ಎಲ್ಲರಿಗೂ ಇಷ್ಟವಾಗುವ ಅಮೆರಿಕನ್ ಸ್ವೀಟ್ ಕಾರ್ನ್‌ನಿಂದ ಸಲಾಡ್ ಮಾಡಿದ್ರೆ, ಸಖತ್ ಟೇಸ್ಟಿಯಾಗಿರತ್ತೆ. ಎಲ್ಲರೂ ಇಷ್ಟಪಟ್ಟು ತಿಂತಾರೆ. ಹಾಗಾದ್ರೆ ಅಮೆರಿಕನ್ ಸ್ವೀಟ್ ಕಾರ್ನ್ ಸಲಾಡ್ ಮಾಡೋದು ಹೇಗೆ..? ಅದಕ್ಕೆ ಬೇಕಾಗು ಸಾಮಗ್ರಿಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಒಂದು ಬೌಲ್ ಬೇಯಿಸಿದ ಅಮೆರಿಕನ್ ಸ್ವೀಟ್ ಕಾರ್ನ್, ಒಂದು ಸೌತೇಕಾಯಿ, ಒಂದು ಟೊಮೆಟೋ, ಒಂದು ಕ್ಯಾರೆಟ್, ಒಂದು ಈರುಳ್ಳಿ, ಒಂದು ಕ್ಯಾಪ್ಸಿಕಂ, ಒಂದು ಹಸಿ ಮೆಣಸಿನ ಕಾಯಿ, ಕೊಂಚ ಕೊತ್ತಂಬರಿ ಸೊಪ್ಪು, ಎರಡು ಸ್ಪೂನ್ ನಿಂಬೆ ರಸ, ಅರ್ಧ ಚಮಚ ಬ್ಲ್ಯಾಕ್ ಪೆಪ್ಪರ್ ಪೌಡರ್, ಅರ್ಧ ಚಮಚ ಚಾಟ್ ಮಸಾಲ ಪೌಡರ್, ಒಂದು ಸ್ಪೂನ್ ಆಲಿವ್ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು. ಇವಿಷ್ಟು ಸಲಾಡ್ ಮಾಡಲು ಬೇಕಾಗುವ ಸಾಮಗ್ರಿ.
ಒಂದು ಬೌಲ್‌ಗೆ ಬೇಯಿಸಿದ ಅಮೆರಿಕನ್ ಸ್ವೀಟ್ ಕಾರ್ನ್, ಸಣ್ಣಗೆ ಹೆಚ್ಚಿದ, ಈರುಳ್ಳಿ, ಟೊಮೆಟೋ, ಸೌತೇಕಾಯಿ, ಕ್ಯಾಪ್ಸಿಕಂ ಹಾಕಿ, ಮಿಕ್ಸ್ ಮಾಡಿ. ಇದಕ್ಕೆ ತುರಿದ ಕ್ಯಾರೆಟ್, ಒಂದು ಹಸಿಮೆಣಸಿನಕಾಯಿ, ಸಣ್ಣಗೆ ಕತ್ತರಿಸಿದ ಕೊತ್ತೊಂಬರಿ ಸೊಪ್ಪು, ನಿಂಬೆ ರಸ, ಪೆಪ್ಪರ್ ಪೌಡರ್, ಚಾಟ್ ಮಸಾಲ ಪೌಡರ್, ಆಲಿವ್ ಎಣ್ಣೆ, ಮತ್ತು ಉಪ್ಪು ಸೇರಿಸಿ ಮಿಕ್ಸ್ ಮಾಡಿದ್ರೆ, ಅಮೆರಿಕನ್ ಸ್ವೀಟ್ ಕಾರ್ನ್ ಸಲಾಡ್ ರೆಡಿ.