರಿಯಾಗಿ ಪುಡಿ ಮಾಡಿ. 1 ಮಿಕ್ಸಿಂಗ್ ಬೌಲ್‌ನಲ್ಲಿ ಮೈದಾ, ರವೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಕುಟ್ಟಿ ಪುಡಿ ಮಾಡಿದ ಶೇಂಗಾ, ಕರಿಬೇವು, ಸೋಡಾ, ತುಪ್ಪ ಪುಡಿ ಮಾಡಿದ ಮಸಾಲೆ, ಉಪ್ಪು ಸೇರಿಸಿ, ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ.
ಬಳಿಕ ವಡೆ ರೀತಿ ಶೇಪ್ ನೀಡಿ, ಕಾದ ಎಣ್ಣೆಯಲ್ಲಿ ಮದ್ಯಮ ಉರಿಯಲ್ಲಿ ಕರಿದರೆ, ಮದ್ದೂರು ವಡೆ ರೆಡಿ. ಕಾಯಿ ಚಟ್ನಿ ಇದಕ್ಕೆ ಉತ್ತಮ ಕಾಂಬಿನೇಷನ್. ಚಟ್ನಿ ಇ್ಲಲದೆಯೂ ಚಹಾದ ಜತೆ ಸೇವನೆ ಮಾಡಬಹುದು.




